ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಾಕಾಂಕ್ಷಿ ಕನ್ನಡಿಗರಿಗೆ ಒಂದು ಕಿವಿಮಾತು

By Staff
|
Google Oneindia Kannada News
Career Guidance to unemployed Kannada youthಪ್ರಿಯ ಗೆಳೆಯರೆ,

ಅತ್ತ ಕರ್ನಾಟಕ ಏಕೀಕರಣವಾಗಿ ಅನೇಕ ವರ್ಷಗಳೆ ಕಳೆದಿದ್ದರೂ ಕನ್ನಡ ರಕ್ಷಣೆಗೆ ಚಳವಳಿ ತಪ್ಪಿಲ್ಲ, ಇತ್ತ ಐ.ಟಿ-ಬಿ.ಟಿ ಕ್ಶೇತ್ರದಲ್ಲಿ ದಶಕವೇ ಕಳೆದಿದ್ದರೂ ಅಲ್ಲಿರುವ ಕೆಲಸಗಳಲ್ಲಿ ಪರ-ಭಾಷಿಕರ ಹಾವಳಿ ತಪ್ಪಿಲ್ಲ.

ಕರ್ನಾಟಕದಲ್ಲಿ ‘ಕನ್ನಡಿಗರಿಗೆ ಕೆಲಸ ಸಿಗುತ್ತಿಲ್ಲ ’ ಅಂತ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಕೇವಲ ಶೇ.15ರಷ್ಟು ಕನ್ನಡಿಗರು ಕೆಲಸ ಮಾಡುವ ಐ.ಟಿ ಕ್ಷೇತ್ರವೇ ಇದಕ್ಕೆ ಉತ್ತಮ ನಿದರ್ಶನ. ಭಾರತದಲ್ಲಿ ಅತೀ ಹೆಚ್ಚು ಎಂಜಿನಿಯರಿಂಗ್‌ ಕಾಲೇಜುಗಳನ್ನು ಹೊಂದಿದ್ದರೂ ಸಹಾ ನಮ್ಮ ಕನ್ನಡಿಗರು ಐ.ಟಿ ಕ್ಷೇತ್ರದಲ್ಲಿ ಇಷ್ಟು ಕನಿಷ್ಠ ಸಂಖ್ಯೆಯಲ್ಲಿರುವುದು ನಮ್ಮ ದೌರ್ಭಾಗ್ಯ.

ಇವುಗಳ ನಡುವೆ ಈ ಸಮಸ್ಯೆಯನ್ನು ಅವಲೋಕಿಸಿದಾಗ ಕನ್ನಡಿಗರಿಗೆ ಕೆಲಸ ಸಿಕ್ಕದಿರುವುದಕ್ಕೆ ಹಲವಾರು ಕಾರಣಗಳುಂಟು :

  • ಸಂಪರ್ಕದ ಕೊರತೆ
  • ಮತ್ತೊಬ್ಬ ಕನ್ನಡಿಗನಿಗೆ ಸಹಾಯ ಮಾಡದೆ ಇರುವುದು
  • ಬೆಂಗಳೂರಿಗೆ ರಾಜ್ಯದ ಬೇರೆ ಕಡೆಯಿಂದ ಬಂದವರಿಗೆ ಮಾರ್ಗದರ್ಶನದ ಕೊರತೆ
ಇದರ ಮಧ್ಯೆಕನ್ನಡವನ್ನೇ ಉಸಿರಾಗಿಸಿಕೊಂಡ ‘ಬನವಾಸಿ ಬಳಗ’ ನಮಗೆದುರಾಗಿರುವ ಈ ಉದ್ಯೋಗ ಸಮಸ್ಯೆಗೆ ವಿನೂತನ ರೀತಿಯಲ್ಲಿ ಕೆಲಸ ಮಾಡುತ್ತಿದ್ದೆ. ಈ ನಿಟ್ಟಿನಲ್ಲಿ ‘ಕನ್ನಡ ಉದ್ಯೊಗಾಕಾಂಕ್ಷಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

Career Guidance to unemployed Kannada youthಈ ಸರಣಿಯ ಮೊದಲ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಆವರಣದ ಪಂಪ ಸಭಾಂಗಣದಲ್ಲಿ ಜೂನ್‌ 12ರಂದು ನಡೆಯಿತು. ಕಿಕ್ಕಿರಿದ ಸಭಾಂಗಣದಲ್ಲಿ ಸರಿ ಸುಮಾರು 3ಗಂಟೆಗಳ ಕಾಲ ನಡೆಯಿತು. ಬನವಾಸಿ ಬಳಗ ಕಳೆದ ಮೂರು ತಿಂಗಳಿಂದ ಸಾಕಷ್ಟು ಅಧ್ಯಯನ ಮಾಡಿ ಈ ಕಾರ್ಯಕ್ರಮವನ್ನು ರೂಪಿಸಿತ್ತು.

ಮುಖ್ಯವಾಗಿ ಎಂಜಿನಿಯರಿಂಗ್‌ ಪದವೀದರರನ್ನು (ಫ್ರೆಷರ್ಸ್‌) ಗುರಿಯಾಗಿಟ್ಟುಕೊಂಡು ಕಾರ್ಯಕ್ರಮ ನಡೆಸಲಾಯಿತು. ಉದ್ಯೋಗ ಬೇಟೆಯ ವಿವಿಧ ಮಜಲುಗಳ ಬಗ್ಗೆ ಪರಿಣಿತರು ಮಾಹಿತಿ ಒದಗಿಸಿದರು.

