ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೆಲ್ಲದಕ್ಕಿಂತ ಮುಂಚೆ ಅಮೆರಿಕಕ್ಕೆ ಹೋದರೆ ಹ್ಯಾಗೆ ಅಂತ?

By Staff
|
Google Oneindia Kannada News

;?
‘ನಾನ್ಯಾಕೆ ಅಕ್ಕ ಸಮ್ಮೇಳನಕ್ಕೆ ಹೋಗಲಿಲ್ಲ ’ ಎಂದು ಪತ್ರಕರ್ತ ರವಿ ಬೆಳಗೆರೆ ತಮ್ಮ ಎಂದಿನ ಶೈಲಿಯಲ್ಲಿ ಇಲ್ಲಿ ಹೇಳಿದ್ದಾರೆ. ಜೊತೆಗೆ ತಾವು ನೋಡಬೇಕಾದ ಸ್ಥಳಗಳ ಬಗ್ಗೆ ಟಿಪ್ಪಣಿ ಬರೆದಿದ್ದಾರೆ.

  • ರವಿ ಬೆಳಗೆರೆ
ಪತ್ರಕರ್ತ ಮಿತ್ರ ವಿಶ್ವೇಶ್ವರ ಭಟ್‌ ಮತ್ತು ಗೆಳೆಯ ನಾಗ್ತಿ ಸೇರಿದಂತೆ ಅನೇಕ ಕನ್ನಡಿಗರು ಅಮೆರಿಕದ ‘ಅಕ್ಕ’ನ ಮನೆಗೆ ಹೋಗಿದ್ದಾರೆ. ‘ನೀನು ಬಾ’ ಅಂತ ವಿಶ್ವ ಮತ್ತು ನಾಗ್ತಿ ಒಂದೇ ಸಮನೆ ಕರೆದರು. ಹಚ್ಚಿಕೊಂಡಿರುವ ಕೆಲಸಗಳ ಮಧ್ಯೆ, ಸದ್ಯಕ್ಕೆ ಅಮೆರಿಕ-ಗಿಮೆರಿಕ ಎಲ್ಲ ಸುಳ್ಳು. ಬೆಂಗಳೂರು ಬಿಟ್ಟು ಕದಲುವ ಸ್ಥಿತಿಯಲ್ಲಿಲ್ಲ.

ಅಲ್ಲದೆ ನಂದೊಂದು ಹಟವಿದೆ. ನಾನಿನ್ನೂ ಪಕ್ಕದ ಬಾಂಗ್ಲಾ ದೇಶ್‌ ನೋಡಿಲ್ಲ. ಬರ್ಮಾ ನೋಡಿಲ್ಲ. ಕೊಲಂಬೋಗೆ, ಜಾಫ್ನಾಗೆ ಹೋಗಿಲ್ಲ. ನಾನು ಮತ್ತು ಮಾಳವಿಕಾ ಮೋಟರ್‌ ಬೋಟ್‌ನಲ್ಲಿ ಕೂತು ಕದ್ದಾದರೂ ಸರಿಯೇ ಜಾಫ್ನಾಗೊಮ್ಮೆ ಹೋಗಿ ಬರಬೇಕು ಅಂತ ವಿಲ್ಲುಪಿಳ್ನೈ ಪ್ರಭಾಕರನ್‌ ಮೇಲೆ ಆಣೆ ಮಾಡಿದ್ದೇವೆ. ಆದರೆ ನನಗೆ ಬನಶಂಕರಿಯಲ್ಲಿರುವ ಮನೆಗೆ ಹೋಗಲಿಕ್ಕೂ ಪುರಸೊತ್ತಿಲ್ಲ. ಮಾಳವಿಕಾ ಇತ್ತೀಚೆಗೆ ‘ ರಿkುೕ ಟೀವಿ’ ಸೇರಿಕೊಂಡು, ಅವಳಿಗೂ ಬಿಡುವು ಸಿಗುತ್ತಿಲ್ಲ.

