‘ಪಾರ್ಟ್ ಟೈಂ ಸಾಹಿತ್ಯ, ಫುಲ್ ಟೈಂ ರಾಜಕಾರಣ’
ಬೆಂಗಳೂರು : ಸಾಹಿತಿಗಳ ಸೋಗಲಾಡಿತನವನ್ನು ಕಟುವಾಗಿ ಟೀಕಿಸಿರುವ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರು- ನಮ್ಮ ಸಾಹಿತಿಗಳದು ಪಾರ್ಟ್ ಟೈಂ ಸಾಹಿತ್ಯ, ಫುಲ್ ಟೈಂ ರಾಜಕಾರಣ ಎಂದು ಕಟಕಿಯಾಡಿದ್ದಾರೆ.
ಸಾಹಿತಿಗಳಿಗೂ ರಾಜಕಾರಣಿಗಳಿಗೂ ಯಾವುದೇ ವ್ಯತ್ಯಾಸ ಕಾಣದಾಗಿದೆ. ಸರ್ಕಾರಕ್ಕೆ ಎಚ್ಚರಿಕೆ ನೀಡುವ ಹಾಗೂ ಜನತೆಯ ಬದುಕು ಹಸನು ಮಾಡುವ ಕೃತಿಗಳತ್ತ ಗಮನ ಹರಿಸದ ಸಾಹಿತಿಗಳು ಜಾತಿ ರಾಜಕಾರಣದಲ್ಲಿ ತೊಡಗಿರುವುದರಿಂದ ನಮ್ಮ ಸಾಹಿತ್ಯ ಲೋಕ ನಿಸ್ತೇಜವಾಗಿದೆ ಎಂದು ನಿಡುಮಾಮಿಡಿ ಶ್ರೀ ಕಿಡಿ ಕಾರಿದರು.
ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಪ್ರೊ.ಡಿ.ಲಿಂಗಯ್ಯನವರ 68 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತನಾಡುತ್ತಿದ್ದರು.
ಅಧಿಕಾರ, ರಾಜಕೀಯದ ಮೋಹ ಬೆಳೆಸಿಕೊಂಡಿರುವ ಬಹುತೇಕ ಸಾಹಿತಿಗಳು ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ. ದೇಶ-ಸಮಾಜಕ್ಕೆ ಮಾರಕವಾದ ಜಾಗತೀಕರಣ, ಖಾಸಗೀಕರಣದ ವಿರುದ್ಧ ನಿಲ್ಲಬಲ್ಲಂಥ ಒಂದೇ ಒಂದು ಸಶಕ್ತ ಕೃತಿಯನ್ನು ನೀಡದ ನಮ್ಮ ಸಾಹಿತ್ಯ ಲೋಕ ನಿಸ್ತೇಜವಾಗಿದೆ ಎಂದು ನಿಡುಮಾಮಿಡಿ ಹೇಳಿದರು.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications