ಹೀಗಿದ್ದರು, ನಮ್ಮ ನರಸಿಂಹಯ್ಯ!
- ಎ.ಆರ್.ಮಣಿಕಾಂತ್
ತಮ್ಮ ವೈಚಾರಿಕ ನಿಲುವು, ಸವಾಲಿನ ಪ್ರಶ್ನೆಗಳಿಂದ ಪವಾಡ ಪುರುಷರನ್ನು ಗಡಗಡ ನಡುಗಿಸಿದವರು ಎಚ್ಚೆನ್. ತಮ್ಮ ಹಾಸ್ಯ ಮಿಶ್ರಿತ ಮಾತುಗಳಿಂದ ಎಲ್ಲರನ್ನೂ ನಗಿಸುವಲ್ಲಿಯೂ ಎಚ್ಚೆನ್ ಯಶಸ್ವಿಯಾಗಿದ್ದರು. ಆಸ್ಪತ್ರೆಯಲ್ಲಿದ್ದ ಎಚ್ಚೆನ್ ಇಷ್ಟಿಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಹರ್ಷದ ಸುದ್ದಿ ಬಂದಾಗ, ಅವರು ಆದಷ್ಟು ಬೇಗ ತುಂಬ ಆರೋಗ್ಯದೊಂದಿಗೆ ತಮ್ಮ ಜತೆ ಸೇರಲಿ ಎಂಬುದು ಸಮಸ್ತ ಕನ್ನಡಿಗರ ಆಶಯವಾಗಿತ್ತು. ಆದರೆ ಎಚ್ಚೆನ್ ನಮ್ಮಿಂದ ದೂರವಾಗಿದ್ದಾರೆ.
ಎಚ್ಚೆನ್ ಸ್ವಂತ ಕಾರು ಹೊಂದಿರಲಿಲ್ಲ. ಬೆಂಗಳೂರಿನಲ್ಲಿ ತಮ್ಮ ಓಡಾಟಕ್ಕೆ ಆಟೋಗಳಿಗೆ ಮೊರೆ ಹೋಗುತ್ತಿದ್ದರು. ಬೆಂಗಳೂರಲ್ಲಿ 50ಸಾವಿರ ಆಟೋಗಳಿವೆ. ಅವುಗಳಿಗೆ ನಾನೇ ರಾಜ. ಯಾವ ಆಟೋ ಬೇಕಾದ್ರೂ ಹತ್ತಿ ಹೋಗಬಹುದು ಎನ್ನುತ್ತಿದ್ದರು.
ಬಹಳಷ್ಟು ಸಂದರ್ಭಗಳಲ್ಲಿ ತಾವು ಆಟೋದಲ್ಲಿ ಪ್ರಯಾಣ ಮಾಡಿದಾಗ ಆದ ಅನುಭವಗಳನ್ನು ಮತ್ತೆ ಮತ್ತೆ ನೆನಪು ಮಾಡಿ ಕೊಳ್ಳುತ್ತಿದ್ದರು. ಆಗಲೂ ಎಲ್ಲರನ್ನೂ ನಗಿಸುತ್ತಿದ್ದರು. ಅವರ ಆಟೋ ಅನುಭವಗಳ ಪೈಕಿ ಎರಡು ಪ್ರಸಂಗಗಳನ್ನು ಇಲ್ಲಿ ನೆನಪು ಮಾಡಿಕೊಳ್ಳಲಾಗಿದೆ.
- ಎಚ್ಚೆನ್ ಒಮ್ಮೆ ಆಟೋ ಹತ್ತಿ ಕುಳಿತರು. ರಿಕ್ಷಾ ಚಾಲಕ ಯಮ ವೇಗದಲ್ಲಿ ಗಾಡಿ ಓಡಿಸುತ್ತಿದ್ದ. ಎಚ್ಚೆನ್ ಸ್ವಲ್ಪ ನಿಧಾನವಾಗಿ ಹೋಗಪ್ಪ. ಆಕ್ಸಿಡೆಂಟ್ ಆದರೆ ಕಷ್ಟ ಅಂದರು. ಅದಕ್ಕೆ ಆತ- ‘ಸ್ವಾಮಿ, ನಿಶ್ಚಿಂತೆಯಾಗಿ ಕೂತುಕೊಳ್ಳಿ, ಸ್ವಲ್ಪವೂ ಭಯಪಡಬೇಡಿ. ಆಗೋದನ್ನ ತಪ್ಪಿಸಲು ಆಗೋದಿಲ್ಲ. ಎಲ್ಲಾ ಹಣೆಬರಹ. ಆಯಸ್ಸು ಮುಗಿದಿದ್ದರೆ ಎಷ್ಟೇ ನಿಧಾನವಾಗಿ ಹೋದರೂ ಅಪಘಾತ ಆಗೇ ಆಗುತ್ತದೆ’ ಎಂದು ಹೇಳಿ ಎಚ್ಚೆನ್ ಬಾಯಿ ಮುಚ್ಚಿಸಿದನಂತೆ!
- ಮತ್ತೊಂದು ಆಟೋ ಪ್ರಸಂಗ-ಇಲ್ಲೂ ಚಾಲಕನದ್ದು ಯಮ ವೇಗ. ತನ್ನ ರಿಕ್ಷಾದಲ್ಲಿ ಕೂತಿರುವವರು ಡಾ.ಎಚ್ಚೆನ್ ಎಂಬುದೂ ಆತನಿಗೆ ಗೊತ್ತಿತ್ತು. ಆಟೋದ ಎಕ್ಸ್‌ಪ್ರೆಸ್ ವೇಗ ಕಂಡು ಬೆದರಿದ ಎಚ್ಚೆನ್, ಸ್ವಲ್ಪ ನಿಧಾನವಾಗಿ ಹೋಗಪ್ಪ. ನಿನ್ನ ವೇಗ ಭಯ ಹುಟ್ಟಿಸುತ್ತೆ ಅಂದರು. ಆತ ತಕ್ಷಣವೇ-‘ಏನು ಸ್ವಾಮಿ, ಈ ವೇಗಕ್ಕೆ ಭಯಪಡ್ತೀರಿ. ನೀವು ಅಮೆರಿಕ, ಇಂಗ್ಲೆಂಡಿಗೆಲ್ಲ ಹೋಗಿದ್ದೀರಿ ಅಂತ ಕೇಳಿದ್ದೀನಿ. ವಿಮಾನ ಗಂಟೆಗೆ ನೂರಾರು ಕಿ.ಮೀ. ವೇಗದಲ್ಲಿ ಹೋಗ್ತದಂತೆ. ಆಗ ನಿಮಗೆ ಹೆದರಿಕೆ ಆಗಲಿಲ್ವೆ’ ಎಂದನಂತೆ.
ಈ ಮಾತು ಕೇಳಿ ಘೂಳ್ಳನೆ ನಕ್ಕ ಆಟೋ ಚಾಲಕ ‘ನೀವು ಹೇಳಿದ್ದು ಕರೆಕ್ಟ್ ಸಾರ್’ ಅಂದನಂತೆ. ಆಟೋದ ವೇಗ ತಗ್ಗಿಸಿದನಂತೆ.(ಸ್ನೇಹಸೇತು: ವಿಜಯ ಕರ್ನಾಟಕ)
ವಾರ್ತಾ ಸಂಚಯ
ವಿಭೂತಿ ಪುರುಷರ ವಿರೋಧಿ ಎಚ್. ವರಸಿಂಹಯ್ಯ ನಿಧನ











Click it and Unblock the Notifications