• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಕಲಿಯಲು ಆಸಕ್ತಿ ಇದೆಯೇ? -ನಿಮ್ಮ ನೆರವಿಗೆ ನಾವಿದ್ದೇವೆ!

By Staff
|

ಕನ್ನಡ ಕಲಿಯಲು ಆಸಕ್ತಿ ಇದೆಯೇ? -ನಿಮ್ಮ ನೆರವಿಗೆ ನಾವಿದ್ದೇವೆ!

ಯಾವುದೇ ಒಂದು ಸಂಸ್ಕೃತಿಯ ಅಭಿವೃದ್ಧಿ ಅಲ್ಲಿನ ಭಾಷೆಯ ಮೇಲೆ ಅವಲಂಬಿಸಿರುತ್ತದೆ. ಭಾಷೆಯನ್ನು ಉಳಿಸದಿದ್ದರೆ ಸಂಸ್ಕೃತಿ ತಾನೇ ತಾನಾಗಿ ನಾಶವಾಗುತ್ತದೆ. ಈ ನಿಟ್ಟಿನಲ್ಲಿ ವಲಸಿಗರಿಗೆ ಕನ್ನಡ ಕಲಿಸುವ ಯತ್ನ ನಮ್ಮದು. ವಿವರಗಳಿಗಾಗಿ ಲೇಖನ ಓದಿ.

  • ಅನಂತ ಜೋಯಿಸ್‌, ಬೆಂಗಳೂರು

ananthajoisbc@yahoo.com

ಈಗ ಕರ್ನಾಟಕದಲ್ಲಿ ಕನ್ನಡ ಭಾಷೆ ನಶಿಸಿ ಹೋಗುವ ಭೀತಿಯಲ್ಲಿದೆ. ಹಾಗೇನಾದರೂ ಆದಲ್ಲಿ ನಾವು ನಮ್ಮ ಸಂಸ್ಕೃತಿ, ನಮ್ಮತನ ಎಲ್ಲವನ್ನು ಕಳೆದುಕೊಳ್ಳ ಬೇಕಾಗಬಹುದು. ಹೀಗಾಗುವುದನ್ನು ತಡೆಯಬೇಕಾದರೆ ನಾವುಗಳೆಲ್ಲಾ ಸೇರಿ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ. ಇಂತಹ ಸುಂದರ ಸುರಕ್ಷಿತ ಕರ್ನಾಟಕದಲ್ಲಿ ಇರಲು ಜಾಗ ನೀಡಿರುವ ಕನ್ನಡಮ್ಮನ ಋಣ ತೀರಿಸುವ ಸಮಯ ಬಂದಿದೆ.

ಈ ನಿಟ್ಟಿನಲ್ಲಿ ನಾವುಗಳೆಲ್ಲ ಇಂದು ಒಂದು ಮಹತ್ತರವಾದ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ.

*

ಕನ್ನಡಿಗನೊಬ್ಬ ಒಂದು ಅಂಗಡಿಗೆ ಅವನ ಹಾಗು ಅಂಗಡಿಯವನ ಮಧ್ಯೆ ಸಂಭಾಷಣೆ ಕನ್ನಡ ಬಿಟ್ಟು ಬೇರೆ ಎಲ್ಲಾ ಭಾಷೆಗಳಲ್ಲೂ ನಡೆಯುವ ಸಾಧ್ಯತೆಯೇ ಹೆಚ್ಚು. ಇದು ಬೇರೆಲ್ಲೋ ನಡೆಯಬಹುದಾದಲ್ಲ. ಸ್ವತ: ಕರ್ನಾಟಕದ ರಾಜಧಾನಿ ಬೆಂಗಳೂರಿನ ಸೋ ಕಾಲ್ಡ್‌ ‘ಪಾಷ್‌’ ಜಾಗಗಳಾದ ಎಂ. ಜಿ. ರಸ್ತೆ / ಕಮರ್ಷಿಯಲ್‌ ಸ್ಟ್ರೀಟ್‌ / ಕೋರಮಂಗಲದ ಯಾವುದೇ ಅಂಗಡಿಯಲ್ಲಿ ನಡೆಯಬಹುದಾದದ್ದು.

