ಕಂಚಿನ ಕಂಠ : ಮಾತಿನ ಮಲ್ಲನಿಗೆ ಕವನ ನಮನ
* ಕ್ಯು.ಎಕ್ಸ್.ಎ.ಎಕ್ಸ್
ಕ್ಯಾಸೆಟ್ಟು ಲೋಕದಲ್ಲಿ ನೀವು ಮಾಡಿರುವ ಸಾಧನೆ
ಅರಿತಿತ್ತು ಕರುನಾಡಿನ ಮನೆಮನೆ
ಆ ಶೈಲಿ, ಧ್ವನಿ, ನಿಮ್ಮದೇ ಇತ್ತು ಛಾಪು
ಪ್ರತಿ ನಾಟಕದಲ್ಲೂ ನೀವೇ ಟಾಪು
ನಿಮ್ಮ ಮಾತುಗಳು ನಮಗೆ ಸಿಹಿ ಬೆಲ್ಲ
ಅದ್ದರಿಂದ ನಿಮ್ಮನ್ನು ಕರೆಯುತ್ತಿದ್ದರು ‘ಮಾತಿನಮಲ್ಲ’
ಕೊಡುತ್ತಿದ್ದಿರೀ ನೀವು ರಾಜಕಾರಣಿಗಳಿಗೆ ಮಾತಿನ ಛಾಟಿ
ನಿಮ್ಮ ಮುಂದೆ ಯಾರೂ ಇಲ್ಲ ಸರಿಸಾಟಿ
ಕೇಳುತ್ತಿದ್ದರೆ ನಿಮ್ಮ ನಾಟಕ
ಆಗುತ್ತಿತ್ತು ಮನಸ್ಸು ಆಹ್ಲಾದಾಯಕ
ನಿಮ್ಮ ಕನ್ನಡ ಪರ ಹೋರಾಟ
ತೊಡಬೇಕು ಕನ್ನಡಿಗ ಈ ನಿಟ್ಟಿನಲ್ಲಿ ಹಠ
ಪ್ರತಿ ನಾಟಕದಲ್ಲೂ ಇತ್ತು ಸಾಮಾಜಿಕ ಕಳಕಳಿ
ಅನ್ಯಾಯದ ವಿರುದ್ಧ ನಿಮ್ಮದೇ ಚಳವಳಿ
ತಿಪ್ಪೇಶ, ಗುರುವೇ ಶಂಬುಲಿಂಗ ಎನ್ನುವ ಪದಗಳು
ನಮಗೆ ಇನ್ನು ಬರಿ ನೆನಪುಗಳು.
(ಅಗಲಿದ ಧೀರೇಂದ್ರ ಗೋಪಾಲ್‌ರಿಗೆ ಓದುಗರ ಕವನ ನಮನ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications