• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಾಟೆಯ ಗತ್ತು-ಗಮ್ಮತ್ತು!

By Staff
|

ನಟ ಶಂಕರ್‌ನಾಗ್‌ರನ್ನು ‘ಕರಾಟೆ ಕಿಂಗ್‌’ ಎಂದೇ ಅಭಿಮಾನಿಗಳು ಗುರ್ತಿಸಿದ್ದರು. ಕರಾಟೆ ಪಟ್ಟುಗಳನ್ನು ಕಂಡವರು, ಕರಾಟೆ ಕಲಿಯಲು ಆಸೆಪಡುತ್ತಾರೆ. ಕರಾಟೆ ಕಲಿಯಲು ಆಸೆಗಿಂತಲೂ ಸಾಧನೆ ಮುಖ್ಯ. ಆತ್ಮರಕ್ಷಣಾ ಕಲೆಗಳಲ್ಲಿ ಕರಾಟೆಗೆ ಅಗ್ರಸ್ಥಾನ. ಜಪಾನಿನ ಒಕಿನಾವಾ ದ್ವೀಪದಿಂದ ಪರಿಚಿತವಾದ ಈ ವಿದ್ಯೆ ಈಗ ವಿಶ್ವವಿಖ್ಯಾತವಾಗುತ್ತಿದೆ. ಕರಾಟೆಲೋಕವನ್ನು ಅರಿಯೋಣ ಬನ್ನಿ...

ಅಂದು ಭಾನುವಾರ ಬೆಳಗ್ಗೆ 6ಘಂಟೆಗೇ ನನ್ನ ಮಗನನ್ನು ಕರಾಟೆ ಪರೀಕ್ಷೆಗೆಂದು ಕರೆದೊಯ್ಯಬೇಕಿತ್ತು. ವಿಪರೀತ ಮಳೆ ಸುರಿಯುತ್ತಿತ್ತು. ಮಲಾಡಿನ ರಾಮಮಂದಿರದ ಮುಕ್ತ ಪ್ರಾಂಗಣದಲ್ಲಿ ಈ ಪರೀಕ್ಷೆ ನಡೆಯುವುದಿತ್ತು. ಮಳೆಯಲ್ಲಿ ಹೇಗೆ ಮಾಡುವರೋ ಎಂಬ ಸಂದೇಹವಿತ್ತು. ಆಟೋವಿನಲ್ಲಿ ಅಲ್ಲಿಗೆ ಮಗನನ್ನು ಕರೆದೊಯ್ದೆ. ಮಳೆಯ ನೀರು ತುಂಬಿದ ಮುಕ್ತಪ್ರಾಂಗಣ ಒಂದು ಸಣ್ಣ ಕೆರೆಯಂತೆ ಕಾಣಿಸುತ್ತಿತ್ತು. ಈ ಸಲುವಾಗಿ ರಾಮಮಂದಿರದ ಭಜನಾ ಸಭಾಂಗಣದ ಒಂದು ಭಾಗದಲ್ಲಿ ಪರೀಕ್ಷೆಗೆ ಅನುವು ಮಾಡಿಕೊಂಡಿದ್ದರು. ಸದ್ಯ ಕರಾಟೆ ಬಟ್ಟೆ ಕೊಚ್ಚೆಯಾಗಿ ಒಗೆಯಲು ಹೆಚ್ಚಿನ ತೊಂದರೆ ಆಗುವುದಿಲ್ಲವೆಂಬುದೊಂದೇ ಸಮಾಧಾನದ ವಿಷಯ.

ಪರೀಕ್ಷೆಯನ್ನು ಏಳು ಘಂಟೆಗೆ ಪ್ರಾರಂಭಿಸಿದವರು, ಮೊದಲು ದೈಹಿಕ ವ್ಯಾಯಾಮ ಅಭ್ಯಾಸಗಳನ್ನು ಮಾಡಿಸಿ, ತರುವಾಯ ಕೈ ಕಾಲುಗಳ ಮೂಲಕ ಎದುರಾಳಿಯ ಆಕ್ರಮಣದಿಂದ ಹೇಗೆ ತಪ್ಪಿಸಿಕೊಂಡು ಅವನನ್ನು ಮಣಿಸಬಹುದೆಂಬುದರ ಬಗ್ಗೆ ಪರೀಕ್ಷಿಸಿದರು. ನಂತರ ಕೆಲವು ಪ್ರಶ್ನೆಗಳನ್ನು ಕೇಳಿ, ಕೈ ಉಗುರು ಕಾಲಿನ ಉಗುರುಗಳನ್ನು ಪರೀಕ್ಷಿಸಿ, ಮಕ್ಕಳಲ್ಲಿಯೇ ಹೊಡೆದಾಟದ ಪರೀಕ್ಷೆಯನ್ನು ಮಾಡಿದರು. ಸಭಾಂಗಣ ಚಿಕ್ಕದಿದ್ದುದರಿಂದ ಮತ್ತು ಬೇರೆ ಬೇರೆ ವಿಭಾಗದ ಮಕ್ಕಳಿಗೆ ಪರೀಕ್ಷೆಯನ್ನು ಮಾಡಬೇಕಿದ್ದುದರಿಂದ, ಬೇರೆ ಬೇರೆ ಸಮಯದಲ್ಲಿ ಬರುವಂತೆ ಮಕ್ಕಳಿಗೆ ತಿಳಿಸಿದ್ದರು. ನನ್ನ ಮಗನು ಹಸುರು ಬೆಲ್ಟಿನ ಎರಡನೆಯ ಶ್ರೇಣಿಗೆ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದನು. ಇದರ ಬಗ್ಗೆ ಒಂದೆರಡು ಮಾತುಗಳನ್ನು ಹೇಳಲಿಚ್ಛಿಸುವೆ.

5 ವರ್ಷಗಳಿಗಿಂತ ಮೇಲ್ಪಟ್ಟ ಮಕ್ಕಳಿಗೆ ಕರಾಟೆಯ ತರಬೇತಿಯನ್ನು ಕೊಡುತ್ತಾರೆ. ನಮ್ಮ ವಸಾಹತು ಸಮುದಾಯಕ್ಕೆ ಕನ್ನಡದವರೇ ಆದ(ಇಲ್ಲಿಯೇ ಹುಟ್ಟಿ ಬೆಳೆದ), ಕಿರಣ್‌ ಭಟ್‌ ಎಂಬ 22-23 ವರ್ಷದ ಯುವಕ ತರಬೇತಿ ಕೊಡಲು ಬರುತ್ತಾರೆ. 6 ತಿಂಗಳಿಗೊಂದು ಪರೀಕ್ಷೆ ನಡೆಸುತ್ತಾರೆ. ಪರೀಕ್ಷೆಗೆ ಕರೆಯುವ ಮುನ್ನವೇ ಅವರು ಸಮರ್ಥರಿದ್ದಾರೆಯೇ ಎಂದು ತಿಳಿದು ನಂತರ ಪರೀಕ್ಷೆಯ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ನಪಾಸಾಗುವ ಮಕ್ಕಳು ಬಹಳ ಬಹಳ ಕಡಿಮೆ.