ಕೆಲವು ವರ್ಷಗಳ ಹಿಂದೆ ಈ ವಿಷಯ ಯಾರಾದರೂ ಹೇಳಿದ್ದರೆ ಅಚ್ಚರಿಯಾಗುತ್ತಿತ್ತೇನೋ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಸರ್ವೇಸಾಮಾನ್ಯವಾದ ಸಂಗತಿ. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಏಕೆ ಈ ಪರಿಸ್ಥಿತಿ?

ಇನ್ನು ಈ ಪರಿಸ್ಥಿತಿಯನ್ನು ಒಮ್ಮೆ ಪರಿಶೀಲಿಸಿ ಓದಿ. ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಅಂದರೆ ಕೋರಮಂಗಲ, ಇಂದಿರಾನಗರ, ಬಿ.ಟಿ.ಎಂ. ಲೇಔಟ್‌ ಹಾಗು ಇನ್ನೂ ಕೆಲವೆಡೆ ಬೇರೆ ರಾಜ್ಯದಿಂದ ವಲಸೆ ಬಂದವರು ತಂಗಿದ್ದಾರೆ. ಹಾಗೆ ಬಂದವರು ಸುಮ್ಮನೆ ಇರಲಿಲ್ಲ. ಬದಲಿಗೆ ತಮ್ಮ ರಾಜ್ಯದಿಂದ ಮುಂಬರುವ ದಿನಗಳಲ್ಲಿ ಯಾರೇ ಬಂದರೂ ಅವರನ್ನು ತಮ್ಮ ಜೊತೆ ಒಗ್ಗೂಡಿಸಿಕೊಂಡು ತಮ್ಮ ಬಡಾವಣೆಗೆ ಸೇರಿಸಿಕೊಳ್ಳುತ್ತಾರೆ. ಹೀಗೆ ಮುಂದುವರೆದು ತಮ್ಮ ರಾಜ್ಯದ ಒಂದು ಚಿಕ್ಕ ಭಾಗವನ್ನಾಗಿ ಮಾರ್ಪಡಿಸಿದ್ದಾರೆ.

ಹೀಗೆ ಮಾಡುವುದರಿಂದ ಆ ಭಾಗದ ಸಂಸ್ಕೃತಿ ಕೂಡ ಮಾರ್ಪಾಡಾಗಿ ನಮ್ಮ ಕನ್ನಡ ಸಂಸ್ಕೃತಿಯು ಇಲ್ಲವಾಗುತ್ತಿದೆ. ತಿಂಡಿ-ತಿನಿಸುಗಳಿಂದ ಹಿಡಿದು ಬಟ್ಟೆಯ ತನಕ, ಹಬ್ಬ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೂಡ ತಮ್ಮ ಛಾಪನ್ನು ಒತ್ತಿದ್ದಾರೆ. ಈ ಪ್ರಾಂತ್ಯದ ರೀತಿ ರಿವಾಜುಗಳಲ್ಲಿ ಕನ್ನಡತನವೇ ಇಲ್ಲವಾಗಿದೆ.

ಹೀಗೆ ಒಂದು ಪ್ರಾಂತ್ಯದಲ್ಲಿ/ಬಡಾವಣೆಯಲ್ಲಿ ಪರರಾಜ್ಯದವರ ಪ್ರಭಾವ ಹೆಚ್ಚಾದಾಗ, ಅಲ್ಲಿಯ ಕನ್ನಡ/ಕನ್ನಡಿಗರ ಸಂಖ್ಯೆ ಕ್ಷೀಣಿಸಲಾರಂಭಿಸುತ್ತದೆ. ಹೀಗಾದಾಗ, ಈ ಬಡಾವಣೆಗಳಲ್ಲಿ ಕನ್ನಡೇತರನೊಬ್ಬ ಅಲ್ಲಿನವರನ್ನು ಪ್ರತಿನಿಧಿಸಿ ನಾಯಕನಾಗುತ್ತಾನೆ. ಹೀಗೆ ರಾಜಕೀಯವಾಗಿಯೂ ಬೇರೆ ರಾಜ್ಯದವರು ನಮ್ಮ ರಾಜ್ಯದಲ್ಲಿ ಸೇರಿಕೊಂಡಿದ್ದಾರೆ. ಇದರ ಪರಿಣಾಮವಾಗಿ ನಮ್ಮ ರಾಜ್ಯದ ಶಾಸಕರು ಈ ಬಡಾವಣೆಗಳ ಜನರ ಮತಕ್ಕಾಗಿ ಅದೇ ರಾಜ್ಯದ ನಾಯಕನೊಬ್ಬನನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಈಗಾಗಲೆ ಕರ್ನಾಟಕ ಶಾಸಕಾಂಗದಲ್ಲಿ ಕರ್ನಾಟಕೇತರ ರಾಜ್ಯದ ಪ್ರಾಂತೀಯ ಪಕ್ಷಗಳ ಶಾಸಕರು ಸೇರಿಕೊಂಡಿದ್ದಾರೆ. ಹೀಗೆ ಮುಂದುವರೆದಲ್ಲಿ ಮುಂದೊಮ್ಮೆ ಪರ ರಾಜ್ಯದ ಪಕ್ಷಗಳು ನಮ್ಮ ರಾಜ್ಯದಲ್ಲಿ ರಾಜ್ಯಭಾರ ನಡೆಸುವ ದಿನ ದೂರವಿಲ್ಲ.

