ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ಜಗತ್ತಿನ ಅತಿದೊಡ್ಡ ಕಾಯಿಲೆಯ ಹೆಸರು ಮೆಡಿಟೇಷನ್‌!

By Staff
|
Google Oneindia Kannada News
  • ಜಾನಕಿ
ಹೀಗಂದರೆ ರವಿಶಂಕರ್‌, ಸುಖಬೋಧಾನಂದ, ಅಮೃತಾನಂದಮಯಿ ಮುಂತಾದವರ ಶಿಷ್ಯರು ಹೊಡೆಯಲಿಕ್ಕೇ ಬರುತ್ತಾರೆ. ಆದರೆ ಒಮ್ಮೆ ಬೆಂಗಳೂರಿಗೊಂದು ಸುತ್ತು ಬಂದರೆ ಇದು ನಿಜ ಅನ್ನುವುದು ಯಾರಿಗಾದರೂ ಗೊತ್ತಾಗುತ್ತದೆ. ನಗುವುದನ್ನೂ ಧ್ಯಾನಿಸುವುದನ್ನೂ ಪ್ರಾರ್ಥಿಸುವುದನ್ನೂ ಕಲಿಸುತ್ತೇನೆ ಅಂತ ಹೊರಡುವುದು ಹುಂಬತನ.

ಧ್ಯಾನ ಅನ್ನುವುದು ಎಲ್ಲೋ ಕುಳಿತು ಮನಸ್ಸನ್ನು ಏಕಾಗ್ರವಾಗಿರಿಸಲು ಯತ್ನಿಸುವುದು ಅಲ್ಲವೇ ಅಲ್ಲ. ಒಂದು ಒಳ್ಳೆಯ ಲೇಖನವನ್ನೋ ಪುಸ್ತಕವನ್ನೋ ಓದುತ್ತಾ ನಾವು ಧ್ಯಾನಸ್ಥರಾಗುತ್ತೇವೆ. ಒಂದು ಸೊಗಸಾದ ಹಾಡು, ಒಂದು ಕೊಳಲಿನ ಕರೆ, ಮಳೆಗಾಲದ ಒಂದು ದೃಶ್ಯ ನಮ್ಮನ್ನು ಸಮಾಧಿ ಸ್ಥಿತಿಗೆ ಒಯ್ಯುತ್ತದೆ.

Teaching meditation is pure bullshit!ಮನಸ್ಸು ಅತ್ಯಂತ ಆನಂದವನ್ನು ಅನುಭವಿಸುವ ಸ್ಥಿತಿಯೇ ಧ್ಯಾನ. ಧ್ಯಾನಿಸಲು ಕಲಿಯುವುದು ಎಂದರೆ ಬದುಕಲು ಕಲಿಯುವುದು ಅಷ್ಟೇ. ಯಾರು ಅತ್ಯಂತ ಉತ್ಕಟವಾಗಿ ಬದುಕುತ್ತಾರೋ ಅವರಿಗೆ ಬೇರೆ ಧ್ಯಾನವೇ ಬೇಕಾಗಿಲ್ಲ. ಬದುಕುವುದಕ್ಕಿಂದ ದೊಡ್ಡ ಧ್ಯಾನ ಇನ್ನೇನಿರಲಿಕ್ಕೆ ಸಾಧ್ಯ?

ಹಾಗಿದ್ದರೂ ಝೆನ್‌, ಧ್ಯಾನ, ಏಕಾಗ್ರತೆ ಅಂತೆಲ್ಲ ಅನೇಕಾನಂದಗಳು ಹಿಂಸೆ ಕೊಡುತ್ತವೆ. ಅವನ್ನೆಲ್ಲ ತಮಾಷೆಗೋಸ್ಕರ ಕೇಳೋದರಲ್ಲಿ ತಪ್ಪೇನಿಲ್ಲ. ಮಂಗಳೂರಿನ ತೀರ್ಥರಾಂ ವಳಲಂಬೆ ಅವರು ಧ್ಯಾನದ ಕುರಿತು ಒಂದು ಪುಸ್ತಕ ಬರೆದಿದ್ದಾರೆ. ಮಂಗಳೂರಿನ ಯಾನ ಪ್ರಕಾಶನ ಪ್ರಕಟಿಸಿರುವ ಪುಸ್ತಕದ ಮುಖಪುಟದಲ್ಲಿ ಪುಟ್ಟ ಮಗುವೊಂದು ಧ್ಯಾನಿಸುತ್ತಿರುವ ಚಿತ್ರವಿದೆ.

ಮಗು ಧ್ಯಾನಿಸುತ್ತದೆ ಅನ್ನುವ ಕಲ್ಪನೆಯೇ ಭಯಾನಕ!

ಮಾರ್ಕಸ್‌ ಅರೇಲಿಯಸ್‌ ಬರೆದ ಮೆಡಿಟೇಷನ್‌ ಅನ್ನುವ ಪುಸ್ತಕಕ್ಕೂ ಇದಕ್ಕೂ ಏನೇನೂ ಸಂಬಂಧವಿಲ್ಲ. ಈ ಕೃತಿಯನ್ನು ಕುತೂಹಲಕ್ಕಾಗಿ ಓದಬಹುದು. ಅದರಿಂದ ಧ್ಯಾನಿಸಲು ಕಲಿಯುತ್ತೇನೆ ಅನ್ನುವುದು ಸುಳ್ಳು.

ಎಲ್ಲವನ್ನೂ ಮೀರಬೇಕು ಅನ್ನುವ ಭಾವನೆಯಷ್ಟು ಬಿಗಿಯಾದ ಬಂಧನ ಮತ್ತೊಂದಿಲ್ಲ. ನಾನು ಸ್ವಾರ್ಥಿಯಾಗಬಾರದು ಅನ್ನುವುದಕ್ಕಿಂತ ದೊಡ್ಡ ಸ್ವಾರ್ಥ ಇನ್ನೊಂದಿಲ್ಲ.

ಹಾಗೇ, ನಾನು ಧ್ಯಾನಿಸುತ್ತೇನೆ ಅನ್ನುವುದಕ್ಕಿಂತ ದೊಡ್ಡ ಚಾಂಚಲ್ಯ ಮತ್ತೊಂದಿಲ್ಲ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X