ಉದಯ್‌ ಜಾದೂಗಾರ್‌ ಯಕ್ಷಿಣಿ ಚೀಲದಿಂದ 3 ಪುಸ್ತಕ!


ಶಿವಮೊಗ್ಗ : ಯಕ್ಷಿಣಿ ಮೂಲಕ ಮೋಡಿ ಮಾಡುವ ಉದಯ್‌ ಜಾದೂಗಾರ್‌ , ತಮ್ಮ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಸುಡೋಕು ಕಲಿಯಿರಿ, ನಾ ಮೆಚ್ಚಿದ ಜೋಕುಗಳು-2 ಮತ್ತು ಹಣ, ಯಶಸ್ಸು, ಆರೋಗ್ಯ, ಮನಃಶಾಂತಿ ಗಳಿಸುವುದು ಹೇಗೆ?-ಈ ಮೂರು ಪುಸ್ತಕಗಳು, ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಡಿ.20ರಂದು ಬಿಡುಗಡೆಯಾಗಲಿವೆ. ನವಕರ್ನಾಟಕ ಪ್ರಕಾಶನ ಪುಸ್ತಕಗಳನ್ನು ಪ್ರಕಟಿಸಿದ್ದು, ಕವಿ ಕೆ.ಎಸ್‌. ನಿಸಾರ್‌ ಅಹಮದ್‌ ಬಿಡುಗಡೆ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ಸಾರಸ್ವತ ಲೋಕದ ನವರತ್ನಗಳು ಶೀರ್ಷಿಕೆಯಡಿಯಲ್ಲಿ ಒಂಭತ್ತು ಬರಹಗಾರರ ಭಾವಚಿತ್ರಗಳು ಲೋಕಾರ್ಪಣೆಗೊಳ್ಳಲಿವೆ. ಉದಯ್‌ ಜಾದೂಗಾರ್‌ ಕ್ಯಾಮೆರಾ ಕ್ಲಿಕ್ಕಿಸಿದ ಈ ಭಾವಚಿತ್ರಗಳು, ಸಾಹಿತ್ಯಾಭಿಮಾನಿಗಳ ಸಂಗ್ರಹಕ್ಕೆ ಹೇಳಿಮಾಡಿಸಿದಂತಿವೆ.

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+