ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುವೆಂಪು ಸಮಗ್ರಕವಿತೆಗಳ ಸಂಕಲನಕ್ಕೆ‘ಅಕ್ಕ’ದಿಂದ ಬಾರದ ರೊಕ್ಕ!

By Staff
|
Google Oneindia Kannada News

ಕನ್ನಡ ವಿ.ವಿ. (ಕಮಲಾಪುರ) : ಕುವೆಂಪುರವರ ಸಮಗ್ರ ಕವಿತೆಗಳ ಪ್ರಕಟಣೆಗೆ ಅಮೆರಿಕದ ‘ಅಕ್ಕ’ ಸಂಘಟನೆ 10 ಲಕ್ಷ ರುಪಾಯಿ ನೀಡುವುದಾಗಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಆಶ್ವಾಸನೆ ನೀಡಿತ್ತು . ಆದರೆ ಇದುವರೆಗೂ ಹಣ ಸಂದಾಯವಾಗಿಲ್ಲ ಎಂದು ವಿವಿ ಕುಲಸಚಿವ ಡಾ.ಕೆ.ವಿ.ನಾರಾಯಣ್‌ ಆರೋಪಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ‘ಅಕ್ಕ’ ಕೂಟದ ಪ್ರತಿನಿಧಿಗಳು ಈ ಹಿಂದೆ ವಿವಿಗೆ ಭೇಟಿ ನೀಡಿದಾಗ ಅಂದಿನ ಕುಲಪತಿ ಜೊತೆ ಚರ್ಚಿಸಿ ಪುಸ್ತಕ ಪ್ರಕಟಣೆಗೆ ಕೂಡಲೇ ಧನಸಹಾಯ ನೀಡುವುದಾಗಿ ತಿಳಿಸಿದ್ದರು. ಈ ಆಶ್ವಾಸನೆ ಮೇರೆಗೆ ವಿವಿ ಪುಸ್ತಕ ಪ್ರಕಟಿಸಿತು. ಆದರೆ ಅಕ್ಕದಿಂದ ಈವರೆಗೂ ಹಣ ಸಂದಾಯವಾಗಿಲ್ಲ ಎಂದು ನಾರಾಯಣ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕುವೆಂಪುರವರ ಸಮಗ್ರ ಕವಿತೆಗಳ ಪ್ರಕಟಣೆಗೆ 10 ಲಕ್ಷ ರುಪಾಯಿಗೂ ಅಧಿಕ ಹಣ ಖರ್ಚಾಗಿದೆ. ಈಗಾಗಲೇ ‘ಅಕ್ಕ’ದ ಆರ್ಥಿಕ ನೆರವು ದೊರೆತಿದೆ ಎಂಬುದನ್ನು ಸಂಪುಟಗಳಲ್ಲಿ ಅಧಿಕೃತವಾಗಿ ನಮೂದಿಸಿದೆ ಎಂದು ನಾರಾಯಣ್‌ ಸ್ಪಷ್ಟಪಡಿಸಿದ್ದಾರೆ.

(ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X