ಆಧುನಿಕ ಕನ್ನಡದ ಪದದೋಷ

ಡಾಟ್‌ ಕಾಮುಕ : a greedy dotcommer

ವಿಪ್ರ : ವಿಪ್ರೋ ನೌಕರ

ವಿಪ್ರೋತ್ತಮ : ಅಜೀಜ್‌ ಪ್ರೇಮ್‌ಜಿ

ಸಾಫ್ಟ್‌ವೇರ್‌ ಇಂಜಿನಿಯರ್‌ : ಬನಿಯನ್‌ ಮತ್ತು ನಿಕ್ಕರ್‌ ಹೊಲಿಯುವ ದರ್ಜಿ

ಹಾರ್ಡ್‌ವೇರ್‌ ಇಂಜಿನಿಯರ್‌ : ಜೀನ್ಸ್‌ ಮತ್ತು ಜಾಕೆಟ್‌ಗಳನ್ನು ಹೊಲಿಯುವಾತ

ಕೋಡುಬಳೆ : ಸಾಫ್ಟ್‌ವೇರ್‌ ಕೋಡ್‌ ಬರೆದು ಬಂದ ಹಣದಲ್ಲಿ ಕೊಂಡ ಕಡಗ

ಬಿಲ್‌ ಗೇಟ್ಸ್‌ : ಗೇಟ್‌ ಹತ್ತಿರ ಬಿಲ್‌ ಕೊಟ್ಟು ಸ್ಕೂಟರ್‌ ನೋಡಿಕೊಳ್ಳುವಾತ

ಜೇಡರ ಬಲೆ : ಇಂಟರ್‌ ನೆಟ್‌ ಕುರಿತ ಇಂಡಿಯಾದ ಮೊದಲ ಚಿತ್ರ

ಭಲೆ ಬಸವ : ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಇಂಟರ್‌ ನೆಟ್‌ ಆವೃತ್ತಿಗಳು

ಜೇಡರ ಕಣ್ಣಪ್ಪ : ನೆಟ್‌ ಸರ್ಫ್‌ ಮಾಡಿ ಕಣ್ಣು ಹಾಳು ಮಾಡಿಕೊಳ್ಳುವವನು

ರೆವೆನ್ಯೂ ಮಾಡೆಲ್‌ : ಐಶ್ವರ್ಯ ರೈ (ಕಾಸು ತರುವ ರೂಪದರ್ಶಿ)

ಇನ್ಫೋ ಸಿಸ್‌ : ಅಕ್ಕ ಸುಧಾ ಮೂರ್ತಿ

ರಾಜಕೀಯ ಪದದೋಷ

ಬಿಡಿ ಜತ್ತಿ : ಸಿಗರೇಟಿಗೆ ಕಾಸಿಲ್ಲದ ಪೈಲ್ವಾನ

ಬಂಗಾರಪ್ಪ :ಗೋಲ್ಡ್‌ ಕಾರ್ಡ್‌ ಹೋಲ್ಡರ್‌

ಜಾಲಪ್ಪ : ವೆಬ್‌ ಮಾಸ್ಟರ್‌

ರೋಷನ್‌ ಬೇಗ್‌: ಬೇಗ ಕೋಪಿಸಿಕೊಳ್ಳುವವನು

ವೀರಪ್ಪನ್‌: ಧೈರ್ಯವಾಗಿ ಪನ್‌ ಮಾಡುವವನು

ಸಾಹಿತ್ಯ ಪದದೋಷ

ನಾಡಿಗ್‌( ನಾ -ಡಿಗ್‌) : ಆಳಕ್ಕೆ ಇಳಿಯದವ

ಕಂಬಾರ (ಕಮ್‌- ಬಾರಾ) : ಮತ್ತೆ ಮತ್ತೆ ಬಾ ಎಂದು ಕರೆಯುವವ

ಲಂಕೇಶ್‌ ಪುತ್ರಿಕೆ : ಈಗಿನ ಲಂಕೇಶ್‌ ಪತ್ರಿಕೆ

ಹರಿದಾಸ ಸಾಹಿತ್ಯ : ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಉದ್ಯೋಗಿಗಳ ಬರಹ

ಮುಖಪುಟ / ಸಾಹಿತ್ಯ ಸೊಗಡು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+