ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಗೆ ಗೊತ್ತೇ? ‘ಮೂವಿ’ಸೂತ್ರ : ಹೊಸ ಸಂಶೋಧನೆ

By Staff
|
Google Oneindia Kannada News
  • ರೇವಣಸಿದ್ಧಪ್ಪ ದೊರೆಗಳ್‌ ಸರೂರು
    [email protected]
ಒಂದು ಸಲ ತರಗತಿಯಲ್ಲಿ ಪಾಠ ನಡೆದಿರುವಾಗ, ತಿಮ್ಮ ಎದ್ದು ನಿಂತು, ಸರ್‌ ನಾನು ‘ಮೂವಿ’ಗೆ ಹೋಗಬಹುದಾ? ಎಂದು ಕೇಳಿದ. ಏನಯ್ಯಾ ಕ್ಲಾಸು ಬಿಟ್ಟು ಸಿನಿಮಾಗೆ ಹೋಗ್ತೀಯಾ? ನಾಚಿಕೆ ಆಗಲ್ವಾ? ಕಾಲೇಜು ಮುಗಿದ ಮೇಲೆ ಹೋಗುವೆಯಂತೆ, ಈಗ ಕೂತ್ಕೊ ಎಂದರು. ಸ್ವಲ್ಪ ಹೊತ್ತು ಕುಳಿತ ಅವನು ಚಡಪಡಿಸುತ್ತ ಮತ್ತೆ ಎದ್ದು ನಿಂತು, ಸರ್‌ ಹೋಗಬಹುದಾ? ಎಂದ. ಅದಕ್ಕೆ ಲೆಕ್ಚರರು ಒಂದು ಸಲ ಹೇಳಿದರೆ ಅರ್ಥವಾಗಲ್ವಾ ಸುಮ್ನೆ ಕೂತ್ಕೊ ಎಂದರು. ಅದಕ್ಕೆ ವಿದ್ಯಾರ್ಥಿಯು ಸರ್‌ ನಾನು ಹೋಗ್ತಿರೋದು ಕನ್ನಡ ‘ಮೂವಿ’ಗೆ ಸರ್‌, ಮೂರ್ನಾಲ್ಕು ನಿಮಿಷದಲ್ಲಿ ಬಂದ್ಬಿಡ್ತೀನಿ ಅಂದ. ಮೂರ್ನಾಲ್ಕು ನಿಮಿಷದಲ್ಲಿ ಬರ್ತೀನಿ ಅಂತಿದ್ದಾನೆ, ನಿಜವೋ-ಸುಳ್ಳೋ ನೋಡೋಣ ಎಂದು ಗುರುಗಳು ಅಪ್ಪಣೆ ಕೊಟ್ಟರು.

ಸ್ವಲ್ಪ ಹೊತ್ತಿನಲ್ಲೇ ಇನ್ನೂ ಕೆಲವು ವಿದ್ಯಾರ್ಥಿಗಳು(ವಿದ್ಯಾರ್ಥಿನಿಯರೂ ಸಹ)ಒಬ್ಬರಾದನಂತರ ಒಬ್ಬರು ಎದ್ದು ನಿಂತು ನಾವೂ ಮೂವಿಗೆ ಹೋಗಬೇಕು. ನಮಗೂ ಅವಕಾಶ ಕೊಡಿ ಸರ್‌ ಎಂದು ಕೇಳಿದರು. ಏನ್ರಯ್ಯಾ(ಏನ್ರಮ್ಮಾ) ಅವನು ಹೋದ ಅಂತ, ನೀವೂ ಹೋಗ್ತಿದೀರಾ?ಎಂದು ಗದರಿಸಿದರು. ಅಷ್ಟಕ್ಕೇ ಸಮ್ಮನಾಗದ ವಿದ್ಯಾರ್ಥಿಗಳು, ಅಲ್ಲ ಸರ್‌ ನಾವು ಇಂಗ್ಲಿಷ್‌ Movieಗೆ ಹೋಗ್ತಿರೋದು, ಅವನಿಗಿಂತಲೂ ಬೇಗ ಬರುತ್ತೇವೆ. ಯಾಕಂದ್ರೆ ಇಂಗ್ಲಿಷ್‌ Movie ಒಂದೂವರೆ ಗಂಟೆಯಲ್ಲಿ ಬಿಡುತ್ತೆ. ಕನ್ನಡ ‘ಮೂವಿ’ಎರಡೂವರೆ ಗಂಟೆಯಾಗುತ್ತೆ ಎಂದು ತಂಟೆ ನಡೆಸಿದ್ದರು. ಅಷ್ಟರಲ್ಲೇ ಮೂವಿಗೆ ಹೋಗಿ ಬಂದ ತಿಮ್ಮನನ್ನು ಕಂಡು ಸಹಪಾಠಿಗಳು ಪೆಚ್ಚಾದರು. ಮೂರು ನಿಮಿಷದಲ್ಲೇ ವಾಪಸು ಬಂದು ನನಗೆ ಕೊಟ್ಟ ಮಾತನ್ನು ವಿದ್ಯಾರ್ಥಿ ಉಳಿಸಿಕೊಂಡ ಎಂದು ಲೆಕ್ಚರರು ಖುಷಿಯಾದರು. ಆನಂತರ ಲೆಕ್ಚರರೂ ಸೇರಿದಂತೆ ಎಲ್ಲ ಸಹಪಾಠಿಗಳು ಅದ್ಯಾವ ಮೂವಿಯೋ ಇಷ್ಟು ಬೇಗ ಮುಗಿದದ್ದು ಹೇಳು ಎಂದು ಒತ್ತಾಯಿಸಿದರು. ಒತ್ತಾಯಕ್ಕೆ ಮಣಿದ ಆತ ಕಪ್ಪು ಹಲಗೆಯ(ಬ್ಲ್ಯಾಕ್‌ ಬೋರ್ಡ್‌) ಮೇಲೆ ಬರೆಯುತ್ತೇನೆಂದು ಹೇಳಿದ. ಅದಕ್ಕೆ ಲೆಕ್ಚರರು ಒಪ್ಪಿದರು. ಆತ ಬರೆದದ್ದು ಏನು ಗೊತ್ತೇ?

ಮೂ = ಮೂತ್ರ, ವಿ = ವಿಸರ್ಜನೆ

ಮೂತ್ರ ವಿಸರ್ಜನೆಗೆ ಹೋಗುತ್ತೇನೆ ಎಂದು ಹೇಳಲು ನಾಚಿಕೊಂಡ ತಿಮ್ಮ ಫಮೂವಿಫ ಎಂಬ ಫಾರ್ಮುಲಾ(ಸೂತ್ರ) ಕಂಡು ಹಿಡಿದಿದ್ದ. ಆ ಸೂತ್ರ ತಿಮ್ಮನ ಕಾಲೇಜೂ ಸೇರಿದಂತೆ ಎಲ್ಲ ಶಾಲಾ ಕಾಲೇಜುಗಳಲ್ಲಿ ಚಲಾವಣೆಗೆ ಬಂದಿತ್ತು. ಕಾಲೇಜಿನ ದಿನಗಳು ಮುಗಿದ ನಂತರವೂ ಲೆಕ್ಚರರು, ತಿಮ್ಮನ ಸಹಪಾಠಿಗಳು ‘ಮೂವಿ’ಗೆ ಹೋದಾಗಲೂ, Movieಗೆ ಹೋದಾಗಲೂ ತಿಮ್ಮನನ್ನು ನೆನೆಸಿಕೊಂಡು ನಗುತ್ತಿದ್ದರು. ನಗೆಯು ಅಲೆಅಲೆಯಾಗಿ-ಹೊನಲಾಗಿ ಅವರ ಬಗೆಯಲ್ಲಿ ಹರಿಯುತ್ತಿತ್ತು...

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X