ಕನ್ನಡ ಕಲಿ - ಒ0ದು ಅಪರೂಪದ ತಂಡ ಹಾಗೂ ಅದರ ಸಾಧನೆಗಳು

  • ಪ್ರವೀಣ್‌ ಬಿ. ಎಸ್‌., ಬೆಂಗಳೂರು
ಯಾವುದೇ ಒಬ್ಬ ವ್ಯಕ್ತಿ ಮಾಹಿತಿ ತ0ತ್ರಜ್ಞಾನದ ಸ0ಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆಂದರೆ ಮೊದಲು ಬರುವ ಭಾವನೆ, ರಾತ್ರಿ ಬಹಳ ಹೊತ್ತಿನವರೆಗೆ ಕೆಲಸ, ಬಿಡುವಿರದ ದುಡಿತ. ಇಂತಹ ಯಾಂತ್ರಿಕ ಬದುಕಿನಲ್ಲಿ ಎಂದಾದರೂ ಬೇಗ ಕೆಲಸ ಮುಗಿದರೆ ಮನೆಗೆ ಹೋಗೋಣವೆನಿಸುವುದು ಸರ್ವೇ ಸಾಮಾನ್ಯ. ಹೀಗಿರುವಾಗ ಈ ಎಲ್ಲಾ ಒತ್ತಡಗಳ ನಡುವೆ ತಮ್ಮ ಜೊತೆಯಲ್ಲಿ ಕೆಲಸ ಮಾಡುವ ಪರಭಾಷಿಕರಿಗೆ ಬೆಂಗಳೂರಿನಲ್ಲಿ ದೈನಂದಿನ ಜೀವನ ನಡೆಸಲು ಸಹಾಯ ಮಾಡಲೆಂದೇ ರೂಪುಗೊಂಡಿರುವ ಒಂದು ತಂಡದ ಕಿರುಪರಿಚಯ ಇಲ್ಲಿದೆ.

ಓದು ಮುಗಿಸಿ ‘ ಮುಂದೆ ಏನು? ’ ಎ0ದು ಯೋಚಿಸುವಾಗ ಮೊದಲು ಮನಸ್ಸಿಗೆ ಬರುವುದು ನಮ್ಮ ಉದ್ಯಾನ ನಗರಿ ಬೆ0ಗಳೂರು. ಹಾಗಾಗಿಯೇ ನಾಡು-ಭಾಷೆಯೆಂಬುದಿಲ್ಲದೆ ಭಾರತದ ಮೂಲೆಮೂಲೆಗಳಿಂದ ಯುವಕ-ಯುವತಿಯರು ನಮ್ಮ ಬೆಂಗಳೂರಿಗೆ ಬಂದು ನೆಲೆಸುತ್ತಿದ್ದಾರೆ. ಹೀಗೆ ಬಂದವರಿಗೆ ಇಲ್ಲಿ ದೈನಂದಿನ ಜೀವನ ನಡೆಸಲು ಕನ್ನಡ ಭಾಷೆಯ ಅವಶ್ಯಕತೆಯಿದೆ. ಹೀಗೆ ಕನ್ನಡ ಕಲಿಯಬೇಕೆಂಬ ಹಂಬಲ, ಇಚ್ಛೆ ಇರುವವರಿಗಾಗಿಯೇ ರೂಪುಗೊಂಡಿದೆ ಈ ‘ ಕನ್ನಡ ಕಲಿ’ ತಂಡ.

ಕೆಲವು ಉತ್ಸಾಹಿ ಯುವಕ/ಯುವತಿಯರು ಸ್ವಯಂ ಪ್ರೇರಿತರಾಗಿ ಕಟ್ಟಿರುವ ‘ ಕನ್ನಡ ಕಲಿ ’ ತಂಡಕ್ಕೆ ಈಗ ಒಂದು ವರುಷ. ಈ ಒಂದು ವರುಷದಲ್ಲಿ ಈ ತಂಡ ಸಾಧಿಸಿರುವ ಯಶಸ್ಸು ಬಹಳ. ಕಲಿಯಲು ಬರುವ ಗುಂಪು ಎಷ್ಟೇ ದೊಡ್ಡದಿದ್ದರೂ ಕೂಡ ನಿಭಾಯಿಸಬಲ್ಲದು ಈ ತಂಡ.

ಕೇವಲ ಬಾಯಿಪಾಠವಲ್ಲದೆ, ಹೆಚ್ಚಿನ ಚಟುವಟಿಕೆಗಳಿಂದ ಕೂಡಿದ ತರಗತಿಗಳು ನಡೆಯುತ್ತವೆ. ಕಲಿಯಲು ಬರುವವರಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ. ಆ ಮೂಲಕ ಕನ್ನಡ ಭಾಷೆಯನ್ನು ಬೇಗ ಕಲಿಯುವಂತೆ ಸಹಾಯ ಮಾಡಲಾಗುತ್ತದೆ.

ಕನ್ನಡ ಕಲಿಯಲು ಪ್ರತಿ ಬಾರಿಯೂ ನೋ0ದಾಯಿಸಿಕೊಳ್ಳುವವರ ಸಂಖ್ಯೆ ಸರಾಸರಿ 65 ಇರುತ್ತದೆ. 12-15 ಸ್ವಯಂಸೇವಾ ಕಾರ್ಯಕರ್ತರಿಂದ ಕೂಡಿದ ತರಬೇತುದಾರರ ಗುಂಪು, ಕನ್ನಡ ಭಾಷೆಯನ್ನು ಕಲಿಸಲು ವಿಶೇಷವಾದ ವಿಧಾನ ಅಳವಡಿಸಿಕೊ0ಡಿದೆ. ಮೊದಲಿಗೆ 20 ನಿಮಿಷಗಳ ಕಾಲ ಮುಖ್ಯ ತರಬೇತುದಾರನೊಬ್ಬ ಅಂದಿನ ದಿನ ಕಲಿಯಬೇಕಾದ ಪದಗಳ/ವಾಕ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಹೇಳುತ್ತಾರೆ.

ಆನಂತರ ಉಳಿದ ಸಮಯದಲ್ಲಿ, ವಿದ್ಯಾರ್ಥಿಗಳನ್ನು ಹಲವು ಚಿಕ್ಕ ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಪ್ರತಿ ಗುಂಪಿಗೆ ಒಬ್ಬ ತರಬೇತುದಾರನಿದ್ದು, ಅಂದು ಕಲಿತ ಪದಗಳನ್ನೂ/ವಾಕ್ಯಗಳನ್ನೂ ಹೇಗೆ ಬಳಸಬೇಕೆಂದು ಹೇಳಿಕೊಡಲಾಗುತ್ತದೆ. ಹತ್ತು ಹಲವು ಉದಾಹರಣೆಗಳ ಮೂಲಕ, ಜನರೊಡನೆ ಹೇಗೆ ಮಾತನಾಡಬೇಕೆಂದು ತಿಳಿಸಿಕೊಡಲಾಗುತ್ತದೆ.

ಹೀಗೆ ಎಲ್ಲ ಪದಗಳನ್ನು ಕಲಿತ ಮೇಲೆ, ವಾಸ್ತವದಲ್ಲಿ ಎದುರಿಸುವ ಸಂದರ್ಭಗಳನ್ನು ವಿದ್ಯಾರ್ಥಿಗಳಿಂದ ನಾಟಕದ ರೂಪದಲ್ಲಿ ಆಡಿಸುವುದರ ಮೂಲಕ ಕಲಿಕೆಗೆ ನೈಜತೆಯ ರೂಪ ಕೊಡಲಾಗುತ್ತದೆ.

ಇದಲ್ಲದೇ ಕನ್ನಡ ಸ0ಸ್ಕೃತಿಯನ್ನು ಬಿಂಬಿಸುವ ಹಲವು ಕಾರ್ಯಕ್ರಮಗಳ ತುಣುಕುಗಳನ್ನು ಬಿತ್ತರಿಸುವ ಮೂಲಕ ಅವುಗಳ ಕಿರುಪರಿಚಯ ನೀಡಿ, ಕಲಿಯಲು ಬರುವವರಿಗೆ ಭಾಷೆಯು ಜೊತೆ ಜೊತೆಗೆ ಕರ್ನಾಟಕ ಸ0ಸ್ಕೃತಿಯ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ. ಹಾಗೆಯೇ ಕರ್ನಾಟಕದ ವಿಶೇಷ ತಿಂಡಿ ತಿನಿಸುಗಳ/ಅವುಗಳು ಸಿಗುವ ಸ್ಥಳಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.

ಈ ರೀತಿ ಕಳೆದ ಒಂದು ವರುಷದಿಂದ ಕನ್ನಡಕ್ಕಾಗಿ ದುಡಿಯುತ್ತಿದೆ ಈ ತಂಡ. ಈಗ ಹಿಂತಿರುಗಿ ನೋಡಿದರೆ, ಈ ತಂಡ ಸಾಧಿಸಿದ ಯಶಸ್ಸು ಕಲಿಸಲು-ಕಲಿಯಲು ಉತ್ತೇಜನ ನೀಡುತ್ತದೆ. ಒಂದು ವರ್ಷದ ಅವಧಿಯಲ್ಲಿ 400ಕ್ಕೂ ಹೆಚ್ಚು ಆಸಕ್ತರು ಕನ್ನಡ ಕಲಿತಿದ್ದಾರೆ. ಇದಲ್ಲದೆ, ಆಸಕ್ತಿಯಿಂದ ಕಲಿತವರ ಕೋರಿಕೆಯ ಮೇರೆಗೆ 25-30 ಜನರಿಗೆ ಓದುವುದು ಹಾಗೂ ಬರೆಯುವುದನ್ನೂ ಕಲಿಸಲಾಗಿದೆ.

ಕನ್ನಡ ಭಾಷೆ/ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಕರ್ನಾಟಕದಲ್ಲಿರುವ ಪ್ರತಿಯೊಬ್ಬರನ್ನೂ ಮುಖ್ಯವಾಹಿನಿಗೆ ತರಬೇಕಾಗಿದೆ. ಆದರೆ ಇದು ಸುಲಭದ ಮಾತಲ್ಲ. ಅವರುಗಳು ಮುಖ್ಯವಾಹಿನಿಗೆ ಬರಬೇಕಾದರೆ ಅವರಿಗೆ ಕನ್ನಡದ ಬಗ್ಗೆ ಗೌರವ ಬರಿಸಬೇಕು. ಹೀಗೆ ಗೌರವ ಬರಬೇಕಾದರೆ ಅವರುಗಳಿಗೆ ಕನ್ನಡ ಸ0ಸ್ಕೃತಿಯ ಬಗ್ಗೆ ತಿಳಿವಳಿಕೆ ನೀಡಬೇಕು. ಇದಕ್ಕೆ ಕನ್ನಡ ಭಾಷೆ ಗೊತ್ತಿರಬೇಕು. ಕನ್ನಡಭಾಷೆ ತಿಳಿದಿದ್ದರೆ ತಾನೆ ತಾನಾಗಿ ಕನ್ನಡ ಸ0ಸ್ಕೃತಿಯ ಬಗ್ಗೆ ಗೌರವ ಬರುತ್ತದೆ.

ಹೀಗಾಗಿ ನಾವುಗಳು ಮಾಡಬೇಕಾದ ಕರ್ತವ್ಯವೇನೆಂದರೆ ಪರಭಾಷಿಕರಿಗೆ ಕನ್ನಡ ಕಲಿಯಲು ಒಂದು ಅವಕಾಶ ಮಾಡಿಕೊಡಬೇಕು. ಇದನ್ನು ಮುಖ್ಯವಾಗಿ ವೃತ್ತಿಪರರಾದ ನಾವು ಪ್ರಾರಂಭಿಸಬೇಕು. ಇದಕ್ಕೆ ಮುಖ್ಯ ಕಾರಣ, ಪರಭಾಷಿಗರು ವೃತ್ತಿಪರ ಸ0ಸ್ಥೆಗಳಲ್ಲಿ ಹೆಚ್ಚಾಗಿ ಇದ್ದಾರೆ. ಆದ್ದರಿಂದ ನಾವು ಈ ‘ ಕನ್ನಡ ಕಲಿ ’ ಕಾರ್ಯಕ್ರಮವನ್ನು ಆದಷ್ಟು ಹೆಚ್ಚು ಸ0ಸ್ಥೆಗಳಲ್ಲಿ ಪ್ರಾರಂಭಿಸಬೇಕೆಂಬುದೇ ನಮ್ಮ ಆಶಯ. ಈಗಾಗಲೇ ಕೆಲವು ಸ0ಸ್ಥೆಗಳಲ್ಲಿ ಈ ಕಾರ್ಯಕ್ರಮ ಪ್ರಾರಂಭವಾಗಿ ಯಶಸ್ವಿಯಾಗಿ ನಡೆಯುತ್ತಿದೆ.

ನಿಮ್ಮ ಸ0ಸ್ಥೆಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸುವ ಇಚ್ಛೆ ಇದ್ದಲ್ಲಿ ದಯುವಿಟ್ಟು ಈ ಕೆಳಗೆ ನೀಡಿರುವ ಇ-ಅ0ಚೆ ವಿಳಾಸಕ್ಕೆ ಬರೆಯಿರಿ : [email protected]

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+