• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಸ್‌ ಕರಗುವ ಮುನ್ನ ಐಸ್‌ಕ್ರೀಮ್‌ ಕಥೆ

By Staff
|
 • ಶಾಲಿನಿ ಹೂಲಿ

shalini.s@greynium.com

 • ರೇವಣಸಿದ್ಧಪ್ಪ ದೊರೆಗಳ್‌

  revana.s@greynium.com

 • ಐಸ್‌ಕ್ರೀಮ್‌ ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಪ್ರೀತಿ ಗಳಿಸಿದ ಶೀತಲ ತಿನಿಸಿದು. ಕಾಲೇಜು ಹುಡುಗಿಯರನ್ನು ಪಟಾಯಿಸುವುದಕ್ಕೆ ಸಹಾ ಐಸ್‌ಕ್ರೀಮ್‌ ಬೇಕೇಬೇಕು. ಜೊತೆಗೆ ನಿಮ್ಮ ಮನೆ ಟಾಮಿಗೂ ಐಸ್‌ಕ್ರೀಮ್‌ ಕಂಡ್ರೆ ಖುಷಿ ಅಲ್ವಾ? ಈಗಂತೂ ಐಸ್‌ಕ್ರೀಮ್‌ ಬೇಸಗೆಗೆ ಸೀಮಿತವಾಗಿಲ್ಲ. ಅದು ಸರ್ವ ಜನಪ್ರಿಯ ಮತ್ತು ಸರ್ವ ಋತು ಪ್ರಿಯ!

  ತಿಂಡಿಪೋತ ಮನುಷ್ಯನ ಚಾಪಲ್ಯದ ಫಲವಾಗಿಯೇ ಹುಟ್ಟಿತು ಐಸ್‌ಕ್ರೀಮ್‌. ಎಲ್ಲೋ ಹುಟ್ಟಿದ ಐಸ್‌ಕ್ರೀಮ್‌ ಇಂದು ಭಾರತದ ತಿಂಡಿ ತಿನಿಸುಗಳ ರಾಜನಾಗಿದೆ. ಔತಣಕೂಟಗಳು, ಮದುವೆ-ಹುಟ್ಟುಹಬ್ಬಗಳಲ್ಲಿ ಐಸ್‌ಕ್ರೀಮ್‌ ಇಲ್ಲ ಅಂದ್ರೆ, ಜನ ಆಕಾಶವೇ ತಲೆ ಮೇಲೆ ಬಿದ್ದ ರೀತಿ ಮುಖ ಮಾಡುತ್ತಾರೆ!

  ಇಂತಹ ಐಸ್‌ಕ್ರೀಮ್‌ ಹುಟ್ಟಿತ್ತು ಎಲ್ಲಿ? ಮತ್ತು ಯಾಕೆ ಅನ್ನೋದು ನಿಜಕ್ಕೂ ಕುತೂಹಲಕಾರಿಯಾದ ಇತಿಹಾಸ ಹೊಂದಿದೆ. ಈ ಬಗ್ಗೆ ತಿಳಿಯಬೇಕಾದರೆ ಕೆರೋಲಿನ್‌ ಲಿಡೆಲ್‌ ಮತ್ತು ರಾಬಿನ್‌ವೇರ್‌ ಅವರು ಬರೆದ ‘ಐಸ್‌ಕ್ರೀಂ ಹಿಸ್ಟರಿ ಆ್ಯಂಡ್‌ಫೋರ್ಲಾಕ್‌’ ಪುಸ್ತಕ ಓದಬೇಕು.

  ಅದರಲ್ಲಿನ ಕಥೆಯಾಂದು ತುಂಬಾ ಮಜವಾಗಿದೆ. ಇಂಗ್ಲೆಂಡಿನ ರಾಜಕುಮಾರ ಚಾರ್ಲ್ಸ್‌-1 ತನ್ನ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ರಾಜ್ಯ ಪ್ರವಾಸಕ್ಕೆ ಹೋಗಿದ್ದ . ರಾಜಕುಮಾರನ ಫ್ರೆಂಚ್‌ ಸಲಹೆಗಾರನೊಬ್ಬ ಊಟದೊಂದಿಗೆ ಹೊಸ ತಿಂಡಿಯಾಂದನ್ನು ವ್ಯವಸ್ಥೆ ಮಾಡಿದ್ದ. ಅದನ್ನು ರಾಜಕುಮಾರ ಎಂದೂ ಕಂಡಿರಲಿಲ್ಲ, ತಿಂದೂ ಇರಲಿಲ್ಲ. ಸ್ನೋ-ಥರ ಗಟ್ಟಿ ಮಂಜಿನಂತೆ ಇರುವ ಈ ಪದಾರ್ಥ ಮೊದಲಬಾರಿಗೆ ಸೇವಿಸಿದಾಗ ಆತನಿಗೆ ರೋಚಕವೆನಿಸಿತ್ತು. ಅಪರೂಪದ ರುಚಿಗೆ ಖುಷಿಯಾದ. ಕೂಡಲೇ ಅದರ ಬಗ್ಗೆ ಮಾಹಿತಿ ಪಡೆದ(ಆ ತಿಂಡಿಯೇ ಐಸ್‌ಕ್ರೀಮ್‌!). ರಾಜಕುಮಾರ ತಡಮಾಡದೆ ಅಡಿಗೆಯವನನ್ನು ಕರೆದು, ಅವನಿಗೆ ವಾರ್ಷಿಕ 500 ಪೌಂಡ್‌ ಹಣ ನೀಡುವ ಭರವಸೆ ಯಾಂದಿಗೆ ತನ್ನ ಅರಮನೆಯ ಅಡುಗೆ ಮನೆಗೆ ಕಾಯಂ ಆಗಿ ನೇಮಿಸಿಕೊಂಡ. ಅಡುಗೆಭಟ್ಟನ ಹೆಸರು ಡಿ. ಮೈಕ್ರೋ ಅಂದಿನಿಂದ ಇಂಗ್ಲೆಂಡಿನ ಅರಮನೆಯಲ್ಲಿನ ಊಟದ ವೇಳೆಗೆ ಐಸ್‌ಕ್ರೀಂ ಅತ್ಯಂತ ಪ್ರಿಯವಾದ ‘ಮೆನ್ಯು’ ವಾಗಿ ಮಾರ್ಪಟ್ಟಿತು.

  ಐಸ್‌ಕ್ರೀಮ್‌ ಬಗ್ಗೆ ಮತ್ತೊಂದು ಕಥೆ ಸಹ ಇದೆ. ಮಾರ್ಕೋ ಫೋಲೋ(1254-1324) ಎಂಬಾತ ತನ್ನ ಚೀನಾ ಪ್ರವಾಸದ ಕಾಲದಲ್ಲಿ ಮೊದಲು ಇದನ್ನು ಕಂಡನಂತೆ. ನಾಲಿಗೆ ರುಚಿಗೆ ಸೋತುಹೋದ ಫೋಲೋ, ಅದನ್ನು ತನ್ನ ದೇಶ ಇಟಲಿಗೆ ಪರಿಚಯಿಸಲು ನಿರ್ಧರಿಸಿದ. ಆತ ಇಟಲಿಗೆ ಹೋಗಿ ಈ ಪದಾರ್ಥವನ್ನು ಪರಿಚಯಿಸಿದಾಗ ಅಲ್ಲಿ ಯಾರೂ ಬೆರಗಾಗಲಿಲ್ಲ. ಮುಂದೆ ಅಲ್ಲಿನ ರಾಜಕುಮಾರಿ ಡಿ. ಮೆಡಿಸಿಯು ತಾನು ಮದುವೆಯಾದಾಗ ಐಸ್‌ಕ್ರೀಮ್‌ ತಯಾರಿಸಬಲ್ಲ ಹಲವು ಪರಿಣಿತರನ್ನು ಆಕೆ ತನ್ನೊಂದಿಗೆ ಗಂಡನ ಮನೆ ಫ್ರಾನ್ಸಿಗೆ ಕರೆಯಾಯ್ದಳಂತೆ. ಕೆಲವೇ ದಿನಗಳಲ್ಲಿ ಫ್ರಾನ್ಸ್‌ ಅರಮನೆಯ ರಾಜಭೋಜನದಲ್ಲಿ ಐಸ್‌ಕ್ರೀಮ್‌ ಅಗ್ರಸ್ಥಾನ ಆಕ್ರಮಿಸಿಕೊಂಡಿತು. ಅಲ್ಲಿಂದ ಅದು ಇತರ ದೇಶಗಳಲ್ಲೂ ಪಸರಿಸಿ ರಾಜಮನೆತನಗಳ ಪ್ರತಿಷ್ಠೆಯ ಭೋಜನ ಪದಾರ್ಥವಾಯಿತು.

  ಹೀಗೆ ಬೆಳೆದ ಐಸ್‌ಕ್ರೀಮ್‌ ಕೊನೆಗೊಮ್ಮೆ ವಾಣಿಜ್ಯ ರೂಪದಲ್ಲಿ ಮರು ಜನ್ಮತಾಳಿತು. ಅಮೆರಿಕದ ಜಾಕೋಬ ಫ್ಯೋಸೆಲ್‌ ಎಂಬಾತ ಉತ್ತರ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ 1851ರಲ್ಲಿ ಮೊದಲ ಐಸ್‌ಕ್ರೀಂನ ಉತ್ಪಾದನಾ ಘಟಕ ತೆರೆದ. ಅಲ್ಲಿಯವರೆಗೆ ಐಸ್‌ಕ್ರೀಮ್‌, ರಾಜಮನೆತನಗಳ-ಗಣ್ಯವ್ಯಕ್ತಿಗಳ-ರಾಷ್ಟ್ರಾಧ್ಯಕ್ಷರ ಪ್ರತಿಷ್ಠೆಯ ತಿನಿಸಾಗಿತ್ತು. ಜನಸಾಮಾನ್ಯರಿಗೆ ಅದರ ಬಗ್ಗೆ ಅರಿವಿರಲಿಲ್ಲ. ಫ್ಯೋಸೆಲ್‌ನ ಉತ್ಪಾದನಾ ಘಟಕದಿಂದ ಜನಸಾಮಾನ್ಯರಿಗೂ ಈ ತಿನಿಸು ಮುಟ್ಟತೊಡಗಿತು. ಅಮೆರಿಕದ ಜನರು ಜಾಕೋಬನನ್ನು ಐಸ್‌ಕ್ರೀಮ್‌ ಉದ್ದಿಮೆಯ ಜನಕನೆಂದು ಗುರ್ತಿಸಿದ್ದಾರೆ.

  ಜಾಕೋಬ್‌ ಫ್ಯೋಸೆಲ್‌ ಐಸ್‌ಕ್ರೀಂನ ಮೊದಲ ಉತ್ಪಾದನಾ ಘಟಕ ಆರಂಭಿಸಿದರೆ , ಅದನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದ್ದು ಒಬ್ಬ ಕೆನೆಡಿಯನ್‌. ಆತನ ಹೆಸರು ಥಾಮಸ್‌ವೆಬ್‌.

  ಪಾಪದ ಹೆಂಗಸು : ಅಮೆರಿಕಾಕ್ಕೆ ಐಸ್‌ಕ್ರೀಮ್‌ ಬಂದ ಬಗೆಯತ್ತ ಇಲ್ಲೊಂದು ಹೊಸ ವಿಚಾರವಿದೆ. ಅಮೆರಿಕಾದ ನ್ಯೂಜರ್ಸಿಯ ಮಹಿಳೆ ನ್ಯಾನ್ಸಿ ಜಾನ್ಸನ್‌ 1843ರಲ್ಲಿ ಐಸ್‌ಕ್ರೀಮ್‌ ತಯಾರಿಸುವ ಉಪಕರಣವೊಂದನ್ನು ಕಂಡು ಹಿಡಿದಳು. ನಂತರ ಅದರ ಪೇಟೆಂಟ್‌ ಹಕ್ಕ(ಪೇಟೆಂಟ್‌ ಸಂಖ್ಯೆ-3254)ನ್ನೂ ಸಹ ಪಡೆದಳು. ಈ ಪರಿಣಾಮ ಅಧಿಕೃತವಾಗಿ ಅಮೆರಿಕಾದ ಮನೆಮನೆಗಳಿಗೂ ಐಸ್‌ಕ್ರೀಮ್‌ ರುಚಿ ತಲುಪಲು ಕಾರಣವಾಯಿತು. ಆಕೆಯೇನೋ ಪೇಟೆಂಟ್‌ ಪಡೆದಳು. ಆದರೆ ಅದರಿಂದ ಐಸ್‌ಕ್ರೀಮ್‌ ಉಪಕರಣಗಳನ್ನು ತಯಾರಿಸಿ ಲಾಭ ಮಾಡಿಕೊಳ್ಳಲು ಬಂಡವಾಳವಿರಲಿಲ್ಲ. ಹಾಗಾಗಿ ಪೇಟೆಂಟನ್ನು 200 ಅಮೆರಿಕನ್‌ ಡಾಲರುಗಳಿಗೆ ಮಾರಿಕೊಂಡಳು. ಪೇಟೆಂಟ್‌ ಕೊಂಡ ವ್ಯಕ್ತಿ ಕನಸಿನಲ್ಲೂ ಎಣಿಸದಷ್ಟು ಲಾಭ ಮಾಡಿಕೊಳ್ಳಲು ಐಸ್‌ಕ್ರೀಮ್‌ ಹೆದ್ದಾರಿಯಾಯಿತು. ಆಕೆಗೆ ಈ ಲಾಭಮಾರ್ಗ ತಿಳಿದಿದ್ದರೆ ಸಾಲಸೋಲ ಮಾಡಿಯಾದರೂ ವ್ಯವಹಾರ ಮಾಡುತ್ತಿದ್ದಳೋ ಏನೋ?

  ಮತ್ತಷ್ಟು ಇತಿಹಾಸ ಕೆದಕಿದಾಗ...

  ಸ್ವಲ್ಪ 1843ಕ್ಕಿಂತಲೂ ಹಿಂದೆ ಹೋಗಿ ಐಸ್‌ಕ್ರೀಮ್‌ ಇತಿಹಾಸವನ್ನು ಗಮನಿಸೋಣ. ಕ್ರಿಸ್ತಪೂರ್ವ 1100ನೇ ಶತಮಾನದಲ್ಲಿ ಶೈತ್ಯಾಗಾರ ತಂತ್ರದಿಂದ ತಿನಿಸನ್ನು ತಯಾರಿಸಿದ ದಾಖಲೆಗಳಿವೆ. ಅಲೆಕ್ಸಾಂಡರ್‌ ಮಹಾಶಯ ಮತ್ತು ರೋಮನ್‌ ಚಕ್ರವರ್ತಿ ನೀರೋ ಕ್ಲಾಡಿಯಸ್‌ ಸೀಜರ್‌ ಇದೇ ತರಹದ ತಿನಿಸನ್ನು ಬಳಸುತ್ತಿದ್ದರು ಮತ್ತು ಹಣ್ಣಿನ ರಸವನ್ನು ಪರ್ವತದಿಂದ ತಂದ ಹಿಮದಿಂದ ಮುಚ್ಚಿಟ್ಟು ತಂಪಾದ ಮೇಲೆ ಕುಡಿಯಲು ಬಳಸುತ್ತಿದ್ದರು. ಆದರೆ ಅವರು ಸವಿಯುತ್ತಿದ್ದುದು ಹಣ್ಣಿನ ರಸದಿಂದ ತಯಾರಿಸಿದ ಐಸನ್ನೇ ಹೊರತು ಈ ಕಾಲದ ಕೆನೆಭರಿತ ಐಸನ್ನಲ್ಲ. ಪ್ರಾಚೀನರು ಐಸ್‌ಕ್ರೀಮ್‌ ತಯಾರಿಸುವ ನಿಟ್ಟಿನಲ್ಲಿ ಸರಿಯಾದ ಮಾರ್ಗವನ್ನೇ ಹಿಡಿದಿದ್ದರು.

  1565ರಲ್ಲಿ ಇಟಲಿಯ ವಾಸ್ತುಶಾಸ್ತ್ರ ತಂತ್ರಜ್ಞ ಬರ್ನಾರ್ಡೋ ಬ್ಯುಯೋಂಟಾಲೆಂಟಿ ಮೊಟ್ಟೆ, ಕೆನೆ, ಸಕ್ಕರೆ ಮತ್ತು ವಿವಿಧ ಬಗೆಯ ಹಣ್ಣುಗಳಿಂದ ಇಟಾಲಿಯನ್‌ ಕಸ್ಟರ್ಡ್‌ ಎಂಬ ವಿಶಿಷ್ಟ ಐಸ್‌ಕ್ರೀಮ್‌ ತಯಾರಿಸಿದ್ದ. 1768ರಲ್ಲಿಯೇ ಪ್ಯಾರಿಸ್‌ನ ಪುಸ್ತಕ ಮಳಿಗೆಗಳಲ್ಲಿ ದಿ ಆರ್ಟ್‌ ಆಫ್‌ ಮೇಕಿಂಗ್‌ ಫ್ರೋಜನ್‌ ಡಜರ್ಟ್ಸ್‌ ಎಂಬ ಪುಸ್ತಕ ದೊರೆಯುತ್ತಿತ್ತು. ಇದರ ಕರ್ತೃ ಎಂ.ಏಮಿ. ಎಲಿಜಬೆತ್‌ ರ್ಯಾಫಲ್ಡ್ಸ್‌ ಅವರು 1769 ರಲ್ಲಿ ಬರೆದ ದಿ ಎಕ್ಸ್‌ಪೀರಿಯನ್ಸ್ಡ್‌ ಇಂಗ್ಲಿಷ್‌ ಹೌಸ್‌ ಕೀಪರ್‌ ಎಂಬ ಪುಸ್ತಕದಲ್ಲಿ ಐಸ್‌ಕ್ರೀಮ್‌ ಬಗ್ಗೆ ಬರೆದಿದ್ದಾರೆ.

  ನ್ಯೂಯಾರ್ಕ್‌ನ ಪ್ರಪ್ರಥಮ ಐಸ್‌ಕ್ರೀಮ್‌ ಮಾರಾಟ ಮಳಿಗೆ 1770ರಲ್ಲಿ ಆರಂಭವಾಯಿತು. ಅಮೆರಿಕಾ ಅಧ್ಯಕ್ಷ ಜಾರ್ಜ್‌ ವಾಷಿಂಗ್ಟನ್‌ ಐಸ್‌ಕ್ರೀಮ್‌ ಮೇಲಿನ ಪ್ರೀತಿಗಾಗಿ ಐಸ್‌ಕ್ರೀಮ್‌ ತಯಾರಿಸುವ ಯಂತ್ರವನ್ನೇ ಖರೀದಿಸಿದ. ಥಾಮಸ್‌ ಜಫರ್‌ಸನ್‌ ಫ್ರಾನ್ಸ್‌ ಮಂತ್ರಿಯಾಗಿದ್ದ ಸಮಯದಲ್ಲಿ ಐಸ್‌ಕ್ರೀಮ್‌ ತಯಾರಿಸುವುದನ್ನು ಕಲಿತಿದ್ದ.

  ವೈಟ್‌ ಹೌಸ್‌ನಲ್ಲಿ ಅಡುಗೆ ಭಟ್ಟನಾಗಿ ಕೆಲಸಮಾಡುತ್ತಿದ್ದ ಆಫ್ರಿಕನ್‌-ಅಮೆರಿಕನ್‌ ವ್ಯಕ್ತಿ ಆಗಸ್ಟಸ್‌ ಜಾಕ್ಸನ್‌, 1832ರಷ್ಟು ಹಿಂದೆಯೇ ಐಸ್‌ಕ್ರೀಮ್‌ ಪಿತ ಎಂಬ ಬಿರುದು ಪಡೆದಿದ್ದ. ಆತ ಬಗೆಬಗೆಯ ಐಸ್‌ಕ್ರೀಮ್‌ ತಯಾರಿಸುತ್ತಿದ್ದನಲ್ಲದೇ ಅನೇಕ ಸುಧಾರಿತ ತಂತ್ರಗಳನ್ನು ಅಭಿವೃದ್ಧಿಪಡಿಸಿದ್ದ.

  ಐಸ್‌ ಕ್ರೀಮ್‌ ವಿಹಾರ : ದಿನ ನಿತ್ಯ ವಿಶೇಷ ರುಚಿಗೆ ಹಾತೊರೆಯುವ ನಮ್ಮ ನಾಲಿಗೆಗೆ ಹೊಸ ಪ್ರಯೋಗದ ಅವಶ್ಯಕತೆ ಇದೆ. ಅದರಂತೆ ಐಸ್‌ಕ್ರೀಂ ಕಂಡು ಹಿಡಿದ ಬಳಿಕ ಅವುಗಳಿಗೆ ವಿವಿಧ ವಿನ್ಯಾಸವನ್ನು ನೀಡಲಾಯಿತು. ಪ್ರಾರಂಭದಲ್ಲಿ ಐಸ್‌ಕ್ರೀಂ ಕೋನ್‌ ರೂಪದಲ್ಲಿ, ಟ್ಯೂಬ್‌ ರೂಪದಲ್ಲಿ ದೊರೆಯುತ್ತಿತ್ತು. ಕ್ರಮೇಣ ಕಪ್‌, ಹಡಗಿನ ರೂಪದಲ್ಲಿ, ಬಾಟಲ್‌ನಲ್ಲಿ ಐಸ್‌ಕ್ರೀಂನ ಬಣ್ಣ ಬಣ್ಣದ ವಿನ್ಯಾಸಗಳನ್ನು ಹುಟ್ಟಿಕೊಂಡಿತು.

  ಬರೀ ಇವರು ಐಸ್‌ಕ್ರೀಮ್‌ ಪುರಾಣ, ಇತಿಹಾಸವನ್ನೇ ಊದುತ್ತಿದ್ದಾರೆ, ಬೇರೆ ಮಾತಾಡುತ್ತಿಲ್ಲ ಎಂಬ ಕೋಪಬೇಡ. ಇನ್ನು ಮುಂದೆ ಐಸ್‌ಕ್ರೀಮ್‌ ವೈವಿಧ್ಯದ ಬಗ್ಗೆಯೂ ಸ್ವಲ್ಪ ತಿಳಿದುಕೊಳ್ಳೋಣ. ಮೂಲತಃ ಐಸ್‌ಕ್ರೀಮುಗಳನ್ನು ಕೆಳಗಿನ ಪದಾರ್ಥಗಳಿಂದ ಮಾಡುತ್ತಾರೆ,

  • ವೆನಿಲ್ಲಾ
  • ಚಾಕಲೇಟ್‌ ಮತ್ತು ಕೋಕಾ
  • ಹಣ್ಣುಗಳು
  • ಗೋಡಂಬಿ, ಜಾಜೀಕಾಯಿ, ಬದಾಮಿ, ಏಲಕ್ಕಿ, ತೆಂಗಿನಕಾಯಿ ಮುಂತಾದ ಕಾಯಿ ಪದಾರ್ಥಗಳು
  • ವಿವಿಧ ಬಗೆಯ ಬಣ ್ಣಗಳ ಬಳಕೆ

  ಇವುಗಳನ್ನು ಬಳಸಿಕೊಂಡು ನಾನಾತರಹದ ಐಸ್‌ಕ್ರೀಮ್‌ಗಳನ್ನು ತಯಾರಿಸಲಾಗುತ್ತದೆ. ಅವುಗಳಿಗೆ ಒಂದೊಂದು ತರಹದ ಹೆಸರುಗಳನ್ನಿಟ್ಟು ಜನಪ್ರಿಯಗೊಳಿಸಲಾಗುತ್ತದೆ.

  ಐಸ್‌ಕ್ರೀಮುಗಳು ಕೋನ್‌ಗಳಲ್ಲಿ(ಪಾಪಡಿ), ಬಟ್ಟಲಲ್ಲಿ(ಕಪ್‌ ಅಥವಾ ಗ್ಲಾಸ್‌) ಲಭ್ಯ. ಐಸ್‌ಕ್ರೀಮ್‌ಗಳು ಘನರೂಪದಲ್ಲಿ(ಗಟ್ಟಿಯಾಗಿ)ದೊರೆಯುವಂತೆಯೇ, ದ್ರವರೂಪದಲ್ಲೂ ದೊರೆಯುತ್ತವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಎರಡೂ ಬಗೆಯ ಐಸ್‌ಕ್ರೀಮ್‌ಗಳೂ ಸಮಾನ ಜನಪ್ರಿಯತೆ ಪಡೆದಿವೆ. ದ್ರವರೂಪದ ಐಸ್‌ಕ್ರೀಮ್‌ಗೆ ಯೋಗರ್ಟ್‌ ಎಂದು ಕರೆಯುತ್ತಾರೆ. ಭಾರತದಲ್ಲಿ ಯೋಗರ್ಟ್‌ ಅಷ್ಟೊಂದು ಜನಪ್ರಿಯವಾಗಿಲ್ಲ.

  ಭಾರತದಲ್ಲಿ ಡಬಲ್‌ ಸಂಡೆ, ಸಿಂಗಲ್‌ ಸಂಡೆ, ಫ್ರೂಟ್‌ ಸಂಡೆ, ಗಡ್‌ಬಡ್‌ ಮುಂತಾದ ಐಸ್‌ಕ್ರೀಮ್‌ ಭಾರೀ ಜನಪ್ರಿಯತೆ ಪಡೆದಿವೆ. ಇತ್ತೀಚೆಗೆ ಭಾರತದ ಮೂಲೆಮೂಲೆಗೂ ಇನ್ಸ್‌ಟಂಟ್‌ ಐಸ್‌ಕ್ರೀಮ್‌ ಮೇಕರ್‌ಗಳು ಬಂದಿವೆ. ಅವುಗಳನ್ನು ಭಾರತದ ಹೆಸರಾಂತ ಕಂಪನಿಗಳೇ ನಡೆಸುತ್ತಿವೆ. ಹಾಗಾಗಿ ಐಸ್‌ಕ್ರೀಮ್‌ ಜನಪ್ರಿಯತೆ ಅಪಾರವಾಗಿ ಬೆಳೆದಿದೆ. ಕರ್ನಾಟಕದ ಮಟ್ಟಿಗಂತೂ ಎಂಟಿಆರ್‌ ಐಸ್‌ಕ್ರೀಮ್‌ ತುಂಬಾ ಅಚ್ಚುಮೆಚ್ಚು. ಅದರ ಬೆಲೆಯೂ ಎಲ್ಲರ ಕೈಗೆಟುಕುವಂತಿದೆ. ಬೇಸಿಗೆಯಲ್ಲಿ ಎಂಟಿಆರ್‌ ಐಸ್‌ಕ್ರೀಮ್‌ಗಳನ್ನು ಕೊಳ್ಳಲು ಎಲ್ಲಿ ನೋಡಿದರೂ ಸರದಿಯ ಸಾಲುಗಳು...

  ಐಸ್‌ಕ್ರೀಂಗೆ ಸಂಬಂಧಪಟ್ಟಂತೆ ಎಷ್ಟೊಂದು ದಿನಗಳಿವೆ ಒಂದು ಸಲ ಕಣ್ಣಾಡಿಸಿ :

  ನ್ಯಾಷನಲ್‌ ರಾಕಿ ರೋಡ್‌ ಡೇ - ಜೂನ್‌ 2

  ಐಸ್‌ ಕ್ರೀಂ ಸೋಡಾ ಡೇ- ಜೂನ್‌ 20

  ನ್ಯಾಷನಲ್‌ ಐಸ್‌ ಕ್ರೀಂ ತಿಂಗಳು- ಜುಲೈ 1ರಿಂದ 31

  ನ್ಯಾಷನಲ್‌ ಐಸ್‌ಕ್ರೀಂ ಡೇ-ಜುಲೈನ ಮೂರನೇ ಭಾನುವಾರ

  ಕ್ರಿಯೇಟಿವ್‌ ಐಸ್‌ ಕ್ರೀಂ ಫ್ಲೇವರ್‌ ಡೇ - ಜುಲೈ 1

  ನ್ಯಾಷನಲ್‌ ಸ್ಟ್ರಾಬ್ರರಿ ಸಂಡೇ ಡೇ -ಜುಲೈ 7

  ನ್ಯಾಷನಲ್‌ ಐಸ್‌ ಕ್ರೀಂ ಡೇ - ಜುಲೈ 16

  ನ್ಯಾಷನಲ್‌ ಪೀಚ್‌ ಐಸ್‌ ಕ್ರೀಂ ಡೇ- ಜುಲೈ 17

  ನ್ಯಾಷನಲ್‌ ವೆನಿಲ್ಲಾ ಐಸ್‌ಕ್ರೀಂ ಡೇ ಜುಲೈ 23

  ನ್ಯಾಷನಲ್‌ ಐಸ್‌ಕ್ರೀಂ ಸೋಡಾ ಡೇ- ಆಗಸ್ಟ್‌ 2

  ನ್ಯಾಷನಲ್‌ ಕ್ರೀಂ ಸಿಕಲ್‌ ಡೇ- ಆಗಸ್ಟ್‌ 14

  ನ್ಯಾಷನಲ್‌ ಸ್ಪ್ಯುಮೋನಿ ಡೇ- ಆಗಸ್ಟ್‌ 21

  ದಿ ಬರ್ತ್‌ ಆಫ್‌ ದಿ ಐಸ್‌ ಕ್ರೀಂ ಕೋನ್‌-ಸೆಪ್ಟೆಂಬರ್‌ 21

  ನ್ಯಾಷನಲ್‌ ಫ್ರಾಪ್‌ಡೇ- ಅಕ್ಟೋಬರ್‌ 7

  ನ್ಯಾಷನಲ್‌ ಪಾರ್‌ಫೇಟ್‌ ಡೇ-ನವೆಂಬರ್‌ 25

  ಐಸ್‌ ಕ್ರೀಂ ಮತ್ತು ವೈಲಿನ್ಸ್‌ ಡೇ- ಡಿಸೆಂಬರ್‌ 13

  ಪೂರಕ ಓದಿಗೆ-

  ನೀವು ಐಸ್‌ಕ್ಯಾಂಡಿ ಪ್ರಿಯರೇ? ಹೌದಾದರೆ ಈ ಬರಹವನ್ನು ಓದಿ ನೋಡಿ

  ಮುಖಪುಟ / ಸಾಹಿತ್ಯ-ಸಂಸ್ಕೃತಿ

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
  X