ನಾಟಕಕಾರ ಕಂಬಾರರಿಗೆ ಆಂಧ್ರಕವಿ ಜಷುವಾ ಪುರಸ್ಕಾರ
ಬೆಂಗಳೂರು : ಕವಿ, ನಾಟಕಕಾರ ಡಾ.ಚಂದ್ರಶೇಖರ್ ಕಂಬಾರ ಅವರು, ಆಂಧ್ರಪ್ರದೇಶದ ಪ್ರತಿಷ್ಠಿತ ಪ್ರಶಸ್ತಿ ಜಷುವಾ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಗೊಂಡಿದ್ದಾರೆ.
ರಾಷ್ಟ್ರಮಟ್ಟದಲ್ಲಿ ವಿಶಿಷ್ಟ ಸಾಹಿತ್ಯ ರಚನೆಗಾಗಿ ಆಂಧ್ರಪ್ರದೇಶದ ಪ್ರಸಿದ್ಧ ಕವಿ ಜಷುವಾ ಅವರ ಸ್ಮರಣಾರ್ಥ ಜಷುವಾ ಫೌಂಡೇಷನ್ ಈ ಪುರಸ್ಕಾರವನ್ನು 1995ರಿಂದ ನೀಡುತ್ತಾ ಬಂದಿದೆ. ಫೌಂಡೇಷನ್ ಅಧ್ಯಕ್ಷ ಮತ್ತು ಕವಿ ಡಾ.ಸಿ.ನಾರಾಯಣರೆಡ್ಡಿ ಅವರ ಅಧ್ಯಕ್ಷತೆಯ ಸಮಿತಿ 2004ನೇ ಸಾಲಿನ ಪ್ರಶಸ್ತಿಗೆ ಕಂಬಾರರನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಒಂದು ಲಕ್ಷ ರೂ. ನಗದನ್ನು ಒಳಗೊಂಡಿದೆ.
ಹಿರಿಯ ಕವಿ ಹೆಸರಿನ ಪ್ರಶಸ್ತಿ ದಕ್ಕಿರುವುದು ವೈಯುಕ್ತಿಕವಾಗಿ ನನಗೆ ಖುಷಿ ತಂದಿದೆ ಎಂದು ಚಂದ್ರಶೇಖರ ಕಂಬಾರ ಪ್ರತಿಕ್ರಿಯಿಸಿದ್ದಾರೆ
(ಇನ್ಫೋ ವಾರ್ತೆ)











Click it and Unblock the Notifications