• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾವಿ

By Staff
|

ಬೆಂಗಳೂರಿಗೆ ಬಂದ ಹೊಸತು. ಆಗ ನಾನು ವಿಜಯನಗರದ ಒಂದು ಮನೆಯಲ್ಲಿ ಬಾಡಿಗೆಗಿದ್ದೆ. ಆ ವರ್ಷ ಇಡೀ ರಾಜ್ಯದಲ್ಲೇ ನೀರಿನ ತೊಂದರೆ ಇತ್ತು. ಬೆಂಗಳೂರಿನಲ್ಲಿ ಎರಡು ದಿನಕ್ಕೊಮ್ಮೆ ಅಥವಾ ಮೂರು ದಿನಕ್ಕೊಮ್ಮೆ- ಹೀಗೇನೋ ಒಂದು ರೀತಿ ನೀರು ಸರಬರಾಜು ವ್ಯವಸ್ಥೆ ಮಾಡಿದ್ದರು. ಒಂದು ದಿನ ನನ್ನ ಮನೆಯ ಮಾಲಕರು ನನ್ನ ರೂಮಿಗೇ ಬಂದು ನೀರಿನ ಸ್ಥಿತಿ ಗಂಭೀರವಾಗಿರುವುದರಿಂದ ನಾನು ನೀರಿನ ಮಿತವ್ಯಯ ಮಾಡಿ ತಮ್ಮೊಡನೆ ಸಹಕರಿಸಬೇಕೆಂದು ಕೇಳಿಕೊಂಡರು. ಒಮ್ಮೊಮ್ಮೆ ಬಚ್ಚಲಿಗೆ ಹೋದಾಗಲೂ ಒಂದು ಬಕೆಟ್‌ನಷ್ಟು ನೀರನ್ನು ಬಳಸುವ ನನಗೆ ಅವರು ಮಾಡಿಕೊಂಡ ಮನವಿ ಸೂಕ್ತವಾದುದೇ ಆಗಿತ್ತು. ಆದರೂ ನಾನೊಂದು ಪ್ರಶ್ನೆ ಕೇಳಿದೆ- ಇಷ್ಟೆಲ್ಲಾ ಕಷ್ಟಾ ಪಡುವ ಬದಲು ಈ ಮನೆಯ ಕಂಪೌಂಡಲ್ಲೇ ಒಂದು ಯನ್ನೇಕೆ ತೋಡಿಸಬಾರದು ?

ಸ್ಪೇಸ್‌ ವೇಸ್ಟ್‌ ಆಗುತ್ತಲ್ಲಾ ಸಾರ್‌ ಎಂದರು. ನನಗೆ ದಿಗಿಲಾಯಿತು. ಅಂದರೆ ಎಂದೆ. ನೋಡಿ ಬೆಂಗಳೂರಿನಲ್ಲಿ ಮನೆ ಕಟ್ಟುವಾಗ ಯಾವುದನ್ನೇ ಆದರೂ ಸ್ಪೇಸ್‌ ಯೂಟಿಲಿಟಿ ದೃಷ್ಟಿಯಿಂದ ಬೇಕೋ ಬೇಡವೋ ಎಂದು ನಿರ್ಣಯಿಸಬೇಕಾಗುತ್ತದೆ. ಕಾರಣ - ಸೈಟ್‌ನ ಅಳತೆಯೇ ಚಿಕ್ಕದು. ಸೈಟ್‌ ಜಾಗದಲ್ಲಿ ಒಂದು ತೋಡಿ ಜಾಗ ದಂಡ ಮಾಡಿಕೊಳ್ಳುತ್ತಾರೆಯೇ ? ನಲ್ಲಿ ನೀರಿನ ವ್ಯವಸ್ಥೆ ಇದ್ದೇ ಇದೆಯಲ್ಲ ! ಅನಿವಾರ್ಯ ಸಂದರ್ಭಗಳಲ್ಲಿ ಸುಧಾರಿಸಿಕೊಳ್ಳಬೇಕು ಅಷ್ಟೇ ಎಂದು ಅವರು ದೀರ್ಘ ವಿವರಣೆ ನೀಡಿದರು. ಈ ಮಾತುಗಳಿಂದ ನನಗಾದ ಸಾಂಸ್ಕೃತಿಕ ಆಘಾತ ಬಣ್ಣಿಸುವುದು ತುಸು ಕಷ್ಟವೇ. ನನ್ನಲ್ಲಿ ಹಾದೂ ಹೋದ ತೀವ್ರವಾದ ಭಾವನೆಯೆಂದರೆ ಅಂತೂ ಈ ಜನ ಚಿರಂತನ ಪರಾಧೀನತೆಗೆ ಸಿದ್ಧರಾಗಿರುತ್ತಾರೆಯೇ ವಿನಾ ಶಾಶ್ವತ ಪರಿಹಾರ ಹುಡುಕಿಕೊಳ್ಳಲು ಸಿದ್ಧರಿಲ್ಲ ಎನ್ನುವುದು.

ಅಂದಿನಷ್ಟು ತೀವ್ರವಾಗಿ ಅಲ್ಲವಾದರೂ ಸಹ, ಇವತ್ತಿಗೂ ನಾನು ಇದೇ ಭಾವನೆ ಉಳ್ಳವನಾಗಿದ್ದೇನೆ. ನಲ್ಲಿ ನೀರಿನ ವ್ಯವಸ್ಥೆ ಇರಲಿ, ಬೇಡವೆಂದವರಾರು ? ಆದರೆ ತನ್ನದೇ ಆದ ಯೆಂಬುದೊಂದು ಬೇಡವೇ ? ಮನೆ ಎಂದ ಮೇಲೆ ನೀರು ಮತ್ತು ಬೆಳಕು - ಎರಡೂ ಮುಖ್ಯ ಸಂಗತಿಗಳ ಕುರಿತೂ ಮನುಷ್ಯ ಇಷ್ಟೊಂದು ಪರಾವಲಂಬಿಯಾಗಿ ಬಾಳಬೇಕೇ ? ಇರಲಿ. ಕೈಯಲ್ಲೊಂದು ಬೆಂಕಿ ಪೆಟ್ಟಿಗೆ ಅಥವಾ ಬ್ಯಾಟರಿ ಇರುವವರೆಗೂ ಬೆಳಕು ನಮ್ಮ ಕೈಯಲ್ಲಿದೆಯೆಂದು ಭಾವಿಸೋಣ. ಆದರೆ ನೀರಿನ ಕುರಿತು ? ನನ್ನ ಚಿಕ್ಕಂದಿನಿಂದಲೂ ನಾ ಕಂಡ ಮನೆಗಳಿಗೆಲ್ಲ ಇತ್ತು. , ಅದಕ್ಕೊಂದು ಸುಂದರವಾದ ಕಲ್ಲಿನ ಕಟ್ಟೆ, ಗಡ ಗಡ ಸದ್ದು ಮಾಡುವ ಗಡಗಡೆ, ಉರುಳು ಹಾಕಿಕೊಂಡು ಕೆಳಗೆ ಇಳಿದು ನೀರು ಕುಡಿದು ಮೇಲೇರುವ ತಾಮ್ರದ ಕೊಡಗಳು, ಗಡಗಡೆ ಸದ್ದಿನ ನಡುವೆ ಮಧುರವಾಗಿ ತೇಲುವ ಬಳೆಗಳ ಕಿಂಕಿಣಿ ನಾದ, ಮಳೆಗಾಲದಲ್ಲಿ ಕೈ ಹಾಕಿ ತೆಗೆಯಬಹುದಾದಷ್ಟು ತುಂಬಿ ತುಳುಕುತ್ತಿದ್ದ ಯ ಶ್ರೀಮಂತಿಕೆ, ಎಂಥ ಬಿರು ಬೇಸಿಗೆಯಲ್ಲೂ ದಿನಕ್ಕೆ ಎರಡು ಕೊಡ ನೀರು ಮೋಸ ಮಾಡದ ಅದರ ಹೃದಯವಂತಿಕೆ, ಎಷ್ಟೋ ಹಿತ್ತಿಲುಗಳಲ್ಲಿದ್ದ ಇಣುಕು ಗಳು, ಅಲ್ಲಿ ವಾಸವಾಗಿರುತ್ತಿದ್ದ ಕಪ್ಪೆ- ಕೇರೆ ಹಾವುಗಳು.... ಇವೆಲ್ಲವುಗಳ ಒಟ್ಟು ಲೋಕವನ್ನೇ ನಿರಾಕರಿಸುವ ಹೊಸ ಚಿಂತನಕ್ರಮಕ್ಕೆ ಸ್ತಂಭಿತನಾಗಿ ಕುಳಿತೆ.

ಮನೆಗೊಂದು ಅಂಗಳ ಮತ್ತು ಹಿತ್ತಿಲು ಇಲ್ಲವಾದರೆ ಹೇಗೆ ? ವಾಸಿಸುವ ಕಟ್ಟಡ ಮಾತ್ರವೇ ಮನೆಯಲ್ಲ ನನ್ನಂಥವರ ಪಾಲಿಗೆ. ಹಿರೇಗುತ್ತಿಯ ಮನೆ ಎಂದು ನೆನೆದರೆ ಕಣ್ಣಿಗೆ ಕಟ್ಟುವುದು ಒಂದು ಕಲ್ಲು ಪಾಗಾರ, ಪುಟ್ಟ ಹಿತ್ತಿಲು- ತೋಟ, , ಮನೆ ಪಾಗಾರದ ಅಂಚಿಗೇ ಒಂದು ಪಾರ್ಶ್ವಕ್ಕಿದ್ದ ವೃದ್ಧ ತಾತ್ವಿಕನಂಥ ಅಶ್ವತ್ಥ ಮರ, ಈ ಎಲ್ಲದರ ನಡುವೆ ನಾವು ವಾಸಿಸುತ್ತಿದ್ದ ಹಂಚಿನ ಮನೆ, ಕಿಟಕಿಯಾಚೆ ಗದ್ದೆ, ಅಲ್ಲಿ ಮಳೆಗಾಲದಲ್ಲಿ ಹಸಿರು ತುಂಬಿದ ಭತ್ತದ ಸಸಿಗಳು, ರಸ್ತೆ ಪಕ್ಕದ ಗೇರು ಮರ- ಇವನ್ನೆಲ್ಲ ಒಳಗೊಂಡ ಇಡೀ ಆವರಣ. ಇದೀಗ ಮನೆ ತನ್ನೆಲ್ಲ ವಿಸ್ತಾರ ವಿನ್ಯಾಸ ಕಳೆದುಕೊಂಡು ಎಂಟು ಸ್ಕ್ವೇರಿನ ಒಂದು ಚಿಕ್ಕ ಆಕೃತಿಯಾಗಿಯಷ್ಟೇ ಆಗಿ ಉಳಿದುಬಿಡುವ ಸನ್ನಿವೇಶ ದುಃಖ ಹುಟ್ಟಿಸಿತು. ಇಲ್ಲಿ ನಾಲ್ಕು ಮೂಲೆಗಳಿಗೆ ನಾಲ್ಕು ತೆಂಗಿನ ಮರಗಳನ್ನು ನೆಡಲು ಸಾಧ್ಯವಾದರೆ ಅದೇ ದೊಡ್ಡ ಪುಣ್ಯ ಎಂದುಕೊಳ್ಳುತ್ತಿದ್ದವನಿಗೆ ಇನ್ನೊಬ್ಬರು ಹಿರಿಯರು ಬೇರೆಯದೇ ತತ್ತ್ವಜ್ಞಾನ ಮುಂದಿಟ್ಟು ಗಾಬರಿಗೊಳಿಸಿದರು. ಅವರ ಪ್ರಕಾರ ಮನೆಯ ಸುತ್ತ ತೆಂಗು, ಬೇವು, ಲಿಂಬು, ಪಪ್ಪಳ ಕಾಯಿ- ಎಂದು ನೆಡುವುದು ವ್ಯಾವಹಾರಿಕತೆಯಲ್ಲ. ಅವನ್ನು ಯಾವುದೇ ಕಾಲದಲ್ಲಿ ಅಂಗಡಿಗಳಲ್ಲಿ ಕೊಳ್ಳುವುದಕ್ಕೆ ತಗಲುವ ವೆಚ್ಚ ಒಂದು ಕಡೆ ಬರೆದಿಡಿ. ಅದೇ ಪುಟ್ಟ ಸ್ಥಳದಲ್ಲಿ ಒಂದು ಪುಟ್ಟ ಕಟ್ಟಡ, ಒಂದೇ ಸ್ಕ್ವೇರಿನ ಕಟ್ಟಡ ಸಾರ್‌, ಕಟ್ಟಿಸಿಬಿಟ್ಟು ಬಾಡಿಗೆಗೆ ಕೊಡಿ- ಯಾವುದು ಲಾಭದಾಯಕ ಎಂದು ನೀವೇ ನಿರ್ಣಯಿಸಿ. ಇದು ಅವರು ನನಗೆ ತೋರಿದ ಅರ್ಥಶಾಸ್ತ್ರ . ಅದು ತುಂಬ ಕರಾರುವಾಕ್ಕಾದ ವ್ಯಾವಹಾರಿಕ ಜ್ಞಾನ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಕರಾರುವಾಕ್ಕಾದ ವ್ಯಾವಹಾರಿಕತೆಯು ಎಲ್ಲವನ್ನೂ ನಿರ್ಣಯಿಸಬೇಕೇ ಎಂದು ನನ್ನ ಅಳಲು.

ಮನೆಗೊಂದು ಬೇಕು. ಮಾನವ ಜೀವನವನ್ನು ನಿರ್ಮಿಸುವ ಪಂಚಭೂತಗಳಲ್ಲಿ ಒಂದಾದ ನೀರು ಒದಗಿಸುವ ಬಾಂಧವ . ಆ ಗೊಂದು ಕಟ್ಟೆ. ಪರೀಕ್ಷೆಗೆಂದು ಓದುತ್ತಿರುವ ಅಕ್ಕ, ಆ ಕಟ್ಟೆಯ ಮೇಲೇ ಕೂತು ‘ಕೂಗುತಿವೆ ಕಲ್ಲು , ಕಿವಿವೆತ್ತ ಕಿವುಡರಿರ ಕೇಳಿ ಆ ಸೊಲ್ಲು’ ಅಷ್ಟು ಒಳ್ಳೆಯ ಪದ್ಯವನ್ನು ಈ ಥರ ಹಾಡಿಕೊಂಡು ಹುಡುಗಾಟಿಕೆ ಮಾಡುತ್ತಿರುವ ಮಕ್ಕಳನ್ನು ಕಂಡು ಹಿತ್ತಲಿನ ಜತೆಗೂಡಿ ನಕ್ಕೀತೇ ? ಹಕ್ಕಿಯಾಂದು ಗಡಗಡೆಯ ಪಕ್ಕ ಅರೆ ನಿಮಿಷ ಕೂತು ‘ಅರೆ, ನನಗೆ ತಡವಾಯಿತು’ ಎಂಬಂತೆ ರೆಕ್ಕೆ ಫಡಫಡಿಸಿ ಹಾರಿ ಹೋಯಿತು.

ಇದೇ ಕಟ್ಟೆಯ ಬಳಿ ತಾಯಿ ಮಗಳನ್ನು ಅದೂ ಇದೂ ಮಾತನಾಡಿಸುತ್ತಾ ‘ಏನೇ ನಿನ್ನ ಅತ್ತೆ ನಿನ್ನನ್ನು ಪ್ರೀತಿಯಿಂದ ಮಾತನಾಡಿಸುತ್ತಾರೇನೇ ?’ ಎಂದು ತಗ್ಗಿದ ದನಿಯಲ್ಲಿ ಕೇಳಿದಳು. ಆಗ ಸಂಜೆಯಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ಹೊತ್ತಿನಲ್ಲಿ ತಾಯಿ ಮಗಳನ್ನು ಕಾಳಜಿಯಿಂದ ಮಾತನಾಡಿಸಿದ ಜಾಗ ಅದು. ಅದೆಷ್ಟೋ ಹೊತ್ತು ಮಾತನಾಡುತ್ತಿದ್ದು ಕತ್ತಲಾವರಿಸುತ್ತಿದ್ದಂತೆ ಧಡಭಡ ಎರಡು ಕೊಡ ನೀರು ಸೇದಿ ಹಿತ್ತಿಲ ಬಾಗಿಲಿನಿಂದ ತಾಯಿ, ಮಗಳು ಒಳ ಧಾವಿಸುವರು. ಮೂರು ಸಂಜೆಯಾಯಿತು. ದೀಪ ಹಚ್ಚಬೇಕು.

ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಣು ಸಣ್ಣ ಸ್ವಾತಂತ್ರದ ಭಾವ ತಂದುಕೊಂಡಿದ್ದು ಕಟ್ಟೆಯ ಬಳಿ. ಮನೆಯ ಪಕ್ಕದಲ್ಲೇ ಇದ್ದೂ ಮನೆಯ ಹೊರಗಿದೆ. ಅಲ್ಲಿ ಅತ್ತೆಯಿಲ್ಲ. ಮಾವನಿಲ್ಲ. ನಾದಿನಿಯರಿಲ್ಲ. ಕೊಡ ಹಿಡಿದು ಹಗ್ಗಮರಳು ಕಟ್ಟಿ ಕೆಳಬಿಟ್ಟಾಗ ಅದು ನೀರಿಗೆ ಧಾವಿಸುವಷ್ಟೇ ನಿರಾಳತೆ ಹೊಸ ಸೊಸೆಯ ಮನಸ್ಸನ್ನಾವರಿಸಿದೆ. ಯಾರೋ ಏನೋ ಅಂದುದಕ್ಕೆ ಅವಳು ಕಣ್ಣೀರನೊರೆಸಿಕೊಂಡುದು ಇದೇ ಸ್ಥಳದಲ್ಲಿ. ತವರು ಮನೆಯನ್ನು ನೆನೆದು ಅವಳ ಕಣ್ಣಿಂದ ಜಿನುಗಿದ ನೀರ ಹನಿ ಯ ನೀರಲ್ಲಿ ಬೆರೆತು ಹೋಯಿತು. ಕಟ್ಟೆಯ ಪಕ್ಕದಲ್ಲಿ ಅವಳು ತನ್ನ ಕಾಲ ಹಿಮ್ಮಡವನ್ನು ತಿಕ್ಕಿ ತೊಳೆದಳು. ಯಾರೂ ಇಲ್ಲದಾಗ ಸಂಜೆ ಹೊತ್ತು ಕಟ್ಟೆಯ ನೆರಳಲ್ಲಿ ಅವಳು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಳು.

ಹೆಣ್ಣಿನ ಬಾಳಿನ ಒಂದು ನೆಲೆಯಾಗಿ ಕಟ್ಟೆ ಅವಳ ತವರು ಮನೆಯಲ್ಲೂ, ಮದುವೆಯಾದ ಮನೆಯಲ್ಲೂ ಹಿತ್ತಿಲಲ್ಲಿ ನಿಂತಿದೆ. ಆರನೇ ಕ್ಲಾಸಿನಲ್ಲಿದ್ದಾಗ ಅವಳು ಬೂದಿಗುಡ್ಡೆ ಇಟ್ಟುಕೊಂಡು ಪಾತ್ರೆ ತೊಳೆಯಲು ಕಲಿತಿದ್ದು ಕಟ್ಟೆಗೆ ಪಕ್ಕದ ತೆಂಗಿನ ಮರದಡಿಯಲ್ಲಿ . ಆ ಮರ ಇವಳುಣಿಸಿದ , ಪಾತ್ರೆ ತೊಳೆದ ನೀರು ಕುಡಿದೇ ಇಷ್ಟುದ್ದ ಬೆಳೆಯಿತು. ಅವಳು ಬಟ್ಟೆ ತೊಳೆಯಲು ಕಲಿತಿದ್ದೂ ಇಲ್ಲೇ ಅಲ್ಲವೇ ? ಮುಟ್ಟಾದಾಗ ನಾಚಿ ನಿಂತಿದ್ದು ಈ ಯಿಂದ ಅನತಿ ದೂರದಲ್ಲಿ. ಅವಳ ಕಾಲೇಜು ಪಾಠಗಳ, ಚೇಷ್ಟೆಗಳ ವರದಿಯನ್ನು ತಾಯಿಗೊಪ್ಪಿಸಿದ್ದು, ಕಟ್ಟೆಯ ಪಕ್ಕದಲ್ಲಿ ಕುಳಿತುಕೊಂಡು. ಆಗ ತಾಯಿ ಅಬ್ಬಲಿಗೆ ಮೊಗ್ಗು ಕೊಯ್ಯುತ್ತಿದ್ದಳು. ಅವಳನ್ನು ನೋಡಲು ಬಂದ ಹುಡುಗನನ್ನು ರಸ್ತೆಯಲ್ಲಿ ಬರುತ್ತಿರುವಾಗಲೇ, ಈ ಕಟ್ಟೆಯ ಮರೆಯಿಂದ ಅವಳು ನೋಡಿ ಪುಲಕಗೊಂಡಳು. ಈಗಲೂ, ಮದುವೆಯಾಗಿ ಹತ್ತು ವರ್ಷಗಳ ಬಳಿಕವೂ ಕಟ್ಟೆಯ ಮೂಲೆಯನ್ನು ನೋಡಿದಾಗಲೆಲ್ಲಾ ಆ ನೆನಪು ಆವರಿಸಿ ಮುಗುಳು ನಗೆಯಾಂದು ಸಣ್ಣ ಮೋಡದಂತೆ ಅವಳ ಮೊಗದ ಮೇಲೆ ತೇಲಿ ಹೋಗುವುದು. ಕೈ ಹಿಡಿದವನು ಮದುವೆಯಾದ ದಿನ ಮರೆತು ಎಲ್ಲೋ ನಡೆದಾಗ ಯಿಂದ ನೀರು ಎತ್ತುತ್ತಿದ್ದವಳಿಗೆ ಎಲ್ಲಿಲ್ಲದ ದಣಿವೆನಿಸಿತು.

ಕಟ್ಟೆ ಇಡೀ ಸಂಸಾರದ ಕಥೆ ಬಲ್ಲುದು. ಆದರೆ ಅದು ಸ್ವಲ್ಪ ಮಟ್ಟಿಗೆ ಸ್ತ್ರೀ ಪಕ್ಷಪಾತಿ ಇರಬಹುದು. ಕಟ್ಟೆಯ ಪಕ್ಕದಲ್ಲಿ ಕುಳಿತು ಸುಖ ದುಃಖ ಹೇಳಿಕೊಂಡವರು ಬಹುಪಾಲಿಗೆ ಹೆಣ್ಣು ಮಕ್ಕಳೇ. ಅಪ್ಪನ ಮನೆಗೆ ಬಂದ ಅಕ್ಕ ತಂಗಿ ಚಿಕ್ಕಂದಿನ ದಿನಗಳನ್ನು ನೆನಪಿಸಿಕೊಂಡು ಸಂಭ್ರಮಿಸಿದ್ದು ಯ ಪಕ್ಕದಲ್ಲಿ ನಿಂತು, ‘ಈ ಸಲ ಅಡ್ಡಿಲ್ಲೆ. ಒಳ್ಳೆ ಮಳೆಯಾಜು. ಯಲ್ಲಿ ಚಲೋ ನೀರಿದ್ದು’ ಎಂದು ಅವರು ಮಾತಾಡಿಕೊಂಡರು. ಅವರ ಬಾಲ್ಯದ ನೆನಪುಗಳೊಡನೆ ಯೂ ಅಷ್ಟು ಹಿಂದಿನ ದಿನಗಳಿಗೊಮ್ಮೆ ಜೀಕಿ ಬಂದಿತು. ಅದಕ್ಕೇನಾದರೂ ಮಾತು ಬರುತ್ತಿದ್ದರೆ ‘ನಿಮ್ಮ ಗಂಡನ ಮನೆಯ ಯಲ್ಲೂ ನೀರು ಚೆನ್ನಾಗಿದೆಯಾ’ ಎಂದು ಕೇಳುತ್ತಿತ್ತೇನೋ.

ಕರಾವಳಿಯ ಗಳು ಪ್ರಖರ ಬೇಸಿಗೆಯ ಮೇ ತಿಂಗಳ ಹೊತ್ತಿಗೆ ಬತ್ತಿ ಹೋಗುವುದು. ಆದರೆ ಅಂಥ ದಿನಗಳಲ್ಲೂ ಕೇರಿಯಲ್ಲಿ ಕೆಲ ಗಳಾದರೂ ಬರಿಗೊಡಗಳಿಗೆ ಸಮಾಧಾನ ಹೇಳುತ್ತವೆ. ಕರಾವಳಿಯ ಊರುಗಳನ್ನು ಪ್ರತ್ಯಕ್ಷವಾಗಿ ಕಾಣದವರಿಗೆ ಇದು ಸೋಜಿಗವಾಗಿ ಕಾಣಬಹುದು. ಕಣ್ಣೆದುರಿಗಿರುವ ಈ ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಳ್ಳಬೇಕು. ಅದು ತೀರ ಅಗ್ಗವಾಗಿ ದೊರೆಯುವ ತಂತ್ರಜ್ಞಾನವಾಗಬೇಕು ಎಂದುಕೊಳ್ಳುತ್ತ ದೂರದ ಗಳಿಂದ ಬೇಸಿಗೆಯಲ್ಲಿ ನೀರು ಹೊತ್ತಿದ್ದೇವೆ. ಆದರೆ ಆ ಎಲ್ಲ ಯೋಚನೆಗಳೂ ಸಂಚಾರೀ ಭಾವಗಳೇ ಹೊರತು ಬೇರೇನಲ್ಲ.

ಕೆಲ ಕಾಲ ಒಳ್ಳೆಯ ಮಳೆಯಾಗುತ್ತಿದ್ದಂತೆ ಕರಾವಳಿಯ ಜನ- ಬನ- ದನಗಳ ಕಣ್ಣುಗಳಲ್ಲಿ ಬೇರೆಯದೇ ಬಣ್ಣ. ಶ್ರಾವಣದ ಮಳೆಯ ಹೊತ್ತಿಗಂತೂ ಹಿರೇಗುತ್ತಿಯ ಮನೆಯ ಯಿಂದ ನೀರನ್ನು ಕೈಯಿಂದಲೇ ಮೊಗೆದು ತೆಗೆಯಬಹುದಾಗಿತ್ತು. ಯಲ್ಲಿ ನೀರು ತುಂಬಿ ಹಿತ್ತಲಿಗೆ ಹರಿಯುವ ಈ ಸ್ಥಿತಿಗೂ ಎರಡು ಮೂರು ತಿಂಗಳುಗಳ ಹಿಂದೆ ತೊಟ್ಟು ನೀರಿಲ್ಲದೆ ಬಾಯ್ಬಿಡುತ್ತಿದ್ದ ದುರ್ಗತಿಗೂ - ನಡುವೆ ಕರಾವಳಿಯ ಜನ ಜೀವನ ಅದೆಷ್ಟೋ ಕಾಲದಿಂದ ಸಾಗಿ ಬಂದಿದೆ. ಜಲದೇವತೆಯ ಮುನಿಸನ್ನೂ ಕೃಪೆಯನ್ನೂ ಸಮಾನವಾಗಿಯೇ ಸ್ವೀಕರಿಸುವವರು ನಾವು. ನನ್ನ ಅಜ್ಜಮ್ಮನ ಪಾಲಿಗೆ ಆ ನೀರು ಗಂಗೆ. ನಮ್ಮ ಮನೆಯ ಯಲ್ಲಿ ಆ ಗಂಗಾಜಲ ಇದೆಯೆಂದು ಕುಂಕುಮ ಹಾಕುತ್ತಿದ್ದ ಧಾರ್ಮಿಕ ನಂಬಿಕೆ ಅವಳದು. ನಾವು ಕುಡಿಯುವ ನೀರು ಕಾವೇರಿ, ಗಂಗೆ, ಅದು ಪವಿತ್ರವಾದುದು ಎಂದು ತಿಳಿಯುವವರ ಭಾವನೆಗಳು ಎಷ್ಟು ದೊಡ್ಡವು ! ನಮ್ಮ ಮನೆಯ ಬರಿಯ ಯಲ್ಲ, ಅದರಲ್ಲಿರುವುದು ಬರಿಯ ನೀರಲ್ಲ- ಅದು ಗಂಗೆಯ ಸನ್ನಿಧಿ. ಭಗೀರಥ ಪ್ರಯತ್ನಿದಿಂದ ಧರೆಗಿಳಿದು ಬಂದ ದೇವಗಂಗೆ, ಹರನ ಜಡೆಯಿಂದ, ಹರಿಯ ಮುಡಿಯಿಂದ, ಋಷಿಯ ತೊಡೆಯಿಂದ ಇಳಿದು ಬಂದ ದೇವಿ ಇಲ್ಲೇ ಇದ್ದಾಳೆ. ನಮ್ಮ ಮನೆಯ ಯಲ್ಲೇ ಇದ್ದಾಳೆ.

ಹೀರೇಗುತ್ತಿಯ ನಮ್ಮ ಮೊದಲ ಮನೆಯಲ್ಲಿ ಇಣುಕು ಯಿತ್ತಂತೆ. ಮಧ್ಯಾಹ್ನ ತಂದೆ ಶಾಲೆಗೆ ಹೋದ ಸಮಯದಲ್ಲಿ ನೀರೆತ್ತುತ್ತಿದ್ದ ನಮ್ಮ ಆಯಿ ಆಯ ತಪ್ಪಿ ಯಲ್ಲಿ ಬಿದ್ದು ಬಿಟ್ಟಳಂತೆ. ಅದೃಷ್ಟವಶಾತ್‌ ಕಂಡವರು ಅವಳನ್ನು ಯಿಂದ ಮೇಲೆತ್ತಿ ನಮಗಾಗಿ ಉಳಿಸಿದರು. ಆಗ ಅವಳು ಗರ್ಭಿಣಿ. ಗಂಗೆ ಅವಳನ್ನು ಒಮ್ಮೆ ತನ್ನ ಬಳಿ ಕರೆದು ಹರಸಿ ಕಳಿಸಿದಳೇ ? ಮುಂದೆ ಆ ಗೊಂದು ಕಲ್ಲುಕಟ್ಟೆ, ಗಡಗಡೆ ಎಲ್ಲ ಬಂತು. ಆದರೂ ಇನ್ನೆಷ್ಟೋ ಗಳಿಗೆ ಇಂಥ ರಕ್ಷಣೆ ಇಲ್ಲ . ಹಳ್ಳಿ ಊರುಗಳಲ್ಲಿ ನೆಲದ ಪಾತಳಿಯಲ್ಲಿರುವ ಅಂತ ಗಳ ತೆರೆದ ಬಾಯನ್ನು ಕಂಡಾಗೊಮ್ಮೆ ಮೈ ನವಿರಾಗಿ ಕಂಪಿಸುವುದು.

ನಮ್ಮ ಇತಿಹಾಸದ ಒಳ್ಳೆಯ ರಾಜರುಗಳೆಲ್ಲ ಕೆರೆ- ಗಳನ್ನು ತೋಡಿಸಿದವರು, ಸಾಲು ಮರಗಳನ್ನು ನೆಡಿಸಿದವರು. ಅಂತರ್ಜಲಕ್ಕೇ ಲಗ್ಗೆಯಿಡುವ ಬೋರ್‌ವೆಲ್‌(ಕೊಳವೆ )ಗಳು ಈಗ ಕರ್ನಾಟಕದ ಹಳ್ಳಿಗಳುದ್ದಕ್ಕೂ ಇವೆ. ಆ ಕೊಳವೆಗಳ ಕೈ ಪಂಪುಗಳೊಡನೆ ಏರಿಳಿದ ಪುಟ್ಟ ಕೈಗಳ ಆಟ ನೋಡುತ್ತಾ ಮುದಗೊಳ್ಳುತ್ತೇನೆ. ಆದರೇನು ? - ಕೊಳವೆ ಗಳಿಗೆ ನಮ್ಮ ಸಾಂಪ್ರದಾಯಿಕ ಗಳ ಶಾಂತತೆ ಮತ್ತು ಸೌಂದರ್ಯ ಇಲ್ಲ. ಗಳು ಹಳ್ಳಿಯ ಮರ್ಯಾದೆಯ ಹೆಣ್ಣು ಮಕ್ಕಳಂತೆ ಮನೆ ಹಿಂದುಗಡೆ ನಿಂತಿದ್ದರೆ , ಕೊಳವೆ ಗಳು ಸಾರ್ವಜನಿಕ ಸ್ಥಳಗಳಾಗಿವೆ. ಆ ವೃತ್ತದ ಸುತ್ತ ನೀರು ವ್ಯರ್ಥವಾಗಿ ಹರಿಯುತ್ತಿದೆ, ತೀರ ವ್ಯರ್ಥವಲ್ಲ ಎಂಬಂತೆ ಹಸುಗಳು ಆ ನೀರನ್ನೇ ಕುಡಿಯಲೆತ್ನಿಸುತ್ತಿವೆ. ನೀರಿಗಾಗಿ ಚಡಪಡಿಸುತ್ತಿದ್ದ ಎಷ್ಟೋ ಪ್ರದೇಶಗಳಿಗೆ ಕೊಳವೆ ಗಳು ಜೀವದಾನ ಮಾಡಿವೆ ಎಂಬುದನ್ನು ಮರೆತು ಮಾತಾಡಲು ಸಾಧ್ಯವೇ ? ಆದರೆ ಗಳೆಂಬ ನನ್ನ ಕಲ್ಪನೆಗೆ ನೀರೆರೆಯುವುದು - ನಾನು ಚಿಕ್ಕಂದಿನಿಂದ ಕಂಡ ಕಟ್ಟೆಗಳು. ಎಂದೂ ಬತ್ತದ, ಬತ್ತಿದರೂ ಕೆಲದಿನಗಳಲ್ಲೇ ತುಂಬಿಕೊಳ್ಳಲಿರುವ ಒರತೆಗಳನ್ನು ತಮ್ಮೊಳಗೆ ರಕ್ಷಿಸಿಕೊಂಡ ಮದು, ದೃಢ ನಿಲುವಿನ ಪ್ರತೀಕದಂತಿರುವ ಗಳು ಅವು. ನಮ್ಮ ಹಿತ್ತಲಿನ ಗಿಡ ಮರಗಳಿಗೆ ಅವು ನೀರುಣಿಸಿವೆ. ‘ನನ್ನೊಳಗೆ ಅಪಾರ ಜಲನಿಧಿಯೇ ಇದೆ. ನಿಮ್ಮ ಪುಟ್ಟ ಬಿಂದಿಗೆಗಳಲ್ಲಿ ಅದೆಷ್ಟು ನೀರು ಹೊರಬಲ್ಲಿರಿ?’ ಎಂದು ಅದು ಕೇಳುತ್ತಿರುವಂತಿದೆ. ಬೆಟ್ಟದೊರತೆಗಳಿಂದ ಅದು ನೀರು ತಂದು ಮತ್ತೆ ಮತ್ತೆ ಹುಟ್ಟುತ್ತಿದೆ. ಆಕೆ ಪುನರಾವರ್ತನೆಯಾದರೂ ಚಿರಯೌವನೆ. ಪಾತ್ರ ಅದೇ. ಪಾತ್ರೆ ಅದೇ- ಅದರೊಳಗೆ ಹೊಸ ನೀರನ್ನು ತುಂಬುತ್ತಲೇ ಇದೆ.

ಬದುಕು ಜಡವಾಗಬಾರದು, ಕೊಳೆತ ನೀರಾಗಬಾರದು. ಹಸುರುಗಟ್ಟುವುದು ನೀರಿನ ಮರಣ. ನನ್ನ ಅದನ್ನೊಲ್ಲದು. ಅದು ಹೊಸ ನೀರು ತುಂಬಿಕೊಂಡು ಹೊಸ ಬಾಯಾರಿಕೆಗೆ ತಂಪೊದಗಿಸುತ್ತಲೇ ಇರುವುದು. ನಿನ್ನ ಪುಟ್ಟ ಸೈಟಲ್ಲೂ - ‘ಪರವಾಗಿಲ್ಲ, ನನಗೊಂದು ಜಾಗ ಕೊಡಪ್ಪ, ನಾನು ನಿನ್ನ ತಾಯಿ-ಗಂಗೆ’ ಎಂದು ಅದು ಹೇಳಿದಂತಾಗುವುದು. ಈ ಪುಟ್ಟ ಸೈಟಲ್ಲಿ ಗಂಗೆ ಅವತರಿಸಲು ಭಗೀರಥ ಪ್ರಯತ್ನವೇನೂ ಬೇಡವಲ್ಲ ಎನ್ನುತ್ತ ಅಚ್ಚರಿಗೊಳುವೆ. ಯಿಂದ ಎದ್ದು ಬಂದ ತಾಮ್ರದ ಕೊಡದೊಳಗಿನ ನೀರು ‘ನೀನಂದುಕೊಂಡುದು ನಿಜ’ ಎನ್ನುವಂತಿದೆ. ಅರೆರೇ - ಕೊಡದೊಳಗೆ ನುಸುಳಿದ್ದ ಮರಿ ಮೀನೊಂದು ಪುಳಕ್ಕನೇ ಗೇ ಹೈ ಜಂಪ್‌ ಮಾಡಿತು !

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more