ಇನ್ನು ಮಾರುಕಟ್ಟೆಯ ಪರಿಸ್ಥಿತಿಯೋ ಇನ್ನೂ ಹೊಲಸು. ಪರಭಾಷಿಗರ ದಾಪುಗಾಲು ಇಲ್ಲೂ ಹರಡಿದೆ. ಯಾವುದೇ ವ್ಯಾಪಾರಿ ಮಳಿಗೆಗಳಿಗೆ ಹೋದರೆ ಹೆಚ್ಚಾಗಿ ಉತ್ತರ ಭಾರತೀಯರನ್ನೇ ಕಾಣುತ್ತೇವೆ. ಇಲ್ಲಿನ ಭಾಷೆ, ಸಂಸ್ಕೃತಿ ಯಾವುದಕ್ಕೂ ಬೆಲೆ ಕೊಡದೆ ತಮ್ಮದೇ ಕಾರುಬಾರು ನಡೆಸುತ್ತಿದ್ದಾರೆ.

ಹೀಗೆ ಆದಲ್ಲಿ ಮುಂದೊಂದು ದಿನ ನಮ್ಮ ರಾಜ್ಯವನ್ನು ಬೇರೆಯವರ ಕೈಯಲ್ಲಿ ಇಟ್ಟು ನಾವು ಅವರ ಗುಲಾಮರಾಗಬೇಕಾದ ದಿನ ಬರಬಹುದು. ಹೀಗಾಗುವುದನ್ನು ತಡೆದು ಕನ್ನಡಮ್ಮನನ್ನು ಬೇರೆಯವರ ಕೈಗೆ ಒಪ್ಪಿಸದೆ ಉಳಿಸಬೇಕಾದುದು ಪ್ರತಿಯೊಬ್ಬ ಕನ್ನಡಿಗನ /ನಮ್ಮೆಲ್ಲರ ಆದ್ಯ ಕರ್ತವ್ಯ.

*

ಹಾಗಾದರೆ ಈ ಪರಿಸ್ಥಿತಿಯನ್ನು ಸುಧಾರಿಸಲು ಏನು ಮಾಡಬೇಕು?

ಕರ್ನಾಟಕದೆಲ್ಲೆಡೆ ಕನ್ನಡ ವಾತಾವರಣ ಸೃಷ್ಟಿಯಾದಾಗ ಮಾತ್ರ ಭಾಷೆ ಉಳಿಯುತ್ತದೆ. ಆದರೆ ಇದನ್ನು ಸಾಧಿಸುವುದು ಹೇಗೆ? ಕನ್ನಡ ಭಾಷೆ/ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಪರಭಾಷಿಗರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ. ಅವರುಗಳು ಮುಖ್ಯವಾಹಿನಿಗೆ ಬರಬೇಕಾದರೆ ಅವರಿಗೆ ಕನ್ನಡ ಸ0ಸ್ಕೃತಿಯ ಬಗ್ಗೆ ತಿಳಿವಳಿಕೆ ನೀಡಬೇಕು. ಇದಕ್ಕೆ ಕನ್ನಡ ಭಾಷೆ ಗೊತ್ತಿರಬೇಕು. ಕನ್ನಡಭಾಷೆ ತಿಳಿದಿದ್ದರೆ ತಾನೆ ತಾನಾಗಿ ಕನ್ನಡ ಸಂಸ್ಕೃತಿಯ ಬಗ್ಗೆ ಗೌರವ ಬರುತ್ತದೆ.