Karate, the martial artಹೊಸದಾಗಿ ತರಬೇತಿಗೆ ಬರುವವರಿಗೆ ಬಿಳಿಯ ಪಟ್ಟಿಯನ್ನು (ವೈಟ್‌ ಬೆಲ್ಟ್‌) ಕೊಡುವರು. ಅದರಲ್ಲಿ ಉತ್ತೀರ್ಣರಾದವರಿಗೆ ಉತ್ತೀರ್ಣ ಪತ್ರದೊಂದಿಗೆ ಹಳದಿಯ ಪಟ್ಟಿಯನ್ನು ಕೊಡುವರು. ಅದಾದ ನಂತರ, ಕೇಸರಿ ಪಟ್ಟಿಯನ್ನು ಕೊಡುವರು. ಇದರ ನಂತರದ ಹಂತದಲ್ಲಿ ಹಸುರು ಪಟ್ಟಿಯನ್ನು ಕೊಟ್ಟು ಎರಡು ಪರೀಕ್ಷೆಯನ್ನು ಕೊಡುವಂತೆ ಮಾಡುವರು. ಅಂದರೆ ಕೇಸರಿ ಪಟ್ಟಿಯನ್ನು ಹೊಂದಿದವರಿಗೆ ಹಸುರುಪಟ್ಟಿಯನ್ನು ಕೊಟ್ಟು ಮುಂದೆ ಎರಡು ಬಾರಿ ಪರೀಕ್ಷೆಯಲ್ಲಿ (ಒಂದು ವರ್ಷದ ತರುವಾಯ) ತೇರ್ಗಡೆ ಹೊಂದಿದ ನಂತರವೇ ಮುಂದಿನ ಪಟ್ಟಿಯಾದ ಕಂದು ಬಣ್ಣದ ಪಟ್ಟಿಯನ್ನು ಕೊಡುವರು. ಇದರಲ್ಲಿ ನಾಲ್ಕು ಶ್ರೇಣಿಯಲ್ಲಿ ಉತ್ತೀರ್ಣರಾದ ನಂತರವೇ (ಎರಡು ವರ್ಷ), ಕಪ್ಪು ಪಟ್ಟಿಯನ್ನು ಪಡೆಯಲಾಗುವುದು. ಕಪ್ಪು ಪಟ್ಟಿಯಲ್ಲಿಯೂ ಹತ್ತು ಶ್ರೇಣಿಗಳಿವೆ. ಅದನ್ನು ಅಷ್ಟು ಸುಲಭವಾಗಿ ಪಾಸು ಮಾಡಲಾಗುವುದಿಲ್ಲ. ಅದರಲ್ಲಿಯ ಮೊದಲ ಕೆಲವು ಪರೀಕ್ಷೆಗಳನ್ನು ದೇಶದ ಮಟ್ಟದಲ್ಲಿ ತೆಗೆದುಕೊಂಡರೆ, ಅಂತಿಮ ಹಂತದ ಪರೀಕ್ಷೆಗಳನ್ನು ಜಪಾನಿನಲ್ಲಿ ತೆಗೆದುಕೊಳ್ಳಬೇಕಂತೆ. ಈ ಕರಾಟೆಯ ಉಗಮ ಮತ್ತು ನನಗೆ ತಿಳಿದ ಕೆಲವು ಅಂಶಗಳನ್ನು ಇಲ್ಲಿ ತಿಳಿಸ ಬಯಸುವೆ.

ಆತ್ಮರಕ್ಷಣೆಗೆ ಕರಾಟೆ ಕಲಿಕೆಯೂ ಒಂದು. ಕರಾಟೆಯಲ್ಲಿ ಹಲವು ಬಗೆಗಳಿವೆ. ಜಪಾನಿನ ಒಕಿನಾವಾ ದ್ವೀಪದಿಂದ ಪ್ರಚಲಿತವಾದ ಈ ವಿದ್ಯೆ ಈಗ ವಿಶ್ವವಿಖ್ಯಾತವಾಗುತ್ತಿದೆ. ಈ ಬಗೆಗಳಲ್ಲಿ ಒಂದಾದದ್ದು ಕ್ಯುಡೊಕಾನ್‌. ಕ್ಯುಡೊಕಾನ್‌ ಶಾಲೆಯ ಶೊರಿನ್‌-ರ್ಯು ಎಂದು ಪ್ರಸಿದ್ಧವಾದ ಹಿಗಾ ಕುಟುಂಬದ ಕರಾಟೆಯ ಸ್ಥಾಪಕರೆಂದರೆ ಒ ಸೆನ್ಸೈ ಯುಚೊಕು ಹಿಗಾ. 1910ರಲ್ಲಿ ಜನಿಸಿದ ಇವರು 1994ರಲ್ಲಿ ಮೃತರಾದರು. ಇವರನ್ನು ಒಕಿನಾವಾದ ಬಿಗಿಮುಷ್ಟಿ ಎಂದೂ ಕರೆಯುತ್ತಿದ್ದರು. ಇವರು ಈ ವಿದ್ಯೆಯ ಬಗ್ಗೆ ಅಖಂಡ ಅನುಭವವನ್ನು ಪಡೆದುದಲ್ಲದೇ ಇದರ ಬಗ್ಗೆ ಸಂಶೋಧನೆಯನ್ನೂ ಮಾಡಿದರು. ತಂದೆಯಿಂದ ವಿದ್ಯೆ ಕಲಿತ ಇವರು ಜಿರೊ ಶಿರೊಮಾ ಸೆನ್ಸೈ ಎಂದೇ ಪ್ರಸಿದ್ಧರಾದರು.

ಮುಂದೆ ಗೊಜು ರ್ಯು ಎಂಬ ಶಾಲೆಯ ಸಂಸ್ಥಾಪಕ ಮತ್ತು ಇವರ ಚಿಕ್ಕಪ್ಪನವರಾದ ಯೊಚುಕು ಹಿಗಾ ಸೆನ್ಸೈ ಅವರಿಂದ ಮುಷ್ಟಿ ಯುದ್ಧ ತಂತ್ರವನ್ನು ಕಲಿತರು. ಮುಂದೆ ಚೊಶಿನ್‌ ಚಿಬಾನಾ ಸೆನ್ಸೈ ಅವರಲ್ಲಿ ಶಿಷ್ಯವೃತ್ತಿಯನ್ನು ಮಾಡಿದರು. ತಮ್ಮ ಅನುಭವ, ಸಂಶೋಧನೆಯ ಫಲವಾಗಿ ತಮ್ಮದೇ ಆದ ಶೊರಿನ್‌ ರ್ಯು ಕ್ಯುಡೊಕಾನ್‌ ಶಾಲೆಯನ್ನು ಪ್ರಾರಂಭಿಸಿದರು. ಮುಂದೆ ತಮ್ಮ ಚಿಕ್ಕಪ್ಪನವರಿಂದ ಮಿಂಚಿನ ದಾಳಿಯ ಬಗ್ಗೆ ಪರಿಣತಿಯನ್ನು ಪಡೆದರು. ಇದೇ ಸಮಯದಲ್ಲಿ ಇವರ ತಮ್ಮನೂ ಇವರೊಂದಿಗೆ ಸೇರಿ ಅಭ್ಯಾಸ ಮಾಡಿ ಗುರುಗಳ ಅಣತಿಯ ಮೇರೆಗೆ ಅರ್ಜೆಂಟೈನಾದಲ್ಲಿರುವ ಜಪಾನಿನ ಸಮುದಾಯಕ್ಕೆ ಈ ವಿದ್ಯೆಯನ್ನು ಕಲಿಸಲು ತೆರಳಿದರು. ಈ ವಿದ್ಯೆಯು ಅರ್ಜೆಂಟೈನಾ ಅಲ್ಲದೇ ಸಂಪೂರ್ಣ ದಕ್ಷಿಣ ಅಮೆರಿಕೆಯಲ್ಲಿ ಪ್ರಸಿದ್ಧವಾಯಿತು. ಇವರ ಸಹೋದರಿಯ ಮಗ ಗ್ರ್ಯಾಂಡ್‌ ಮಾಸ್ಟರ್‌ ಮಿನೊರು ಹಿಗಾ (1941), ಒಕೊನೊವಾದಲ್ಲಿ ಕ್ಯೊಡೊಕಾನ್‌ ರೆಂಗೊಕೈನ ಈಗಿನ ಅಧ್ಯಕ್ಷ ಶೊರಿನ್‌-ರ್ಯುಗೂ.

ಕ್ಯುಡೊಕಾನ್‌ ಶಾಲೆಯ ತತ್ವಗಳು :

ಶೊರಿನ್‌ರ್ಯು (ಶಾವೊಲಿನ್‌) ಪದ್ಧತಿಯು ಚೀನೀಯ ಸ್ವಾಭಾವಿಕ ಉಸಿರಾಟ, ಆಕ್ರಮಣ ಪದ್ಧತಿ, ಎತ್ತರ ಮತ್ತು ಅಧೋಗತಿ ಆಕ್ರಮಣದ ಲಕ್ಷಣ, ಪಾದ ಚಲನೆ (ತೈ ಸಬಕಿ) ಮತ್ತು ರಭಸತೆಯನ್ನು ಹೊಂದಿದೆ.

