ಶಿಕ್ಷಕರದಿನದಂದು ಎಚ್ಚೆನ್ ಏನಂತಾರೆ?
- ದಟ್ಸ್ ಕನ್ನಡ ಬ್ಯೂರೊ
ಶಾಲೆಯಲ್ಲಿ ನೆಚ್ಚಿನ ಮೇಷ್ಟ್ರು, ಪ್ರೀತಿಯ ಟೀಚರ್ರು... ಆ ಸೆಂಟಿಮೆಂಟನ್ನು ಮರೆಯುವ ಹಾಗುಂಟೇ. ಆ ನೆನಪುಗಳ ನಡುವೆಯೇ ಅತ್ಯುತ್ತಮ ಶಿಕ್ಷಕ , ಶಿಕ್ಷಣ ತಜ್ಞ ಎಂದೇ ಗುರುತಿಸಿಕೊಂಡಿರುವ ಎಚ್. ನರಸಿಂಹಯ್ಯ ಶಿಕ್ಷಕರ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲಕ್ಕೆ ಅವರನ್ನು ಮಾತನಾಡಿಸಿದಾಗ :
‘ಯಾರೋ ಒಬ್ಬರು ಮೇಷ್ಟ್ರನ್ನು ನನ್ನ ಫೇವರೈಟ್ ಅಂತ ಹೇಳಲಿಕ್ಕಾಗುವುದಿಲ್ಲ. ಒಬ್ಬೊಬ್ಬರು ಟೀಚರ್ ಬಳಿ ಒಂದೊಂದು ವಿಷಯಗಳನ್ನು ನಾನು ಕಲಿತೆ. ಆದರೂ ಈಗ ಕ್ರಿಕೆಟ್ ಪಟು ಅನಿಲ್ ಕುಂಬ್ಳೆಯ ಅಜ್ಜ ಕುಂಬ್ಳೆ ನಂಜುಂಡಯ್ಯಾ ಎಂಬವರು ನೆನಪಾಗುತ್ತಾರೆ. ಅವರದು ಶಿಸ್ತಿಗೆ ಇನ್ನೊಂದು ಹೆಸರು. ಪಾಠದಲ್ಲಿ ಎತ್ತಿದ ಕೈ.
ಕಾಲೇಜಿನಲ್ಲಿ ಎಚ್. ರಾಮ ರಾವ್ ಅಂತ ಇನ್ನೊಬ್ಬರಿದ್ದರು. ಆವಾಗ ನಾನು ನ್ಯಾಷನಲ್ ಕಾಲೇಜು ಹಾಸ್ಟೆಲ್‌ನಲ್ಲಿದ್ದೆ. ಅವರ ಪಾಠ ಪ್ರವಚನಗಳು ತುಂಬಾ ಇಷ್ಟವಾಗಿದ್ದವು. ಶಿಕ್ಷಕರಿಂದ ತರಗತಿಯಲ್ಲಿ ಮಾತ್ರ ಪಾಠ ಹೇಳಿಸಿಕೊಳ್ಳುವುದಲ್ಲ. ಅವರ ಜೀವನ ರೀತಿ ನೀತಿಯನ್ನೂ ನೋಡಿ ನಾವು ಕಲಿಯಬೇಕು. ನಮಗೆ ಶಿಕ್ಷಕರೆಂದರೆ ಭಯ ಮತ್ತು ಗೌರವಗಳಿದ್ದವು. ನಮ್ಮ ಸಂಸ್ಕೃತಿಯಲ್ಲಿ ಮಾತ್ರ ಶಿಕ್ಷಕರಿಗೆ ಅಪ್ಪ ಅಮ್ಮನ ನಂತರದ ಉನ್ನತ ಸ್ಥಾನ ನೀಡಲಾಗಿದೆ. ನಾವು ಆಚಾರ್ಯದೇವೋಭವ ಅನ್ನುತ್ತೇವೆ.
ನನ್ನ ಪ್ರಕಾರ ಪಾಠ ಮಾಡುವುದು ಒಂದು ವೃತ್ತಿಯಲ್ಲ. ಅದು ಜೀವನದ ಧ್ಯೇಯ.’












Click it and Unblock the Notifications