ಶಿವಮೊಗ್ಗ ಮದುವೆಗೆ ಬೀಗರು ಬರುತ್ತಿದ್ದಾರೆ ದಾರಿಬಿಡಿ...


ಬೆಂಗಳೂರು : ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶಿವಮೊಗ್ಗ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ(ಡಿ.23)ದಲ್ಲಿ ಭಾಗವಹಿಸುವುದಾಗಿ ಕಡೆಗೂ ಘೋಷಿಸಿದ್ದಾರೆ.

ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲರೊಂದಿಗಿನ ಭಿನ್ನಾಭಿಪ್ರಾಯದ ಮಧ್ಯೆಯೂ, ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವೆ. ಸಾಮಾನ್ಯ ಪ್ರಜೆಯಾಗಿ, ಕುವೆಂಪು ಅವರಿಗೆ ಗೌರವ ಸೂಚಿಸಿ ಅಲ್ಲಿಗೆ ತೆರಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳನ್ನು ಪ್ರೀತಿಯಿಂದ ಆಹ್ವಾನಿಸಿಲ್ಲ ಎಂಬ ವಿವಾದ ಸೃಷ್ಟಿಯಾಗಿತ್ತು. ಜೆಡಿಎಸ್‌ ಕಾರ್ಯಕರ್ತರು ಚಂಪಾ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ, ಸಮ್ಮೇಳನದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಘಟನೆ ಬಗ್ಗೆ ಚಂಪಾ, ತಮ್ಮದೇ ಧಾಟಿಯಲ್ಲಿ ಉತ್ತರವನ್ನೂ ನೀಡಿದ್ದರು.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+