ಹೀಗಾಗಿ ನಾವುಗಳು ಮಾಡಬೇಕಾದ ಕರ್ತವ್ಯವೇನೆಂದರೆ ಪರಭಾಷಿಕರಿಗೆ ಕನ್ನಡ ಕಲಿಯಲು ಒಂದು ಅವಕಾಶ ಮಾಡಿಕೊಡಬೇಕು. ಇದನ್ನು ಮುಖ್ಯವಾಗಿ ವೃತ್ತಿಪರರಾದ ನಾವು ಪ್ರಾರಂಭಿಸಬೇಕು. ಇದಕ್ಕೆ ಮುಖ್ಯ ಕಾರಣ, ಪರಭಾಷಿಗರು ವೃತ್ತಿಪರ ಸಂಸ್ಥೆಗಳಲ್ಲಿ ಹೆಚ್ಚಾಗಿ ಇದ್ದಾರೆ. ಆದ್ದರಿಂದ ನಾವು ಈ ‘ಕನ್ನಡ ಕಲಿ’ ಕಾರ್ಯಕ್ರಮವನ್ನು ಆದಷ್ಟು ಸಂಸ್ಥೆಗಳಲ್ಲಿ ಪ್ರಾರಂಭಿಸಬೇಕೆಂಬುದೇ ನಮ್ಮ ಆಶಯ. ಈಗಾಗಲೇ ಕೆಲವು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮ ಪ್ರಾರಂಭವಾಗಿ ಯಶಸ್ವಿಯಾಗಿ ನಡೆಯುತ್ತಿದೆ.

ನಿಮ್ಮಲ್ಲಿ ಯಾರಿಗಾದರೂ, ನಿಮ್ಮ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸುವ ಇಚ್ಛೆ ಇದ್ದಲ್ಲಿ ದಯುವಿಟ್ಟು ಈ ಕೆಳಗೆ ನೀಡಿರುವ ವಿ-ಅಂಚೆ ವಿಳಾಸಕ್ಕೆ ಪತ್ರಿಸಿ : birur_aj@yahoo.co.in

ಕಡೆಯ ಮಾತು :

ಇಷ್ಟು ದಿನಗಳು ನಾವು ಕನ್ನಡವನ್ನು ಅಭಿಮಾನದ ದೃಷ್ಟಿಯಿಂದ ನೋಡುತ್ತಿದೆವು. ಈಗ ಅನ್ನದ ದೃಷ್ಟಿಯಿಂದ ನೋಡಬೇಕಾದ ಕಾಲ ಬಂದಿದೆ. ನಮಗೆ ಕನ್ನಡದಿಂದ ಅನ್ನ ಸಿಗುತ್ತದೆ ಎನ್ನುವ ಸತ್ಯವನ್ನು ಅರಿತರೆ ಕನ್ನಡದ ಬಗ್ಗೆ ಅಭಿಮಾನ, ಗೌರವ, ಅಕ್ಕರೆ ತಾನೇ ತಾನಾಗಿ ಬರುತ್ತದೆ.

ಸೂರಿಲ್ಲದೆ, ಆಶ್ರಯಕ್ಕಾಗಿ ಬಂದವರಿಗೆ ನಮ್ಮ ಮನೆಯಲ್ಲಿ ಜಾಗ ನೀಡೋಣ. ಹಾಗೆ ಬಂದವರು ನಮ್ಮ ರೀತಿ ರಿವಾಜಿಗೆ ಹೊಂದಿಕೊಂಡು ಇದ್ದರೆ ಸರಿ. ಬದಲಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಲು ಬಂದರೆ ಸುಮ್ಮನಿರುವುದು ಬೇಡ. ಅವರಿಗೆ ಬುದ್ಧಿ ಕಲಿಸೋಣ. ಅವರು ನಮ್ಮ ಸಂಸ್ಕೃತಿಯನ್ನು ಗೌರವಿಸುವಂತೆ ಮಾಡೋಣ. ಕರ್ನಾಟಕವೇ ನಮ್ಮ ಮನೆ. ಕನ್ನಡಮ್ಮನೆ ನಮ್ಮ ತಾಯಿ. ಈ ತಾಯಿಯ ಋಣ ತೀರಿಸೋಣ ಬನ್ನಿ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more