ಕನ್ನಡ ಕನ್‌ಫ್ಯೂಸೋ ಕನ್‌ಫ್ಯೂಸು...
ದಿನಬಳಕೆಯ ಮಾತಿನಲ್ಲಿ ಎಷ್ಟೆಲ್ಲ ತಮಾಷೆಯಿದೆ. ಒಬ್ಬರ ಮಾತು ಅಥವಾ ಪದ ಬಳಕೆ ಇನ್ನೊಬ್ಬರನ್ನು ಗೊಂದಲಕ್ಕೆ ತಳ್ಳುತ್ತದೆ. ಇಂತಹ ತಮಾಷೆಯ ಸಂದರ್ಭಗಳು ಇಲ್ಲಿವೆ.
- ಸತ್ಯಪ್ರೇಮ, ಬೆಂಗಳೂರು
[email protected]
*
ನನ್ನ ಮಾವನವರು ಜಿಎಸ್‌ಎನಲ್ಲಿ ಡೈರೆಕ್ಟರ್ ಆಗಿದ್ದರು. ವೇದ, ಸಂಸ್ಕೃತವನ್ನು ಬಹಳ ಆಳವಾಗಿ ಅಧ್ಯಯನ ಮಾಡಿ, ‘ಭಾರತೀಯ ಭೂತತ್ವ ರಹಸ್ಯ’ ಸೇರಿದಂತೆ 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದವರು. ಇಂಥಾ ಪಂಡಿತರ ಪುತ್ರ ನಮ್ಮೆಜಮಾನರು..
ನಮ್ಮ ಮದುವೆಯಾದ ಹೊಸದರಲ್ಲಿ, ಹೀಗೆ ಮಠದ ಸ್ವಾಮಿಗಳ ಬಲಿಷ್ಠ ದೇಹ ಪ್ರಕೃತಿ ಬಗ್ಗೆ ಮಾತನಾಡುತ್ತಿದ್ದಾಗ, ಪ್ರಸಾದ್(ನಮ್ಮ ಯಜಮಾನರು) ಹೇಳಿದರು ‘‘ಈ ಸ್ವಾಮಿಗಳೆಲ್ಲ ಫಲ ತಾಂಬೂಲ ತಿಂದು ತಿಂದೂ ತುಂಬಾ ದಪ್ಪ ಆಗಿಬಿಟ್ಟಿದಾರೆ’’ - ಫಲ ತಾಂಬೂಲ ಮತ್ತು ಫಲಾಹಾರ - ಕನ್‌ಫ್ಯೂಸ್ ಮಾಡಿಕೊಂಡಿದ್ದರು. ಕನ್ನಡ ಎಂ.ಎ ಪದವೀಧರೆ, ನನ್ನ ಅಮ್ಮ ಎಕ್ಸ್‌ಪ್ಲೇನ್ ಮಾಡಿದರು - ಫಲ ತಾಂಬೂಲ ಅಂದ್ರೆ ಮದುವೆ ಮನೇಲಿ ಕೊಡ್ತಾರಲ್ಲ ಅದು, ಫಲಾಹಾರ ಅಂದ್ರೆ, ಸಾತ್ವೀಕ ಆಹಾರ ಅಂತ .
*
ನನ್ನ ತಾತ 99 ವರ್ಷದವರು, ಟಿ.ವಿ. ನೋಡುತ್ತಿದ್ದರು. ಅಷ್ಟು ವಯಸ್ಸಾದರೂ ಅವರ ಕಿವಿ ಕ ಣ್ಣುಗಳು ಚೆನ್ನಾಗಿದ್ದವು. ಯಾವುದೊ ಡ್ಯಾನ್ಸ್ ಬರುತ್ತಿತ್ತು. ಪ್ರಸಾದ್ ನನ್ನ ತಾತನಿಗೆ ಹೇಳುತ್ತಿದ್ದರು - ‘‘ನೋಡಿ, ಅವರು ಎಷ್ಟು ಚೆಂದವಾಗಿ ಕಚ್ಚೆ ಹಾಕಿಕೊಂಡಿದ್ದಾರೆ’’ ಅಂತ, ತಾತ ಸೀರಿಯಸ್ ಆಗಿ ಟಿ.ವಿ. ನೋಡುತ್ತಿದ್ದರು. ಪುಸ್ತಕ ಓದುತ್ತಿದ್ದ ನಾನು, ತಲೆ ಎತ್ತಿ ಟಿ.ವಿ. ನೋಡಿದಾಗ - Tribal Dance ಬರ್ತಾಯಿತ್ತು. ಅದೂ ಬರೀ ಕೋಪೀನ ಹಾಕಿಕೊಂಡಿದ್ದರು, ನ್ಯಾಷಿನಲ್ ಜಿಯೋಗ್ರಾಫಿಕ್ ಚಾನೆಲ್‌ನಲ್ಲಿ.. ಕಚ್ಚೆ, ಕೋಪೀನ ಕನ್‌ಫ್ಯೂಸ್ ಮಾಡಿಕೊಂಡಿದ್ದರು. ಅದಕ್ಕೇ ತಾತ ಷಾಕ್ ಆಗಿ ಕಚ್ಚೆ ಹುಡುಕುತ್ತಿದ್ದರು; ಟಿ.ವಿ. ಡ್ಯಾನ್ಸರ್‌ಗಳ ಡ್ರೆಸ್ಸ್ ನಲ್ಲಿ (ತಾತ ಕಚ್ಚೆ ಪಂಚೆ ಉಡುತ್ತಿದ್ದರು ) .
