ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಭಾವದ ತುಳಿತಕ್ಕೆ ಒಳಗಾದವನು-ನಿಸಾರ್‌

By Staff
|
Google Oneindia Kannada News

*ಮಣೀ

Prof. K. S. Nisar Ahmadನಿಸಾರ್‌ ಅಹಮದ್‌ ಅಂದರೆ ಸಾಕು, ಬಹುಮಂದಿ ಕುಳಿತಲ್ಲಿಯೇ ತುಂಬು ಗೌರವದಿಂದ ಒಂದು ಚೆಂದದ ಸೆಲ್ಯೂಟ್‌ ಹೊಡೆಯುತ್ತಾರೆ. ಈ ದಿನಗಳಲ್ಲೂ ಎಲ್ಲರಿಗೂ ಆಪ್ತವಾಗಿರುವ, ಈವತ್ತಿಗೂ ಮಾಸದ ಜನ ಪ್ರೀತಿ ಉಳಿಸಿಕೊಂಡು ಬಂದಿರುವ ನಿಸಾರ್‌ ಅಹಮದ್‌ ಮಾತಿಗೆ ನಿಂತರೆ ಅದೇ ಜೋಗದ ಸಿರಿ ಬೆಳಕು. ಅಂಥ ನಿಸಾರ್‌ ಮಾತಿಗೆ ಸಿಕ್ಕಾಗ-

ಕನ್ನಡ ನಾಡಿನಲ್ಲಿ ಕನ್ನಡಕ್ಕೇ ಸಂಕಟದ ಸ್ಥಿತಿ. ನಿಮ್ಮ ಪ್ರಕಾರ ಇದಕ್ಕೇನು ಕಾರಣ ?
ನಮ್ಮ ಜನರಲ್ಲಿ ಭಾಷೆ, ನಾಡು, ನುಡಿಯ ಬಗ್ಗೆ ಅಭಿಮಾನ ಇಲ್ಲದಿರೋದೇ ಮುಖ್ಯ ಕಾರಣ. ಪರಿಸ್ಥಿತಿ ಹೀಗೇ ಮುಂದುವರಿದರೆ ಪರಭಾಷಾ ದಾಳಿಯಿಂದ ಮುಂದೊಮ್ಮೆ ಕನ್ನಡದ ಮನೆ ಕೊಚ್ಚಿ ಹೋಗೋದು ದಿಟ.

ಇವತ್ತಿನ ಶಿಕ್ಷಣದ ಬಗೆಗೆ ಹೇಳಿ..
ಇವತ್ತಿನ ಶಿಕ್ಷಣ ಅಡ್ಡದಾರಿ ಹಿಡಿದಿದೆ. ಮಕ್ಕಳಲ್ಲಿ ಶೀಲವನ್ನು ನಿರ್ಮಾಣ ಮಾಡುವ ಕಾರ್ಯ ಶಿಕ್ಷಣದಿಂದ ಆಗಬೇಕು. ಅದರ ಬದಲಾಗಿ, ಇವತ್ತು ಮಕ್ಕಳನ್ನು ಮಾಹಿತಿಯ ಮೂಟೆಗಳಾಗಿ ತಯಾರಿಸ್ತಾ ಇದಾರೆ... ಇದು ದೊಡ್ಡ ತಪ್ಪು .

ನಿಮ್ಮ ವಾರಿಗೆಯವರು ಕಥೆ, ಕವನ, ಕಾದಂಬರಿ ಈ ಎಲ್ಲ ಕ್ಷೇತ್ರದಲ್ಲೂ ಕೈಯಾಡಿಸಿದರು. ನೀವು ಮಾತ್ರ ಕವಿತೆಗಳಲ್ಲೇ ಉಳಿದುಹೋದಿರಲ್ಲ , ಯಾಕೆ ?
ನಾನು ಭಾವದ ತುಳಿತಕ್ಕೆ ಒಳಗಾದವನು. ಆದ್ದರಿಂದ ಪದ್ಯ ಬರೆದೆ. ಕಾದಂಬರಿ ಬರೆಯಲು ಸಾಧ್ಯವಾಗಲಿಲ್ಲ . ಇದು ನನ್ನ ಮಿತಿ ಅಂತಲೇ ನಾನು ತಿಳಿದಿದೀನಿ.

ದಲಿತ, ಮುಸ್ಲಿಂ , ಸಂವೇದನೆ ಉಳಿದ ಅನುಭವಗಳಿಂದ ಬೇರಾಗಬೇಕು ಅಂತ ಕೆಲವರ ವಾದ... ನೀವೇನಂತೀರಿ ?
ಹಾಗೆಲ್ಲ ಯೋಚಿಸೋದೇ ತಪ್ಪು . ದಲಿತ ಅಥವಾ ಮುಸ್ಲಿಂ , ಸಂವೇದನೆ ಎನ್ನುವುದು ಯಾವತ್ತೂ ಸಮಗ್ರ ಅನುಭವದಿಂದ ಬೇರೆಯಾಗಬಾರದು. ಅದು ಸಾರ್ವತ್ರಿಕ ಅನುಭವವಾಗಿಯೇ ವ್ಯಕ್ತವಾಗಬೇಕು. ಪ್ರತ್ಯೇಕಗೊಳಿಸಿದರೆ ಅದು ಕೃತಕವಾಗ್ತದೆ.(ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X