ಇದಲ್ಲದೇ ಇದರದ್ದೇ ಆದ ಪ್ರತ್ಯೇಕ ತತ್ವಗಳೆಂದರೆ -

 • ಮ್ಯೊ ಮಮರು - ದೇಹವನ್ನು ಸಂರಕ್ಷಿಸಿಕೊಳ್ಳುವುದು
 • ಕಿ ಉತ್ಪತ್ತಿ (ಆಂತರಿಕ ಬಲ)ಯ ಮೂಲಕ ಹರ ಮತ್ತು ಯಿನ್‌ ಯಾನ್‌ (ಗಡುಸು, ಮೆದು, ಉದ್ವೇಗ, ವಿರಾಮ, ತೀವ್ರತೆ, ನಿಧಾನತೆ, ಉಚ್ಛ್ವಾಸ, ನಿಶ್ವಾಸ)
 • ಮರುಮಿ ಮುಚಿಮಿ - ವರ್ತುಲಾಕಾರ ತಾಂತ್ರಿಕತೆ, ಉತ್ತಮ ಹಂತದಲ್ಲಿ ತಾಂತ್ರಿಕತೆಯ ಪುನರಾವೃತ್ತಿ
 • ಕೊಕ್ಯುವಿನ ಕಟ್ಟಳೆ - ಕಿಬ್ಬೊಟ್ಟೆಯವರೆವಿಗೆ ಉಸಿರಾಡುವುದು ಮತ್ತು ಶ್ವಾಸಕೋಶದ ಸಹಾಯವಿಲ್ಲದೇ ಉಸಿರಾಡುವುದು
 • ಕ್ಯುಡೊಕಾನ್‌ ಪದ್ಧತಿಯನ್ನು ಯಾವ ವಯಸ್ಸಿನವರು ಬೇಕಾದರೂ ಅಭ್ಯಸಿಸಬಹುದು. ಈ ಪದ್ಧತಿಯ ಧ್ಯೇಯವೆಂದರೆ - ‘ಕಲಿಯುವಿಕೆಯು ಎಂದಿಗೂ ಕೊನೆಗೊಳ್ಳುವುದಿಲ್ಲ. ಕರಾಟೆ ಹಾದಿಯು ಬಹಳ ವಿಶಾಲವೂ, ಆಳವೂ ಮತ್ತು ಅಮಿತವೂ ಆಗಿದೆ.’

ಇಂದು ಕ್ಯುಡೊಕಾನ್‌ ಪ್ರಪಂಚದ ಎಲ್ಲೆಡೆಯೂ ಪಸರಿಸಿದೆ. 20ಕ್ಕೂ ಹೆಚ್ಚಿನ ದೇಶಗಳಲ್ಲಿ ಎಲ್ಲ ವಯಸ್ಸಿನ ಲಕ್ಷಾಂತರ ಮಂದಿ ಅಭ್ಯಸಿಸುತ್ತಿದ್ದಾರೆ.

ಕ್ಯುಡೊಕಾನ್‌ ಕತ :

ಕತ ಎಂದರೆ ವಿಧ ಎಂಬರ್ಥ. ಇದು ಒಂದು ವ್ಯಾಯಾಮ ಅಥವಾ ನೃತ್ಯ ಪದ್ಧತಿಯಲ್ಲದೇ ಕೈ ಕಾಲುಗಳ ವಿಧವಿಧವಾದ ಚಲನೆಗಳಿಂದ ಉಂಟು ಮಾಡುವ ದೈಹಿಕವಾಗಿ ಆಕ್ರಮಣವನ್ನು ತಡೆಗಟ್ಟುವ ಮತ್ತು ಪ್ರತಿ ಆಕ್ರಮಣ ಮಾಡುವ ತಂತ್ರ.