*
ನನ್ನ ನಾದಿನಿ ಮನೆ ಗೃಹಪ್ರವೇಶ ಬೇರೆ ಬೇರೆ ಫೇಸಸ್‌ನಲ್ಲಿ ನಡೆಯುತ್ತಿತ್ತು. ಆಗಸ್ಟ್‌ನಲ್ಲಿ ಹೋಮ ಮಾಡಿದರು, ಸೆಪ್ಟೆಂಬರ್‌ನಲ್ಲಿ ಸತ್ಯನಾರಾಯಣ ಪೂಜೆ.. ಹೀಗೇ.. ಪ್ರಸಾದ್ ಕೇಳಿದರು, ‘ಬನ್ಸಿ ಮನೇಲಿ ಹಾಲು ಒಡೆಸೋದು ಯಾವಾಗ’. ನಾನು ಹೇಳ್ದೆ, ರಸಮಲಯ್‌ು ಮಾಡಿದಾಗ ಅಂತ. ‘ಅಲ್ಲ ಕಣೆ. ಬನ್ಸಿ ಮನೇಲಿ ಹಾಲು ಒಡೆಸೋದು ಯಾವಾಗ’ ಅಂತ ಮತ್ತೆ ಕೇಳಿದರು. ಆಗ ಗೊತ್ತಾಯಿತು ಅವರು ಅಪೇಕ್ಷಿಸುತ್ತಿದ್ದ ಉತ್ತರ ಹಾಲು ಉಕ್ಕಿಸಿ ಹೊಸ ಮನೆಗೆ ಹೋಗುವ ಶಾಸ್ತ್ರದ ಬಗ್ಗೆ ಅಂತ. ಹಾಲು ಉಕ್ಕಿಸೋದು ಹಾಲು ಒಡೆಸೋದು ಕನ್‌ಫ್ಯೂಸ್ ಮಾಡಿಕೊಂಡಿದ್ದರು ..
*
ನನ್ನ ಮಗ ಗಣಕಯಂತ್ರದ (ಕಂಪ್ಯೂಟರ್‌ನ ಈ ಕನ್ನಡ ಪದದ ಪರಿಚಯವೇ ಇಲ್ಲವೇನೊ ಅವನಿಗೆ) ಮುಂದೆ ಏನೋ ಕುಟ್ತುತ್ತಾ ಕೂತ್ತಿದ್ದ. ಶಶಾಂಕನಿಗೆ ಆಕಳಿಕೆ ಬರುತ್ತಿದೆ ಬೇಗ ಬಾ ಅಂದ್ರು ಪ್ರಸಾದ್. ಆಕಳಿಕೆ ಬಂದ್ರೆ ನಾನ್ ಏನ್ ಮಾಡ್ಲಿ, ಮಲಗಲಿ ಬಿಡಿ ಅಂದೆ. ಆಲ್ಲ, ನೀರು ತಾ ಅಂದ್ರು. ಏನಪ್ಪ ಹೊಸ ಓಷಧಿ ಅಂತ ನೋಡಿದ್ರೆ, ಅವನಿಗೆ ಬರುತ್ತಿದ್ದುದು ಬಿಕ್ಕಳಿಕೆ... ಕನ್‌ಫ್ಯೂಸ್ ಆಕಳಿಕೆ ಮತ್ತು ಬಿಕ್ಕಳಿಕೆಗಳ ನಡುವೆ..
*
ಶಶಾಂಕ (ನನ್ನ ಮಗ)ನ ಮುಂಜಿ ಬಗ್ಗೆ ಮಾತನಾಡುವಾಗ ಹೇಳಿದರು, ಬೆಳಗ್ಗೆ ಬೇಗ ಶುರು ಮಾಡಬೇಕಂತೆ. 5 ಘಂಟೆಗೆ ಲಾಜ ಹೋಮ ಅಂತೆ ಅಂದ್ರು. ಅದು ಪುಣ್ಯಾಹ ಅನ್ನಿಸತ್ತೆ, ಶಾಸ್ತ್ರಿಗಳನ್ನು ಕೇಳಿ ಅಂತ ಹೇಳಿದ್ದೇನೆ. ಇನ್ನು ಹೋಗಿಲ್ಲ ಶಾಸ್ತ್ರಿಗಳ ಬಳಿ..
ಪ್ರಸಾದ್ ಕನ್ನಡ ಮಾತ್ರ ಯಾವಾಗಲೂ ಕನ್‌ಫ್ಯೂಸೋ ಕನ್‌ಫ್ಯೂಸು!











Click it and Unblock the Notifications