ಕುಮಾರಿ ಅರ್ಚನ ಅವರ ಸುಮಧುರ ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭವಾಯಿತು. ಭಾಸ್ಕರ್‌ ಅವರು ಬನವಾಸಿ ಬಳಗದ ಮತ್ತು ಅದರ ಕನ್ನಡ ಪರ ಕೆಲಸಗಳ ಬಗ್ಗೆ ಕಿರು ಪರಿಚಯ ಮಾಡಿಕೊಟ್ಟರು.

ಐ.ಟಿ ಕ್ಷೇತ್ರದಲ್ಲಿ 10 ವರ್ಷ ಅನುಭವ ಪಡೆದಿರುವ ಅನಿಲ್‌ ತಮ್ಮ ಅನುಭವಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಸಿ.ವಿ(ರೆಸ್ಯೂಮ್‌) ಹೇಗೆ ಇರಬೇಕು , ಅದರಲ್ಲಿ ಯಾವ ಅಂಶಗಳಿರಬೇಕು, ಸಂದರ್ಶನಕ್ಕೆ ಹೋಗುವಾಗ ನಮ್ಮ ವೇಷ-ಭೂಷಣ ಹೇಗಿರಬೇಕು, ಅಲ್ಲಿ ನಮ್ಮ ವ್ಯವಹಾರ ಜ್ಞಾನ ಹೇಗಿರಬೇಕು ಎಂಬ ಮಹತ್ವದ ಸಂಗತಿಗಳನ್ನು ಅವರು ಪರಿಚಯಿಸಿದರು.

ನಂತರ ಜಯಪ್ರಕಾಶ್‌ ಅವರು ಮಾತನಾಡಿ, ಸಂದರ್ಶನ ಎದುರಿಸುವುದು ಹೇಗೆ?, ಅಲ್ಲಿನ ಪ್ರಶ್ನೆಗಳು ಸಾಮಾನ್ಯವಾಗಿ ಹೇಗಿರುತ್ತವೆ? ಯಾವ ರೀತಿ ಪ್ರಶ್ನೆಗಳಿಗೆ ಯಾವ ರೀತಿ ಉತ್ತರ ಕೊಡಬೇಕು ? ಎಂಬ ವಿಷಯಗಳನ್ನು ಮನ ಮುಟ್ಟುವ ರೀತಿ ವಿವರಿಸಿದರು.

ಕಿರಣ್‌, ಅಶೋಕ್‌ ಮತ್ತು ಪ್ರಶಾಂತ್‌ ತಾಂತ್ರಿಕ ಸಂದರ್ಶನಕ್ಕೆ ಹೇಗೆ ತಯಾರಿ ನಡೆಸಬೇಕು, ಯಾವ ಪುಸ್ತಕಗಳನ್ನು ಓದಬೇಕು ಎಂಬ ವಿಷಯಗಳ ಬಗ್ಗೆ ಮಾಹಿತಿ ಕೊಟ್ಟರು. ನಂತರ ಕಾರ್ಯಗಾರದ ಬಗ್ಗೆ ಆಭ್ಯರ್ಥಿಗಳಲ್ಲಿದ್ದ ಪ್ರಶ್ನೆ-ಸಂದೇಹಗಳಿಗೆ ಸೂಕ್ತ ಉತ್ತರಗಳನ್ನು ನೀಡಲಾಯಿತು. ಪ್ರಶ್ನೊತ್ತರ ಕಾರ್ಯಕ್ರಮ ನಿಜಕ್ಕೂ ಉಪಯುಕ್ತವಾಗಿತ್ತು.

ಕನ್ನಡಿಗರು ಹೆಚ್ಚು ಸಂಘಟಿತರಾಗಬೇಕು, ಪರಸ್ಪರ ಸಹಕಾರ ಮನೋಭಾವವನ್ನು ಬೆಳಿಸಿಕೊಳ್ಳಬೇಕು. ಹೆಚ್ಚು-ಹೆಚ್ಚು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಎಂಬ ಅಂಶಗಳು ಕಾರ್ಯಕ್ರಮದಲ್ಲಿ ವ್ಯಕ್ತವಾದವು. ಉದ್ಯೋಗಾರ್ತಿಗಳ ಆತ್ಮಾವಲೋಕನಕ್ಕೆ ಇದೊಂದು ವೇದಿಕೆಯಂತಿತ್ತು. ಮುಂದಿನ ಚಟುವಟಿಕೆಗಳಿಗೆ ಪೂರಕವಾಗುವಂತೆ, ಈ ಕಾರ್ಯಕ್ರಮದ ಬಗ್ಗೆ ಸಲಹೆ ಸೂಚನೆಗಳನ್ನು ಸ್ವೀಕರಿಸಿ, ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣರಾದ ಬನವಾಸಿ ಬಳಗದ ಸದಸ್ಯರಿಗೂ ಮತ್ತು ಪ್ರತ್ಯಕ್ಷ-ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ ನಾವು ಕೃತಜ್ಞರು.

ನಿಮಗೆ ಕೆಲಸ ಸಿಕ್ತಾ?


ಪೂರಕ ಓದಿಗೆ-
ಕನ್ನಡವ ಕಾಪಾಡು ನನ್ನ ಆನಂದಾ...
ಮುಂದಿನ ದಾರಿ ಯೋಜನೆ : 2015ರೊಳಗೆ ಕನ್ನಡನಾಡು ಸ್ವರ್ಗ!


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X