ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ಪುರುಷೋತ್ತಮಾನಂದಜಿ ಕಣ್ಣಲ್ಲಿ ‘ಧರ್ಮ’

By Staff
|
Google Oneindia Kannada News


ಧರ್ಮದ ಬಗ್ಗೆ ವಿವರವಾಗಿ ಬರೆಯಲಾದ ಗ್ರಂಥಗಳನ್ನು ಓದದಿದ್ದರೆ ಧರ್ಮವೆಂದರೇನೆಂದು ತಿಳಿಯುವ ಬಗೆ ಹೇಗೆ?

(ಸಂಗ್ರಹ : ಆರ್‌. ಎಸ್‌. ಅಯ್ಯರ್‌)

  • ಆಲೋಚಿಸಿ ನೋಡಬೇಕಾದ ಇನ್ನೊಂದು ಮಾತಿದೆ. ಏನೆಂದರೆ ಜನ ಧಾರ್ಮಿಕ ಗ್ರಂಥಗಳನ್ನು ಓದುವ ವಿಷಯದಲ್ಲಿ ಗಂಭೀರವಾದ ಸಮಸ್ಯೆಯಾಂದು ದೈತ್ಯಾಕಾರದಿಂದ ಮುಂದೆ ನಿಲ್ಲುತ್ತದೆ ; ಯಾವುದದು?
  • ಧರ್ಮದ ಬಗ್ಗೆ ಸಾಕಷ್ಟು ಮಾಹಿತಿ ಇರುವ ವೈದಿಕರು, ಪುರೋಹಿತರು, ಅರ್ಚಕರು, ಶಿಕ್ಷಕರು, ಸನ್ಯಾಸಿಗಳು - ಇವರೇ ಮೊದಲಾದವರು ವ್ಯವಹಾರದಲ್ಲಿ ಸಾಮಾನ್ಯರಂತೆಯೇ ಅಥವಾ ಕೆಲವೊಮ್ಮೆ ಸಾಮಾನ್ಯರಿಗಿಂತಲೂ ನಿಕೃಷ್ಟವಾಗಿ ವರ್ತಿಸುವುದನ್ನು ಕಂಡಾಗ ಜನ ತಮ್ಮ ಮನದಲ್ಲೇ ಅಂದುಕೊಳ್ಳುತ್ತಾರೆ ಅಥವಾ ಬಾಯಿಬಿಟ್ಟು ಹೇಳಿಯೂ ಬಿಡುತ್ತಾರೆ - ‘ಈ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿ ಆಗುವ ಪ್ರಯೋಜನವಾದರೂ ಏನು ?’
  • ಧರ್ಮವೆಂದರೇನು? --ಈ ಪ್ರಶ್ನೆ ಇಂದು ನಿನ್ನೆಯದಲ್ಲ. ಮುಂದೆಯೂ ಇದು ಇಲ್ಲದಿರುವುದಿಲ್ಲ. ಇನ್ನೊಂದು ಅತ್ಯಾಶ್ಚರ್ಯಕರ ಸಂಗತಿಯೆಂದರೆ, ಧರ್ಮವೆಂದರೇನೆಂಬುದನ್ನು ಪುಸ್ತಕ ಓದಿಯೋ , ಭಾಷಣ ಕೇಳಿಯೋ ತಿಳಿದಮೇಲೆಯೂ ಈ ಪ್ರಶ್ನೆ ಹಾಗೆಯೇ ಉಳಿಯುತ್ತದೆ! ಏಕಿರಬಹುದು ? ಅಷ್ಟೇ ಅಲ್ಲ, ವಿದ್ಯಾವಂತರೆನಿಸಿಕೊಂಡವರ, ಭಾಷಣಚತುರರ ಹಾಗೂ ಧಾರ್ಮಿಕರೆಂಬವರ ನಡೆನುಡಿಗಳಲ್ಲೂ, ರೀತಿನೀತಿಗಳಲ್ಲೂ ಅವ್ಯವಹಾರಗಳು ಕಂಡುಬಂದಾಗ , ಈ ಪ್ರಶ್ನೆ ಮತ್ತೆ ಮೇಲೇಳುತ್ತದೆ- ಹಾಗಾದರೆ ಧರ್ಮವೆಂದರೇನು? ಎಂದು. ಏಕಿರಬಹುದು?
