ಗೌರಿ ಲಂಕೇಶ್ ಸೇರಿದಂತೆ ನಕ್ಸಲ್ ಬೆಂಬಲಿಗರಿಗೆ ಮಣೆ
ಶಿವಮೊಗ್ಗ : ನಕ್ಸಲ್ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಗೌರಿ ಲಂಕೇಶ್, ಕೆಲವು ಪ್ರಾಧ್ಯಾಪಕರು ಮತ್ತು ಸಾಹಿತಿಗಳನ್ನು ಸಮ್ಮೇಳಕ್ಕೆ ಆಹ್ವಾನಿಸಿರುವುದು, ಅಲ್ಲಿನ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿರುವುದು ಎಬಿವಿಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ.
ಕಸಾಪ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಸಾಹಿತ್ಯ ಸಮ್ಮೇಳನದಲ್ಲಿ ನಕ್ಸಲ್ ಬೆಂಬಲಿಗರು ಭಾಗವಹಿಸಲು ಅವಕಾಶ ನೀಡಿದ್ದಾರೆಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು, ಸಮ್ಮೇಳದ ಅಂಗಳದಲ್ಲಿಯೇ ಬುಧವಾರ ಪ್ರತಿಭಟನೆ ನಡೆಸಿದರು.
ನಕ್ಸಲ್ ಬೆಂಬಲಿಗರನ್ನು ಸಮ್ಮೇಳನದಿಂದ ದೂರ ಇಡಬೇಕೆಂದು ಕೆಲವರು ಬೇಡಿಕೆ ಇಟ್ಟಿದ್ದಾರೆ. ನಕ್ಸಲ್ ಬೆಂಬಲಿಗರು ಯಾರೆಂದು ನಮಗೆ ಗೊತ್ತಿಲ್ಲ. ಸಮ್ಮೇಳನದಲ್ಲಿ ಭಾಗವಹಿಸುವವರನ್ನು ಬೇಡವೆನ್ನಲು ನಾನ್ಯಾರು ಎಂದು ಚಂಪಾ ಪ್ರತಿಕ್ರಿಯಿಸಿದ್ದಾರೆ.
ಚಂಪಾ ಅವರ ಹೇಳಿಕೆ ಖಂಡಿಸಿ ಪ್ರತಿಭಟನೆ ಮುಂದುವರಿಸಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications