ನಾಲ್ಕು ದಿನಗಳ ನಂತರ ವಾಸ್ತವ ಸತ್ಯ ಬಹಿರಂಗ -ಚಂಪಾ
ಶಿವಮೊಗ್ಗ : 73ನೇ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಎದ್ದಿರುವ ವಿವಾದಗಳಿಗೆ, ಸಮ್ಮೇಳನ ಮುಗಿದ ನಂತರ ಉತ್ತರ ನೀಡುವೆ ಎಂದು ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳ ನಾಯಕರಿಬ್ಬರ ನಡುವಿನ ಶೀತಲ ಸಮರವೇ, ಸಮ್ಮೇಳನ ಕುರಿತು ಎದ್ದಿರುವ ಅಪಸ್ವರಗಳಿಗೆ ಕಾರಣ ಎಂದು ದೂರಿದರು.
ಸಮ್ಮೇಳನದ ಬಗ್ಗೆ ಗೊಂದಲ ಉಂಟುಮಾಡುತ್ತಿರುವವರನ್ನು ತರಾಟೆಗೆ ತೆಗೆದುಕೊಂಡ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಮೇಲೆ ಆರೋಪ ಮಾಡಿದರು.
ಸಮ್ಮೇಳನ ಸುಸೂತ್ರವಾಗಿ ನಡೆಯಲಿದ್ದು, ವಿನಾಕಾರಣ ಉಂಟಾದ ವಿವಾದದ ಹಿಂದಿನ ಸತ್ಯವನ್ನು ಸಮ್ಮೇಳನದ ನಂತರ ಬಹಿರಂಗಪಡಿಸುವೆ ಎಂದು ಘೋಷಿಸಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications