ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

73ನೇ ಸಮ್ಮೇಳನ ಶುರು... ಶಿವಮೊಗ್ಗದಿಂದ ಪ್ರತ್ಯಕ್ಷ ವರದಿ

By Staff
|
Google Oneindia Kannada News


ನುಡಿಹಬ್ಬಕ್ಕೆ ರಾಷ್ಟ್ರಕವಿಯಿಂದ ವಿಧ್ಯುಕ್ತ ಚಾಲನೆ.. ತುಂಗೆಯ ತೀರದಲ್ಲಿ ಕನ್ನಡ ಘಮಲು...

Sahitya Prarishath President Champa, Poet Nisar Ahmed and other in the processionಶಿವಮೊಗ್ಗ : ಸಹ್ಯಾದ್ರಿಯ ಸೀಮೆಯಲ್ಲೀಗ ಕನ್ನಡ ಘಮಲು. ನಗರದ ನೆಹರೂ ಕ್ರೀಡಾಂಗಣದಲ್ಲಿ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಷ್ಟ್ರಕವಿ ಡಾ.ಜಿ.ಎಸ್‌.ಶಿವರುದ್ರಪ್ಪ ಗುರುವಾರ ಬೆಳಗ್ಗೆ ಉದ್ಘಾಟಿಸಿದರು.

ನೆರೆದಿದ್ದ್ದ ಸಹಸ್ರಾರು ಕನ್ನಡಿಗರು ಚಪ್ಪಾಳೆ ಮೂಲಕ ಹರ್ಷವ್ಯಕ್ತಪಡಿಸಿದರು. ಕನ್ನಡಾಭಿಮಾನಿಗಳ ಕಲರವದಿಂದ ರಾಷ್ಟ್ರಕವಿ ಮೂಕ ವಿಸ್ಮಿತರಾದರು. ನಾಡಿನ ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯ ಅರಿವಿನ ಮೂಲಕ, ವಿಕ್ರಾಂತ ಕರ್ನಾಟಕ ಕಟ್ಟಲು ಮುಂದಾಗಬೇಕು ಎಂದವರು ಕರೆ ನೀಡಿದರು.

ಸ್ವಾಗತ ಭಾಷಣ ನೆರವೇರಿಸಿದ ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಗೊಂದಲ ವಿವಾದಗಳು ಎಲ್ಲೆಡೆ ಇದ್ದೇ ಇರುತ್ತವೆ. ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಕಂಡುಬಂದಿದ್ದ ಕಪ್ಪು ಮೋಡಗಳು ಕರಗಿವೆ. ಮುಖ್ಯಮಂತ್ರಿ ಜೊತೆ ಇಂದು ಬೆಳಗ್ಗೆ ಮಾತನಾಡಿ, ಮನವೊಲಿಸಿದ್ದೇನೆ. ಅವರು ಸಮ್ಮೇಳನಕ್ಕೆ ಬರಲು ಒಪ್ಪಿದ್ದಾರೆ ಎಂದು ತಿಳಿಸಿದರು.

ಪ್ರಾಸ್ತಾವಿಕ ಭಾಷಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಪಾಟೀಲ, ರಾಜಕಾರಣಿಗಳ ನಾಡು-ನುಡಿ ಬಗೆಗಿನ ನಿರ್ಲಕ್ಷ್ಯವನ್ನು ಕಟುವಾಗಿ ಕುಟುಕಿದರು. ಈವರೆಗೆ ಕರ್ನಾಟಕ ಸರ್ಕಾರಗಳನ್ನು ಕಂಡಿದ್ದೇವೆಯೇ ಹೊರತು, ಕನ್ನಡ ಸರ್ಕಾರಗಳನ್ನು ನಾವು ಕಾಣಲಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ ನಮ್ಮ ನಾಯಕರಲ್ಲಿದೆ. ಆದರೆ ಈ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಒಂದಷ್ಟು ಕನ್ನಡ ಪರ ಕೆಲಸಗಳು ನಡೆದಿವೆ ಎಂದರು.

ಬಹುವರ್ಷಗಳ ನಂತರ ರಾಷ್ಟ್ರಕವಿ ಪ್ರಶಸ್ತಿಗೆ ಅರ್ಹರನ್ನು ಸರ್ಕಾರ ಆಯ್ಕೆ ಮಾಡಿದೆ. ಈ ಸಂಭ್ರಮದ ಮಧ್ಯೆ, ಮೊದಲ ಬಾರಿಗೆ ಅಲ್ಪಸಂಖ್ಯಾತ ಕೋಮಿಗೆ ಸೇರಿದ ಕವಿಯಾಬ್ಬರಿಗೆ ಸಮ್ಮೇಳನಾಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಈ ಎಲ್ಲಾ ಸಡಗರಗಳನ್ನು ಒಳಗೊಂಡಿರುವ ಶಿವಮೊಗ್ಗ ಸಮ್ಮೇಳನ, ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಶಿವಮೊಗ್ಗ, ಶಿಕಾರಿಪುರ, ಶಿವರುದ್ರಪ್ಪ -ಹೀಗೆ ಮೂರು ‘ಶಿ’ ಕಾರಗಳ ಸಂಗಮ ಇಲ್ಲಿ ನಡೆದಿದೆ ಎಂದು ಚಂಪಾ ವರ್ಣಿಸಿದರು.

ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂಬ ತಮ್ಮ ಕವನದ ಸಾಲುಗಳನ್ನು ಚಂಪಾ ವಾಚಿಸಿ, ನೆರೆದ ಮಂದಿಯಲ್ಲಿ ರೋಮಾಂಚನ ಸೃಷ್ಟಿಸಿದರು.

ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.ಶಾಂತರಸ, ಸಂಸದ ಎಸ್‌.ಬಂಗಾರಪ್ಪ ಮತ್ತಿತರರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಸಮ್ಮೇಳನಾಧ್ಯಕ್ಷ ನಿಸಾರ್‌ ಅಹಮದ್‌ ತಮ್ಮ ಭಾಷಣದಲ್ಲಿ, ಕನ್ನಡ ಪ್ರೇಮವನ್ನು ಪದಪದಗಳಲ್ಲಿ ಬಿಚ್ಚಿಟ್ಟರು.

ಇನ್ನಿತರ ವಿಶೇಷಗಳು :

  • 73 ಮಂದಿ ಹಿರಿಕಿರಿಯ ಗಾಯಕರಿಂದ ನಾಡಗೀತೆ.
  • ಐ.ಎಂ. ವಿಠ್ಠಲಮೂರ್ತಿ ಅವರಿಂದ ನಿಸಾರ್‌ ಬಗೆಗಿನ ಸಿ.ಡಿ. ಬಿಡುಗಡೆ.
  • ಸ್ಮರಣ ಸಂಚಿಕೆ ಬಿಡುಗಡೆ.
  • ಚಿತ್ರಕಲಾ ಪ್ರದರ್ಶನ, ಪುಸ್ತಕ ಮಳಿಗೆಗಳ ಉದ್ಘಾಟನೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X