  • ಧಾರ್ಮಿಕ ಗ್ರಂಥಗಳಲ್ಲಿ ಧರ್ಮವೆಂದರೇನೆಂಬುದನ್ನು ಸವಿಸ್ತಾರವಾಗಿ ವಿವರಿಸಲಾಗಿದೆ. ಆದರೆ ಅವುಗಳನ್ನು ಓದುವವರಾರು ? ಹೆಚ್ಚಿನವರಿಗೆ ಅವುಗಳನ್ನು ಓದಲು ಕುಳಿತರೆ ಕಣ್ಣು ನೋವು; ಇನ್ನು ಕೆಲವರಿಗೆ ಆ ಗ್ರಂಥಗಳ ಹೆಸರು ಕೇಳಿದರೇ ತಲೆಶೂಲೆ ! ಧರ್ಮದ ಬಗ್ಗೆ ವಿವರವಾಗಿ ಬರೆಯಲಾದ ಗ್ರಂಥಗಳನ್ನು ಓದದಿದ್ದರೆ ಧರ್ಮವೆಂದರೇನೆಂದು ತಿಳಿಯುವ ಬಗೆ ಹೇಗೆ?
  • ಧರ್ಮವೆಂದರೇನು ಎಂಬುದು ಧರ್ಮಿಷ್ಠರು ಎಂಬುವರ ನಡೆನುಡಿಯಲ್ಲಿ ಒಡಮೂಡಿ ಬರುತ್ತಿದ್ದರೆ ಮಾತ್ರ ಅರ್ಥವಾಗುವಂಥದು. ಹಾಗಾಗಲು ಮಾನವ ಜನಾಂಗಕ್ಕೆ ಬಾಲ್ಯದಿಂದಲೇ ಧರ್ಮ ಶಾಸ್ತ್ರದ ಧಾರ್ಮಿಕ ವಿಚಾರಗಳನ್ನು ಬೋಧಿಸಿ ಆಚರಿಸುವಂತೆ ಮಾಡಬೇಕು. ಹಾಗೂ ಅನುಭವದ ಆಧಾರದ ಮೇಲೆ ಹೇಳುವುದಾದರೆ, ಮಾತೆಯ ಗರ್ಭದಲ್ಲಿರುವಾಗಲೇ ಜೀವಿಗೆ ಧಾರ್ಮಿಕ ಸಂಸ್ಕಾರ ರೂಪದ ಮಾಹಿತಿಯಾಗಬೇಕು. ಇದೊಂದು ಬಹು ಸೂಕ್ಷ್ಮ ವಿಚಾರ. ಮನುಷ್ಯನ ಕಲಿಕೆ ಎಲ್ಲಿವರೆಗೆ ? ಎಂಬ ಪ್ರಶ್ನೆಗೆ ‘ಹುಟ್ಟಿನಿಂದ ಚಟ್ಟದವರೆಗೆ’
  • ಎಂಬ ಮಾತಿದೆ. ಆದ್ದರಿಂದ ಮನುಷ್ಯನ ಧಾರ್ಮಿಕ ಪ್ರಜ್ಞೆ ಜಾಗೃತವಾಗುವ ವಿಷಯದಲ್ಲಿ ಅವನ ಹುಟ್ಟಿಗೆ ಕಾರಣರಾದ ಮಾತಾಪಿತೃಗಳು ಬಹುಮುಖ್ಯ ಪಾತ್ರ ವಹಿಸುತ್ತಾರೆ, ವಹಿಸಬೇಕಾಗುತ್ತದೆ. ಹಿರಿಯರಲ್ಲಿ ಕಾಣಬರದ ಧರ್ಮ ಕಿರಿಯರಲ್ಲಿ ಹೇಗೆ ಬರಬೇಕು?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X