ಡಿ.ವಿ.ಜಿಯವರ 119ನೇ ಜನ್ಮದಿನೋತ್ಸವದಂದು ವೆಬ್‌ಸೈಟ್ ಬಿಡುಗಡೆ
ಹೆಚ್.ಎಸ್.ಲಕ್ಷ್ಮಿನಾರಾಯಣ ಭಟ್ ಹಾಗೂ ಚಂದ್ರಮೌಳಿಯವರು ಡಿ.ವಿ.ಜಿಯವರ ಜೀವನದ ಕೆಲವು ತುಣುಕುಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಮಂಕುತಿಮ್ಮನ ಕಗ್ಗ ಕೇಳದ ಕನ್ನಡಿಗರು ಅತಿ ವಿರಳ, ಪತ್ರಿಕೋದ್ಯಮ, ರಾಜನೀತಿ, ವೇದಾಭ್ಯಾಸ, ಸಾಹಿತ್ಯ ಇನ್ನಿತರ ಹಲವು ಕಾರ್ಯ ಕ್ಷೇತ್ರಗಳಲ್ಲಿ ತಮ್ಮ ಜೀವನದ ಬಹುಪಾಲು ಸವೆಸಿ ಗಳಸಿದಂತಹ ಅನುಭವವನ್ನು ನಾಲ್ಕೇ ಸಾಲಿನ ಕಗ್ಗಗಳಲ್ಲಿ ಉಣಬಡಿಸಿದಂತಹ ಡಾ।।ಡಿ.ವಿ.ಜಿ ಯವರ 119ನೇ ವರ್ಷದ ಜನ್ಮ ದಿನ ಇದೇ ಮಾರ್ಚ್ 17ರಂದು ಆಚರಿಸಲಾಗುತ್ತಿದೆ.
ಸದಾ ಎಲೆಮರೆಯ ಕಾಯಿಯಂತಿದ್ದ ಮಹಾನ್ ಚೇತನ ಡಿ.ವಿ.ಜಿಯವರನ್ನು ವರ್ಷದಲ್ಲಿ ಒಂದು ದಿನವಾದರು ಸಾರ್ವಜನಿಕವಾಗಿ ನೆನಪಿಸಿ ಕೊಳ್ಳುವುದರಲ್ಲಿ ತಪ್ಪೇನಿಲ್ಲವಲ್ಲ. ಡಿವಿಜಿ ಅವರನ್ನು ನೆನಪಿಸಿಕೊಳ್ಳುವ ಸುಸಂದರ್ಭವನ್ನು ಬೆಂಗಳೂರಿನ ಒಂದು ಯುವ ತಂಡವಾದ ಸಮಾಜ ಸೇವಕರ ಸಮಿತಿ ಏರ್ಪಡಿಸಿದೆ.

ಹಾಕಿ ಸಾಹಿತ್ಯ ಸಂಸ್ಕೃತಿ ಮತ್ತು ಸಮಾಜದ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಕೈಜೋಡಿಸಿರುವ ಬೆಂಗಳೂರಿನ 'ಈ-ಕವಿ'ಯ ಉತ್ಸಾಹಿ ಯುವಕರು, ಸಾಹಿತಿಗಳ ಸಂಪೂರ್ಣ ಮಾಹಿತಿಯನ್ನು ಹೊಂದಿರುವ 'ಕನ್ನಡ ಕವಿ' ಅಂತರ್ಜಾಲ ತಾಣವನ್ನು ಪ್ರಾರಂಭಿಸುತ್ತಿದ್ದಾರೆ. ಇದರ ಚಾಲನೆಯನ್ನು ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರು ಮಾಡಲಿದ್ದಾರೆ.
ಖ್ಯಾತ ಸಾಹಿತ್ಯ ಪರಿಚಾರಕ ಪ್ರೊ।। ಹೆಚ್.ಎಸ್.ಲಕ್ಷ್ಮಿನಾರಾಯಣ ಭಟ್‌ರು ಡಿ.ವಿ.ಜಿ ಯವರ ಸಮಗ್ರ ಸಾಹಿತ್ಯದ ಬಗ್ಗೆ ಮಾತನಾಡಲಿದ್ದಾರೆ. ಡಿ.ವಿ.ಜಿಯ ತಮ್ಮನ ಮಗ ಚಂದ್ರಮೌಳಿಯವರು ಡಿ.ವಿ.ಜಿಯವರ ಜೀವನದ ಕೆಲವು ತುಣುಕುಗಳನ್ನು ಹಂಚಿಕೊಳ್ಳಲಿದ್ದಾರೆ. ಡಿ.ವಿ.ಜಿ. ಯವರ ಮೊಮ್ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶೇಷವಾಗಿ ಡಿ.ವಿ.ಜಿಯವರ ಅಪರೂಪದ ಭಾವಚಿತ್ರಗಳು, ಹಸ್ತಪ್ರತಿ ಮತ್ತು ನಗದೀಕರಿಸದ ಚೆಕ್ಕುಗಳು ಮುಂತಾದವುಗಳನ್ನು ಕೃಷ್ಣಮೂರ್ತಿ, ಕಾವ್ಯಾಲಯ ಪ್ರಕಾಶಕರು, ಮೈಸೂರು ಮತ್ತು ಚಂದ್ರಮೌಳಿಯವರ ಸಹಯೋಗದಲ್ಲಿ ಪ್ರದರ್ಶಿಸಲಾಗುತ್ತಿದೆ.
ಕಾವ್ಯಾಲಯ ಪ್ರಕಾಶಕರ ಪ್ರಾಯೋಜಕತ್ವದಿಂದ ಏರ್ಪಡಿಸಲಾಗಿದ್ದ 'ಮಂಕುತಿಮ್ಮನ ಕಗ್ಗ' ದ ರಾಜ್ಯ ಮಟ್ಟದ ವಿಮರ್ಶಾ ಸ್ಪರ್ಧೆಯ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು. ಡಿ.ವಿ.ಜಿ ವಿರಚಿತ 'ಮಂಕುತಿಮ್ಮನ ಕಗ್ಗ' ಮತ್ತು 'ಅಂತಃಪುರ ಗೀತೆ' ಇವುಗಳ ಗಾಯನವನ್ನು ರತ್ನಮಾಲಾ ಪ್ರಕಾಶ, ಶಂಕರಶಾನುಭಾಗ್ ಮತ್ತು ರಾಜು ಅನಂತಸ್ವಾಮಿಯವರು ಹಾಡಲಿದ್ದಾರೆ. ಡಿ.ವಿ.ಜಿ ಯವರ ಸಮಗ್ರ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಈ ಸರಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಮ್ಮ ಅಮೂಲ್ಯವಾದ ಸ್ವಲ್ಪ ಸಮಯವನ್ನು ಇದೇ ಮಾರ್ಚ್ 17ರಂದು ಬೆಂಗಳೂರಿನ ನಯನ ಸಭಾಂಗಣ, ಕನ್ನಡ ಭವನದಲ್ಲಿ ಸಂಜೆ 5.30 ಕ್ಕೆ ನಡೆಯುವ ಸಮಾರಂಭಕ್ಕೆ ಮೀಸಲಿಡಬೇಕಾಗಿ ಕೋರಿಕೆ.
ಕನ್ನಡ ಕವಿ ಬಳಗ
ರಾಜಕುಮಾರ : 9448171069
ಮಧು : 9886486216
ವೀರೇಶ್: 9945840319
ಮಹೇಶ್: 9945633021
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications