ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನವಾಸಿ ಬಳಗದ 3ನೇ ವೃತ್ತಿಜೀವನ ಮಾರ್ಗದರ್ಶನ

By Staff
|
Google Oneindia Kannada News
  • ಪ್ರವೀಣ.ಬಿ.ಎಸ್‌ ಮತ್ತು ಪ್ರಶಾಂತ್‌
    [email protected]
ಹೊಸ ಸವಾಲು ಮತ್ತು ಹೊಸ ಆಯಾಮದೊಂದಿಗೆ ಬನವಾಸಿ ಬಳಗದ ಕನಸಿನ ಕೂಸಾದ ವೃತ್ತಿ ಜೀವನ ಮಾರ್ಗದರ್ಶನದ ಮೂರನೆ ಕಾರ್ಯಾಗಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಗಸ್ಟ್‌ 21 ರಂದು ಬಹಳ ಅಚ್ಚುಕಟ್ಟಾಗಿ ನಡೆಯಿತು.

ಹಿಂದೆರೆಡು ಕಾರ್ಯಕ್ರಮಗಳಿಂದ ಅನೇಕ ಪಾಠಗಳನ್ನು ಕಲಿತಿದ್ದೆವು, ಅಭ್ಯರ್ಥಿಗಳಿಂದ ತೆಗೆದುಕೊಂಡ ಅಭಿಪ್ರಾಯಗಳ ಮೇಲೆ ಮುಂದಿನ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಹೊಸ ವಿಷಯಗಳನ್ನು ಅಳವಡಿಸಲಾಗಿತ್ತು, ಮುಖ್ಯವಾಗಿ 2005ನೇ ಇಸವಿಯಲ್ಲಿ ಪದವಿ ಪಡೆದವರ ಮೇಲೆ ಕೇಂದ್ರೀಕೃತವಾದ ಈ ಕಾರ್ಯಕ್ರಮವನ್ನು 3 ಕಲಾಪದಲ್ಲಿ ವಿಗಂಡಿಸಲಾಗಿತ್ತು.

Thatskannada.com ಮತ್ತು ಇತರ ಕನ್ನಡ ಯಾಹೂ ಗುಂಪುಗಳಲ್ಲಿ ಪ್ರಚಾರ ಮಾಡಿದ್ದರ ಪರಿಣಾಮ ನಮ್ಮ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ತರುಣ/ತರುಣಿಯರು ನಮ್ಮ ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಮೊದಲು ನೊಂದಾುಸಿದವರಿಗೆ ಆದ್ಯತೆ ಮೇಲೆ ನಾವು ವ್ಯವಸ್ಥೆಯನ್ನು ಮಾಡಿದ್ದೆವು,ಆದರೆ ಬಹಳಷ್ಟು ಆಕಾಂಕ್ಷೆಯಿಂದ ಜನ ಬರುತ್ತಲೆ ಇದ್ದರು. ಬಂದವರಿಗೆ ನಿರಾಸೆಯಾಗಬಾರದೆಂಬ ದೃಷ್ಟಿಯಿಂದ ಬನವಾಸಿ ಬಳಗದ ಗೆಳೆಯರು ಎಲ್ಲರಿಗೂ ಆಸನದ ವ್ಯವಸ್ಥೆಯನ್ನು ಮಾಡಿಕೊಟ್ಟರು.

ವಿದೇಶಕ್ಕೆ ಹೊರಟಿದ್ದರೂ ಸಹ ಬನವಾಸಿ ಬಳಗದ ಕರೆಗೆ ಒಗೊಟ್ಟು ‘ವಿಚಿತ್ರಾನ್ನ’ ಖ್ಯಾತಿಯ ಶ್ರೀವತ್ಸ ಜೋಶಿಯವರು ನಮ್ಮ ಈ ಕಾರ್ಯಾಗಾರವನ್ನು ಉದ್ಘಾಟಿಸಿ, ಸ್ಫೂರ್ತಿಯುತವಾಗಿ ಮಾತನಾಡಿದರು.

ಕೆಲಸ ಹುಡುಕುವಾಗ ಹಾದುಹೊಗುವ ವಿವಿಧ ಹಂತಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಮೊದಲಿಗೆ ಐ.ಟಿ. ಕ್ಷೇತ್ರದಲ್ಲಿ ಸುಮಾರು 10 ವರ್ಷ ಅನುಭವವಿರುವ ಅನಿಲ್‌ ಅವರು ಬಂದವರಿಗೆ ಹೇಗೆ ರೆಸ್ಯೂಮೆ (ವೈಯಕ್ತಿಕ ವಿಷಯದ ನಮೂನೆ) ಬರೆಯಬೇಕು, ಯಾವ ರೀತಿ ವೇಷ-ಭೂಷಣ ಮತ್ತು ಹಾವ-ಭಾವ ಹೇಗಿರಬೇಕು ಮತ್ತು ರೆಸ್ಯೂಮೆನಲ್ಲಿ ಯಾವುದನ್ನು ಹಾಕಬೇಕು, ಯಾವುದನ್ನು ಹಾಕಬಾರದು ಎಂಬ ವಿಷಯಗಳನ್ನು ಸ್ಥೂಲವಾಗಿ ವಿವರಿಸಿದರು.

ಯಾವುದೇ ಕ್ಷೇತ್ರದಲ್ಲಿ ಇಂದು ಸ್ವ್ಪರ್ಧಾತ್ಮಕ ಪರೀಕ್ಷೆಗಳು ಸರ್ವೆ ಸಾಮಾನ್ಯ, ಹೇಗೆ ಇವುಗಳನ್ನು ಎದುರಿಸಬೇಕು ಎಂಬ ವಿಷಯದ ಮೇಲೆ ಭರತ್‌ ಹಾಗು ಶಶಿ ತರಿಕೆರೆ ಅವರು ಸಾಮರ್ಥ್ಯ ಪರೀಕ್ಷೆ (ಆಪ್ಟಿಟ್ಯೂಡ್‌ ಟೆಸ್ಟ್‌)ನ ಒಂದು ಅಣಕು ಪರೀಕ್ಷೆಯನ್ನು ನಡೆಸಿ ಉತ್ತರ ಹೇಗೆ ಇರಬೇಕೆಂಬುದರ ಬಗ್ಗೆ ವಿವರಣೆಯನ್ನು ನೀಡಿದರು.

ಇಂದು ಯಾವುದೇ ಐ.ಟಿ ಕ್ಶೇತ್ರದಲ್ಲಿ ಫ್ರೆಷರ್ಸ್‌ಗೆ ಟೆಸ್ಟಿಂಗ್‌ ಮೇಲೆ ಹೇರಳ ಅವಕಾಶಗಳು ಇರುವ ಕಾರಣ, ನಮ್ಮ ಕನ್ನಡಿಗರನ್ನು ಆ ನಿಟ್ಟಿನಲ್ಲಿ ತಯಾರಿ ಮಾಡುವ ಸಲುವಾಗಿ, ರಾಮ್‌ ಅಗರ ಅವರು ಸಾಫ್ಟ್‌ ವೇರ್‌ ಟೆಸ್ಟಿಂಗ್‌ ವೃತ್ತಿಯ ಸಂದರ್ಶನದ ತಯಾರಿಯನ್ನು ವಿವರಿಸಿದರು.

ಅನಂತಭಟ್‌ ಅವರಿಗೆ ಕನ್ನಡಿಗರ ಸಲುವಾಗಿ ಈ ವಿನೂತನ ಕಾರ್ಯಕ್ರಮದ ಬಗ್ಗೆ ಹೇಳಿದಾಗ, ಬಹಳ ಉತ್ಸುಕರಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮುಂದಾದರು. ವಿ.ಎಲ್‌.ಎಸ್‌.ಐ ಕ್ಶೇತ್ರದಲ್ಲಿ ಬಹಳ ಹೆಸರನ್ನು ಮಾಡಿ, ಅನೇಕ ಲೇಖನ ಮತ್ತು ಸಂಶೊಧನೆ ಮಾಡಿರುವ ಅವರು ಈ ಕ್ಶೇತ್ರದಲ್ಲಿ ಇರುವ ವಿಫುಲ ಅವಕಾಶ ಮತ್ತು ಅದಕ್ಕೆ ಮಾಡಬೇಕಾದ ತಯಾರಿ ಬಗ್ಗೆ ಮನ ಮುಟ್ಟುವಂತೆ ತಿಳಿಸಿಕೊಟ್ಟರು.

ಮಧ್ಯಾಹ್ನದ ಕಲಾಪ ರೂಪ ಶ್ರೀಧರ್‌ ಅವರ ವ್ಯಕ್ತಿ-ವಿಕಸನ ಮತ್ತು ಬೆಳವಣಿಗೆ ಕಾರ್ಯಕ್ರಮದೊಂದಿಗೆ ಶುರುವಾಯಿತು. ಒಂದು ಘಂಟೆಯ ಅಮೋಘವಾದ ಚರ್ಚೆಯಲ್ಲಿ ಸಮಯ ಹೊಗಿದ್ದು ತಿಳಿಯಲಿಲ್ಲ, ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದ ಈ ಕಲಾಪದಲ್ಲಿ ಬಂದಂತಹ ಉದ್ಯೋಗಾಕಾಂಕ್ಷಿಗಳೊಡನೆ ನಮ್ಮ ಬಳಗದ ಸದಸ್ಯರು ಸಹ ಭಾಗವಹಿಸಿ ತಮ್ಮ ಸಂದೇಹಗಳನ್ನು ಬಗೆಹರಿಸಿಕೊಂಡಿದ್ದು ಒಂದು ವಿಶೇಷ.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನಗಳು ದಿನೆ ದಿನೆ ಬದಲಾಗುತ್ತ ಇವೆ, ಯಾವುದನ್ನು ಕಲಿಯಬೇಕು ಯಾವುದನ್ನು ಬಿಡಬೇಕು ಎಂದು ಅನೇಕರಲ್ಲಿ ಸಂದೇಹವಿತ್ತು, ಅದನ್ನು ಹೊಸ ತಂತ್ರಜ್ಞಾನಗಳ ಬಗ್ಗೆ ಅಶೋಕ್‌ ಅವರು ಸಾಧಕ-ಭಾದಕಗಳ ಮೇಲೆ ವಿವರಣೆ ನೀಡಿ ಸಂದೇಹಗಳನ್ನು ಬಗೆಹರಿಸಿದರು.

ಕಳೆದ ಬಾರಿ ಜಾವ/ಜೆ2ಇಇ ಯ ಬಗ್ಗೆ ಅನೇಕರಿಂದ ಒತ್ತಾಯ ಬಂದಿತ್ತು. ಜಯಪ್ರಕಾಶ್‌ ಈ ವಿಷಯ ಕುರಿತು ಹೇಗೆ ತಯಾರಿ ನಡೆಸಬೇಕು ಎಂಬುದನ್ನು ಈ ಬಾರಿ ವಿವರಿಸಿಕೊಟ್ಟರು. ಕಿರಣ್‌ ಪಾಟೀಲ ಹಾಗು ಶಿವಕುಮಾರ್‌ ಅವರುಗಳು ಆರ್‌.ಡಿ.ಬಿ.ಎಮ್‌.ಎಸ್‌. ಬಗ್ಗೆ ಮಾರ್ಗದರ್ಶನ ನೀಡಿದರು.

ಕಾರ್ಯಾಗಾರದ ಕೊನೆಯಲ್ಲಿ ವಿದೇಶದಲ್ಲಿ ಇದ್ದರೂ ಈ ಕಾರ್ಯಕ್ರಮಕ್ಕೆ ಸಹಾಯ ಮಾಡಿದ ಬಳಗದ ಸದಸ್ಯರಾದ ರಮೇಶ ರಾವ್‌, ವೆಂಕಟೇಶ್‌ ಮತ್ತು ಜಯರಾಮ್‌ ಮೂರ್ತಿ ಮುಂತಾದ ಅನಿವಾಸಿ ಕನ್ನಡಿಗರ ಕೊಡುಗೆಯನ್ನು ನೆನೆಯಲಾಯಿತು.

ಜೊತೆಗೆ ಈ ಕಾರ್ಯಕ್ರಮವು ಯಶಸ್ವಿಯಾಗಲು ಸಹಕರಿಸಿದ ಅರ್ಚನ, ದಿವ್ಯ,ಮೋಹನ್‌, ಪ್ರಶಾಂತ, ನರ್ಮದ,ಭಾಸ್ಕರ, ಗುರು, ಶಶಿ, ಶಿವಕುಮಾರ್‌ ಹಾಗು ಇತರೆ ಬಳಗದ ಸದಸ್ಯರಿಗೆ ನಮ್ಮ ಧನ್ಯವಾದಗಳನ್ನು ಅರ್ಪಿಸಲಾುತು.

ಈ ಬಾರಿಯ ಕಾರ್ಯಾಗಾರದಲ್ಲಿ ಬನವಾಸಿ ಬಳಗದ ಬಹಳಷ್ಟು ಸದಸ್ಯರು ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿತು. ಕಾರ್ಯಾಗಾರದ ಕೊನೆಯಲ್ಲಿ ಬಂದ 75 ಉದ್ಯೋಗಾಕಾಂಕ್ಷಿಗಳಿಂದ ಈ ಕಾರ್ಯಾಗಾರದಿಂದ ಅವರಿಗೆ ಆದ ಅನುಭವ, ಈ ಕಾರ್ಯಾಗಾರದಿಂದ ಅವರಿಗೆ ಆಗುವ ಉಪಯೋಗ, ಇದರಲ್ಲಿ ನಾವುಗಳು ಮಾಡಿಕೊಳ್ಳಬಹುದಾದ ತಿದ್ದುಪಡಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಯಿತು.

ಇಷ್ಟೆಲ್ಲಾ ಕಲಾಪಗಳೊಡನೆ ಬನವಾಸಿ ಬಳಗವು ವೃತ್ತಿ ಜೀವನ ಮಾರ್ಗದರ್ಶನದ ಮೂರನೆ ಕಾರ್ಯಾಗಾರವನ್ನು ಯಶಸ್ವಿಯಾಗಿ ಪೂರೈಸಿತು, ಇದಕ್ಕೆ ಸಹಕಾರ ಕೊಟ್ಟ ಪ್ರತಿ ಕನ್ನಡಿಗನಿಗೆ ಬನವಾಸಿ ಬಳಗದ ಪರವಾಗಿ ಧನ್ಯವಾದಗಳು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳ ಅಭಿಪ್ರಾಯ-ಅನಿಸಿಕೆಗಳು

ಸುಚಿತ್ರ ಭಟ್‌ :- ‘ನನಗೆ ಈ ಕಾರ್ಯಕ್ರಮವು ಬಹಳ ಸಹಾಯ ಮಾಡಿತು, ಇದರ ಫಲವಾಗಿ ನನಗೆ ಐ.ಬಿ.ಯಂ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತು. ಬನವಾಸಿ ಬಳಗಕ್ಕೆ ಬಹಳ ಧನ್ಯವಾದಗಳು.’

ಶೇಷಾದ್ರಿ :- ‘ನೆನ್ನೆಯ ದಿನ ತಾವುಗಳು ಬನವಾಸಿ ಬಳಗದ ವತಿಯಿಂದ ನಡೆಸಿಕೊಟ್ಟ ಕೆರಿಯರ್‌ ಕೌನ್ಸೆಲಿಂಗ್‌ ಬಹಳ ಉಪಯುಕ್ತ ವಿಷಯಗಳನ್ನು ತಿಳಿಸಿ ಕೊಟ್ಟಿತು.’

ಗಿರೀಶ್‌ :- ‘ನನಗೆ ಈಗ ಅನಿಸುತ್ತಿದೆ ನಾನು ಈ ಮೊದಲೆರಡು 2 ಕಲಾಪಗಳನ್ನು ತಪ್ಪಿಸಿಕೊಳ್ಳಬಾರದಿತ್ತು ಅಂತ. ಕನ್ನಡ ಮತ್ತು ಕನ್ನಡಿಗರ ಪರ ನಿಮಗಿರುವ ಕಾಳಜಿ ಹಾಗೂ ಹೊರಾಟ ನಿಜವಾಗಲು ಹೆಮ್ಮೆಯ ವಿಷಯ.’

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X