ಸಂಪಿಗೆ ಹೂ ಕುಳಿತಿದೆ ತಂಪಗೆ...
ಇದು ಸೋಜಿಗವಾದರೂ ನಿಜ.. ಹದಿನಾಲ್ಕು ವರ್ಷಗಳಿಂದ ಈ ಸಂಪಿಗೆ ಬಾಡಿಲ್ಲ ಎನ್ನುತ್ತಾರೆ ತಾಳಗುಪ್ಪದ ಲಕ್ಷ್ಮೀನಾರಾಯಣ.
- ವೇಣುಮಾಧವ, ಹೆಚ್.ಕೃಷ್ಣಮೂರ್ತಿ, ತಲವಾಟ
ಸಾಗರತಾಲ್ಲೂಕು ತಾಳಗುಪ್ಪದಲ್ಲಿ ಪರಿಷತ್ ವಾರ್ಷಿಕ ಮಹಾಸಭೆಯಂದು ರಂಗೋಲಿ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವಿತ್ತು. ಅನೇಕ ಕುಸುರಿ ಕೆಲಸಗಳ ವಸ್ತುಗಳಿದ್ದವು. ಅದರಲ್ಲಿ ಕೌಶಲ್ಯ-ಕುಸುರಿ ಕೆಲಸವಿರದ ವಸ್ತುವೊಂದು ವಿಶೇಷ ಆಕರ್ಷಣೆಯಾಗಿತ್ತು. ಎಲ್ಲರ ಆಶ್ಚರ್ಯ ಮೂಡಿಸಿತ್ತು.
ಅದುವೇ ನೀರಲ್ಲಿಟ್ಟ ಸಂಪಿಗೆ ಹೂಗಳು. ಗಾಜಿನ ಬಾಟಲಿಯಾಂದರಲ್ಲಿ ನೀರು ತುಂಬಿಸಿ ಕೆಲವು ಹೂಗಳನ್ನಿಟ್ಟು ಮುಚ್ಚಳ ಹಾಕಲಾಗಿತ್ತು. ಅರೆ ನೀರಲ್ಲಿ ಸಂಪಿಗೆ ಹೂ ಇಟ್ಟ ತಕ್ಷಣ ಆಶ್ಚರ್ಯವೇಕೆ? ಎನ್ನಿಸಬಹುದು.
ಅದರೆ ಅದೂ ನೀರಿನಲ್ಲಿಟ್ಟಿದ್ದು ಒಂದೋ-ಎರಡೋ ದಿನಗಳಲ್ಲ. ಮೂರೋ-ನಾಲ್ಕೋ ತಿಂಗಳುಗಳಲ್ಲ, ಅಥವಾ ಐದೋ-ಆರೋ ವರ್ಷಗಳೂ ಅಲ್ಲ. ಬರೋಬ್ಬರಿ 13ರಿಂದ 14 ವರ್ಷಗಳು....!!!
ತಾಳಗುಪ್ಪದ ವಿಘ್ನೕಶ್ವರ ರೈಸ್‌ಮಿಲ್‌ನ ಮೆಕ್ಯಾನಿಕ್ ಲಕ್ಷ್ಮೀನಾರಾಯಣ ಅವರು 1992-93ನೇ ಇಸವಿಯಲ್ಲಿಟ್ಟಿದ್ದ ಈ ಹೂಗಳು ಆ ಬಾಟ್ಲಿಯಾಳಗೆ ಈಗಲೂ ಚೆನ್ನಾಗಿಯೇ ಇವೆ. ನೀರಿಗೆ ಯಾವುದೇ ಬಗೆಯ ರಾಸಾಯನಿಕಗಳನ್ನು ಸೇರಿಸಿಲ್ಲ. ನೋಡಲು ಸ್ವಲ್ಪ ಮೃದು ಆದಂತೆ ನಮಗೆ ಅನ್ನಿಸುತ್ತದೆ. ಬಿಟ್ಟರೆ, ಆದರ ದಳಗಳೂ ಸಹಿತ ಉದುರಿಲ್ಲ.
ಆದರೆ ಲಕ್ಷ್ಮೀನಾರಾಯಣ ಅವರು ಈ ಬಗ್ಗೆ ಅಷ್ಟೊಂದು ಆಶ್ಚರ್ಯಪಡುವುದಿಲ್ಲ. ಅವರ ಪ್ರಕಾರ ಹೂವಿನಲ್ಲಿನ ಹಾಳಾಗದಿರತಕ್ಕಂತಹ ಯಾವುದೋ ಒಂದು ಗುಣ ಅದನ್ನು ಕಾಪಾಡಿಕೊಂಡು ಬಂದಿದೆ. ಇನ್ನೂ ಎಷ್ಟು ವರ್ಷ ಹೀಗೆ ಇರುತ್ತೆ ಎಂಬುದನ್ನು ಕಾದು ನೋಡಬೇಕು ಎನ್ನುತ್ತಾರವರು.











Click it and Unblock the Notifications