ನಮ್ಮ ನೆರೆಹೊರೆಯ ರಾಷ್ಟ್ರಗಳನ್ನೇ ನೋಡದೆ, ಪ್ರಾಣ ಕಳೆದುಕೊಳ್ಳುವಷ್ಟು ಇಷ್ಟವಾದ ಬ್ರೆಜಿಲ್‌ನ ಮಳೆಕಾಡು, ದಿವಂಗತ ಮುರಳಿಯಾಂದಿಗೆ ನೋಡಬೇಕಿದ್ದ ರೋಮ್‌, ಈಜಿಪ್ತದ ಪಿರಾಮಿಡ್ಡುಗಳು, ಅಂಟಾರ್ಕ್‌ಟಿಕಾದ ಅಟ್‌ಲೀಸ್ಟ್‌ ಹೆಬ್ಬಾಗಿಲು, ವಿಯೆಟ್ನಾಂದ ಯುದ್ಧ ಸ್ಮಾರಕಗಳು, ಪ್ಯಾರಿಸ್‌ನ ಕಾಮದುರಂಧರರ ಅಡ್ಡೆಗಳು, ಪ್ಯಾರಿಸ್‌ನ ಮುಸಲ ದೇಗುಲ-ಇವ್ಯಾವನ್ನೂ ನೋಡದೆ ಅಮೆರಿಕಕ್ಕೆ ಹೋಗುವುದಾದರೂ ಹೇಗೆ?

ಯಾವತ್ತಾದರೂ ರಿಟೈರ್‌ ಅಂತ ಆದರೆ, ದೇಶ ದೇಶ ಸುತ್ತೋಣ ಅಂತ ಒಂದಿಷ್ಟು ದುಡ್ಡು-ಆರೋಗ್ಯ ಜಮೆ ಮಾಡಿಟ್ಟುಕೊಳ್ಳುತ್ತಿದ್ದೇನೆ. ನಮ್ಮ ಶಾಲೆಯ ಮಕ್ಕಳು ಅಮೆರಿಕದ ‘ಅಕ್ಕ’ ಸಮ್ಮೇಳನಕ್ಕೆ ಆಯ್ಕೆಯಾಗಿದ್ದವು. ಸರ್ಕಾರ ಕೂಡ ತುಂಬ ಶ್ರದ್ಧೆಯಿಂದ ತಾನು ಮಾಡಬಹುದಾದ ಎಲ್ಲ ಪ್ರಯತ್ನಗಳನ್ನೂ ಮಾಡಿತ್ತು. ಆದರೆ ವೀಸಾ ಸಿಕ್ಕಲಿಲ್ಲ. ಇಂಥದ್ದೊಂದು ಕೊನೇ ಕ್ಷಣದ ನಿರಾಸೆಗೆ ಸಿದ್ಧರಾಗಿರಿ ಅಂತ ಮೊದಲೇ ಎಚ್ಚರಿಸಿದ್ದರಿಂದ ಮಕ್ಕಳು ಗೆಲುವಾಗೇ ಇವೆ.

ಎಲ್ಲ ಕೆಲಸ, ಜಂಜಡಗಳ ಮಧ್ಯೆ ಬರಲಿರುವ ಸೆಪ್ಟೆಂಬರ್‌ 24ಕ್ಕೆ ‘ ಈ ಟೀವಿ’ಯವರ ‘ ಎಂದೂ ಮರೆಯದ ಹಾಡು’ ಕಾರ್ಯಕ್ರಮವಿದೆ. ಸೆಪ್ಟೆಂಬರ್‌ 25ಕ್ಕೆ ಹಾಯ್‌ ಬೆಂಗಳೂರ್‌ ಪತ್ರಿಕೆಯ ಹನ್ನೆರಡನೇ ಬರ್ತ್‌ಡೇ!


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X