ಉಪಾಸನಾ : ಮನೆಯಂಗಳದಲ್ಲಿ 44ನೇ ಕವಿತಾ ಗಾಯನ

ರಾಜಧಾನಿ ನಗರದ ವೆಸ್ಟ್‌ ಆಫ್‌ ಕಾರ್ಡ್‌ರಸ್ತೆಯಲ್ಲಿರುವ ಮಹಾಲಕ್ಷ್ಮಿಪುರಂ ಬಡಾವಣೆಯ ಸಂಗೀತ ಶ್ರೋತೃ ಬಸವರಾಜು ಅವರ ಮನೆಯಂಗಳದಲ್ಲಿ ನೂರೈವತ್ತಕ್ಕೂ ಮಿಗಿಲು ನೆರೆದಿದ್ದ ಸಂಗೀತಾಸಕ್ತರು ಎರಡು ತಾಸು ಭಾವಗೀತೆಗಳ ಸವಿಯನ್ನು ಉಂಡರು.

ನ.27ರಂದು ನಡೆದ ‘ಮನೆಯಂಗಳದಲ್ಲಿ ಕವಿತಾಗಾಯನ’ ಕಾರ್ಯಕ್ರಮದಲ್ಲಿ ಕವಿಗೀತೆಗಳಿಗೆ ದನಿಯಾದವರು ಹಿರಿಯ ಗಾಯಕ ವಿಜಯ ಹಾವನೂರು. ದಿವ್ಯಾ ರಾಘವನ್‌ ಹಾಗೂ ನಾಗಚಂದ್ರಿಕ.

ಉಪಾಸನದ ಈ 44ನೇ ಮನೆಯಂಗಳದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನ್ಯೂಜೆರ್ಸಿಯ ಬೃಂದಾವನ ಕನ್ನಡ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್‌ ಮಾತನಾಡಿ, ನಾನು ಅಮೆರಿಕಾದಲ್ಲಿ ನೆಲೆಸಿದ್ದರೂ ಕರ್ನಾಟಕದಲ್ಲಿ ಜರುಗುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಕವಿತಾಗಾಯನದ ಸ್ವರೂಪಕ್ಕೆ ಹಾಗೂ ಯುವಕರಿಗೆ ಉತ್ತಮ ವೇದಿಕೆಯನ್ನು ಸಕ್ರಿಯವಾಗಿ ಕಲ್ಪಿಸುತ್ತಾ ಬಂದಿರುವ ಉಪಾಸನಾ ಮೋಹನ್‌ರ ಈ ಕಾರ್ಯ ನನ್ನಂತೆಯೇ ಬಹುತೇಕ ಅಮೆರಿಕನ್ನಡಿಗರಿಗೆ ಪ್ರಿಯವಾಗಿದೆ ಎಂದರು.

ದಿವಂಗತ ಮೈಸೂರು ಅನಂತ ಸ್ವಾಮಿ ಅವರು ಸ್ವರಸಂಯೋಜಿಸಿದ ‘ಜಯ ಭಾರತ ಜನನಿಯ ತನುಜಾತೆ’ ಗೀತೆಯಾಂದಿಗೆ ಕವಿತಾಗಾಯನ ಆರಂಭಗೊಂಡಿತು.

ಕುವೆಂಪು ವಿರಚಿತ ‘ಓಂ ಸಚ್ಚಿದಾನಂದ’ ಗೀತೆಯನ್ನು ವಿಜಯ ಹಾವನೂರು ಸುಮಧುರವಾಗಿ ಹಾಡಿದರು. ದಿವ್ಯಾರಾಘವನ್‌‘ಏನೇ ಬರಲಿ ಎಂತೇ ಇರಲಿ’ ಗೀತೆಯನ್ನು ಹಾಡಿದ ನಂತರ, ‘ಬಾಗಿಲೊಳು ಕೈ ಮುಗಿದು’ ಗೀತೆಯನ್ನು ನಾಗಚಂದ್ರಿಕ ಹಾಡಿದರು.

ಹೀಗೆ ನಿರಂತರವಾಗಿ ಸಾಗಿದ ಕವಿತಾ ಯಾತ್ರೆಯಲ್ಲಿ ‘ಅಗಣಿತ ತಾರಾ ಗಣಗಳ ನಡುವೆ’, ಹೆಸರು ಕೂಡ ತಿಳಿಯಲಿಲ್ಲ,‘ ಮಾತು ಬೆಳ್ಳಿ ಮೌನ ಚಿನ್ನ’, ‘ಹೆಂಡತಿಯಾಬ್ಬಳು ಮನೆಯಾಳಗಿದ್ದರೆ’,‘ಬಳ್ಳಿಯ ಬೆರಳಲಿ ಹೂವೊಂದಿತ್ತು’,‘ ಬದುಕು ಜಟಕಾ ಬಂಡಿ’,‘ ಮುಗಿಲ ಮಾರಿಗೆ’, ‘ಭೂಮಿನ್‌ ತಬ್ಬಿದ್‌ ಮೋಡಿದ್ದಂಗೆ’,‘ ಪ್ರಿಯತಮನಿಲ್ಲದೆ’,‘ ಬುತ್ತಿ ತಗೊಂಡ ಹೋಗ್ತೇನಿ ಹೊಲಕ’, ‘ಒಂದಿರುಳು ಕನಸಿನಲಿ’ ಉಲಿದವು.

ಇದೇ ಸಂದರ್ಭದಲ್ಲಿ ಪಂಚಮ್‌ ಹಳಿಬಂಡಿ ಹಾಗೂ ಉಪಾಸನಾ ಮೋಹನ್‌ ಬಿ.ಆರ್‌.ಲಕ್ಷ್ಮಣರಾಯರ‘ಜಾಲಿ ಬಾರಿನಲ್ಲಿ ಕುಳಿತು ಪೋಲಿ ಗೆಳೆಯರು’ ಗೀತೆ ಹಾಗೂ ದ.ರಾ. ಬೇಂದ್ರೆಯವರ ‘ಇಳಿದು ಬಾ’ ಗೀತೆಯನ್ನು ಹಾಡುವುದರೊಂದಿಗೆ ಅಂದಿನ ಗೀತಗಾಯನಕ್ಕೆ ಮಂಗಳ ಹಾಡಿದರು.

ಉತ್ತಮ ವಾದ್ಯಸಹಕಾರದಲ್ಲಿ ಆರ್‌.ಲೋಕೇಶ್‌, ಎನ್‌.ಗುರುರಾಜ್‌ ಹಾಗೂ ಬಿ.ಜೆ.ಭರತ್‌ ನೆರವಾದರು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+