ಕ್ಯುಡೊಕಾನ್‌ ಶಾಲೆಯಲ್ಲಿ 22 ಕತಗಳನ್ನು ಅಭ್ಯಸಿಸುವರು. ಅವುಗಳೆಂದರೆ, ಫುಕ್ಯುಗತ 1 ಮತ್ತು 2, ಪಿನಾನ್‌ 1 ರಿಂದ 5, ನೈಹಂಚಿ 1ರಿಂದ 3, ಪಸ್ಸಿ 1 ಮತ್ತು 2, ಉನ್ಸು, ಜಿಯಾನ್‌, ಜಿತ್ತೆ, ಕುಶಾಂಕು 1 ಮತ್ತು 2, ಚಿಂಟಿ, ಸೈಸನ್‌, ಚಿಂಟೊ, ಸೊಚಿನ್‌, ಗೊಜುಶಿಹೊ. ಇವುಗಳೇನೆಂದರೆ, ತಡೆಯುವುದು, ಗುದ್ದುವುದು, ಬಿಸಾಕುವುದು ಇತ್ಯಾದಿ (block/punch/block, or joint strikelock/punch/throw).

ಭಾರತದ ಶೊರಿನ್‌-ರ್ಯು ಕ್ಯುಡೊಕಾನ್‌ ಶಾಖೆಯನ್ನು 4ನೆಯ ಡಾನ್‌ ಸೆನ್ಸೈ ಅರುಣ್‌ ಬೊಡಕೆ ಅವರು 2004 ರಲ್ಲಿ ಸ್ಥಾಪಿಸಿದರು. ಇವರೊಂದಿಗೆ ಸಹಾಯಕರಾಗಿರುವವರು ಸೆನ್ಸೈ ವಿನಾಯಕ ಸಕಪಾಲ, ಸೆನ್ಸೈ ಕಿರಣ್‌ ಭಟ್‌ ಮತ್ತು ಸೆನ್ಸೈ ಅರುಣ ಮೋರೆ.

ಕರಾಟೆಯ ಕೆಲವು ಪಾರಿಭಾಷಿಕಗಳು :

 1. ಷೊಮೆನ್‌-ನಿ - ಮುಂದಕ್ಕೆ
 2. ರೈ- ಬಾಗಿ ನಮಸ್ಕರಿಸು
 3. ಸೆನ್ಸೈ- ಮಾಸ್ತರ
 4. ಸೆಂಪೈ- ಶಿಕ್ಷಕ
 5. ಓಟೊಗೈ- ಸಹವರ್ತಿ
 6. ಓ ನೆಗೈ ಶಿಮಾಸ್‌ -ನಾನು ನಿಷ್ಪ್ರಯೋಜಕನಾದರೂ, ದಯವಿಟ್ಟು ನನ್ನನ್ನು ತಿಳಿಯಿರಿ
 7. ಓಟ್ಸುಕರೆ ಸನ್‌ ದೇಶಿತ - ಒಳ್ಳೆಯ ಆಚರಣೆಯ ವಿದ್ಯಾರ್ಥಿ ನಮ್ಮಲ್ಲಿದ್ದನು
 8. ಡೊಮೊ ಅರಿಗತೌ ಗೊಜೈ ಮಶಿತ - ಬಹಳ ಧನ್ಯವಾದಗಳು
 9. ಮ - ಅ - ಇ -ನನ್ನ ಮತ್ತು ಸಹವರ್ತಿಯ ಮಧ್ಯೆಯ ಅಂತರ
 10. ಕಿಯೈ- ಹೊಡೆದಾಡಲು ಅರಚು
 11. ಹಜಿಮೆ - ಪ್ರಾರಂಭಿಸು
 12. ಯಮೆ - ನಿಲ್ಲಿಸು
 13. ಮ-ಹನ್‌-ಮಿ - 45 ಡಿಗ್ರಿ ಕೋನದ ದೇಹ
 14. ಮಿಗಿ - ಬಲಕ್ಕೆ
 15. ಹಿದರಿ - ಎಡಕ್ಕೆ
 16. ಕಿಯಗೆ - ತಕ್ಷಣ, ಹರಿತ
 17. ಕೆಕೊಮಿ - ನಂಬುಗೆ ಇಡು
 18. ಕೊತೈ- ಹಿಂದೆ ಹೋಗು
 19. ನಿಲುವುಗಳು
 20. ಶಿಝೆನ್‌ ತೈ- ಸ್ವಾಭಾವಿಕ ನಿಲುವು
 21. ಹೆಇಸೊಕು ದಚಿ - ಪಾದಗಳು ಒಟ್ಟಿಗೆ
 22. ಮುಸುಬಿ ದಚಿ - ಪಾದ ಮತ್ತು ಹೆಬ್ಬೆರಳು ಹೊರಕ್ಕೆ
 23. ಯೊ ಇ (ಕಮಯಿ)- ಸಿದ್ಧನಾಗು
 24. ಹೆಇಕೊ ದಚಿ- ಸಮಾನಾಂತರ ನಿಲುವು
 25. ಝೆನ್‌ ಕುಟ್ಸು ದಚಿ- ಮುಂದುವರಿದ ನಿಲುವು
 26. ಸಂಚಿನ್‌ ದಚಿ - ಕಾಲದ ಗಾಜಿನ ನಿಲುವು
 27. ನೆಕೊ ಅಶಿ ದಚಿ - ಬೆಕ್ಕಿನ ನಿಲುವು
 28. ಶಿಕೊ ದಚಿ- ಸುಮೊ ಕುಸ್ತಿಯ ನಿಲುವು
ಆಕ್ರಮಣದ ಅಂಶಗಳು :
 1. ಅಟಮ - ತಲೆ
 2. ಕಸುಮಿ - ಹಣೆ
 3. ಮೆ - ಕಣ್ಣು
 4. ಜಿಂ ಚು - ಮೂಗಿನ ಕೆಳಭಾಗ
 5. ಕುಬಿ - ಕುತ್ತಿಗೆ
 6. ನೊಡೊ - ಗಂಟಲು
 7. ದಹಚು - ಎದೆಯ ಮಧ್ಯಭಾಗ
 8. ಸುಇ ಗೆಟ್ಸು - ಹೃದಯದ ಭಾಗ
 9. ಕೊಟೆ - ತೋಳು
 10. ಕಿನ್‌-ಟೆಕಿ - ಕಿಬ್ಬೊಟ್ಟೆ
 11. ಹಿರಿkು - ಮೊಳಕಾಲು
ಆಕ್ರಮದ ತಂತ್ರಗಳು :
 1. ಝುಕಿ - ಮುಷ್ಟಿ ಗುದ್ದು
 2. ಉಕೆ - ತಡೆ
 3. ಉಚಿ - ಹಿಡಿ
 4. ಒಸೈ - ಕೆಳಕ್ಕೆ ಒತ್ತು
 5. ಬುರಿ - ತೂಗು
 6. ಡೊರಿ - ತೂಗಿ ಹಿಡಿ
 7. ಜಿಮೆ - ಸ್ತಂಭನ (ಉಸಿರು ಕಟ್ಟಿಸು)
 8. ನಗೆ - ಎಸೆ
 9. ಜಪಾನಿ ಗಣನೆ
 10. ಇಚಿ- ಒಂದು
 11. ನಿ - ಎರಡು
 12. ಸನ್‌ - ಮೂರು
 13. ಶಿ - ನಾಲ್ಕು
 14. ಗೊ - ಐದು
 15. ರೊಕು - ಆರು
 16. ಶಿಚಿ - ಏಳು
 17. ಹಚಿ - ಎಂಟು
 18. ಕು - ಒಂಭತ್ತು
 19. ಜು - ಹತ್ತು
 20. ಜು ಇಚಿ - ಹನ್ನೊಂದು
 21. ನಿ ಜು - ಇಪ್ಪತ್ತು
 22. ಸನ್‌ ಜು - ಮೂವತ್ತು
 23. ಶಿ ಜು - ನಾಲ್ವತ್ತು
 24. ಗೊ ಜು - ಐವತ್ತು
 25. ರೊಕು ಜು - ಅರವತ್ತು
 26. ಶಿಚಿ ಜು - ಎಪ್ಪತ್ತು
 27. ಹಚಿ ಜು - ಎಂಬತ್ತು
 28. ಕು ತು - ತೊಂಬತ್ತು
 29. ಹ್ಯಕು - ನೂರು

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more