ಬೇಂದ್ರೆ ಕಂಡ ಬೆನಕ ದೇವಾಲಯ, ಅದರಲ್ಲಿ ವರಕವಿಯ ಗಣಪ ಕಾವ್ಯ

ಹುಬ್ಬಳ್ಳಿ : ಬೇಂದ್ರೆ ಕಂಡ ಬೆನಕ! ಗುರುವಾರ(ಫೆ.28) ಈ ಹೆಸರಿನ ದೇವಾಲಯವೊಂದು ಭಕ್ತರಿಗೆ ಬಾಗಿಲು ತೆರೆಯಲಿದೆ.
ನಗರದ ಗೋಕುಲ ರಸ್ತೆಯಲ್ಲಿರುವ ವಿಶ್ವ ಶರ್ಮ ಚೇತನ ಕ್ಯಾಂಪಸ್‌ನಲ್ಲಿ ಶ್ರಾವಣ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ನೆನಪಿಗಾಗಿ ಈ ದೇವಾಲಯ ನಿರ್ಮಿಸಲಾಗಿದೆ. ಇದರ ಗೋಡೆಗಳ ಮೇಲೆ ಕಪ್ಪು ಮಾರ್ಬಲ್‌ನ ಮೇಲೆ ಬೆನಕನ ಕುರಿತು ಬೇಂದ್ರೆ ಬರೆದಿರುವ ಕವನಗಳನ್ನು ಬರೆಸಲಾಗಿದೆ. ಬೇಂದ್ರೆಗೆ ಗಣಪ ನೆಚ್ಚಿನ ದೇವ. ಆದಿ ಪ್ರೇಕ್ಷಕ. ಅದಕ್ಕಾಗೇ ಕವಿಯ ಮೂಸೆಯಿಂದ ಗಣಪನ ಕುರಿತ 15ಕ್ಕೂ ಹೆಚ್ಚು ಕವನಗಳು ಮೂಡಿವೆ.

ಒಂದು ಕವನದಲ್ಲಿ ಬೇಂದ್ರೆ ಗಣಪನನ್ನು, ‘ವ್ಯಾಸ ಮುನಿ ಹೇಳಿದಂತೆ ನೀನು ಮಹಾಭಾರತ ಬರೆದ ಲೇಖನಿ ಮತ್ತು ಮೂಸೆಯನ್ನು ಕೊಡು. ನಿನ್ನಂತೆ ನಾನೂ ಒಂದು ಮಹಾ ಕಾವ್ಯ ರಚಿಸಲು ಆಶೀರ್ವಾದ ಮಾಡು’ ಎಂದು ಕೋರಿದ್ದಾರೆ. ಕವಿಯ ನೆನಪಿನಲ್ಲಿ ನಿರ್ಮಿತವಾಗಿರುವ ಈ ದೇವಾಲಯದಲ್ಲಿ ಗಣಪನಿಗೆ ವಿಶೇಷ ದೀಪಾಲಂಕಾರ. ಶಬ್ದಕ್ಕೆ ತಕ್ಕಂತೆ ದೀಪದ ರಂಗೂ ಬದಲಾಗುತ್ತದೆ. ಬೇಂದ್ರೆ ಪುತ್ರ ಹಾಗೂ ಕವಿಯ ಹೆಸರಿನ ಸಂಶೋಧನಾ ಸಂಸ್ಥೆಯ ನಿರ್ದೇಶಕ ವಾಮನ ಬೇಂದ್ರೆ ಮತ್ತು ಕೆ.ಎಸ್‌.ಶರ್ಮ ಈ ಹೊಸ ಬೆಳಕಿನಾಟದ ರೂವಾರಿಗಳು. ನೀವೂ ಬಿಡುವು ಮಾಡಿಕೊಂಡು ಬೇಂದ್ರೆ ಕಂಡ ಬೆನಕನನ್ನು ನೋಡಿಬನ್ನಿ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+