ನಿತ್ಯೋತ್ಸವದ ಕವಿ ನಿಸಾರ್ ಅಹಮದ್‌ಗೆ ತಾತಾಚಾರಿ ಪ್ರಶಸ್ತಿ
ಮೈಸೂರು : ನಿತ್ಯೋತ್ಸವದ ಕವಿ ಎಂದೇ ಜನಮನದಲ್ಲೆ ಹಸಿರಾದ ಕನ್ನಡದ ಮೆಲು ದನಿಯ ಕವಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು, ಭ್ರಮರ ಟ್ರಸ್ಟ್‌ನ ಪ್ರೊ.ವೈ.ಟಿ.ತಾತಾಚಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ದಿ. ವೈ.ಟಿ.ತಾತಾಚಾರ್ ಅವರ ಹೆಸರಿನಲ್ಲಿ ಮೌಲಿಕವಾದ ಕೊಡುಗೆಯನ್ನು ನೀಡಿದ ಪ್ರತಿಭಾವಂತರನ್ನು ಗುರ್ತಿಸಿ ಗೌರವಿಸಲು ಭ್ರಮರ ಟ್ರಸ್ಟ್ ಈ ಪ್ರಶಸ್ತಿ ಸ್ಥಾಪಿಸಿದೆ. ವೈ.ಟಿ. ಮತ್ತು ಮಾಧುರಿ ತಾತಾಚಾರಿ ಅವರು ಈ ಟ್ರಸ್ಟ್ ರೂವಾರಿಗಳು.
ಡಾ.ಜಿ.ಎಸ್.ಶಿವರುದ್ರಪ್ಪ , ಪ್ರೊ.ದೇ.ಜವರೇಗೌಡ ಮತ್ತು ಡಾ.ಎಚ್.ಜೆ.ಲಕ್ಕಪ್ಪಗೌಡ ಅವರಿದ್ದ ಆಯ್ಕೆ ಸಮಿತಿ ನಿಸಾರ್ ಅಹಮದ್ ಅವರನ್ನು ಪ್ರತಿಷ್ಠಿತ ತಾತಾಚಾರಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. 50 ಸಾವಿರ ರುಪಾಯಿ ನಗದು ಹಾಗೂ ಸ್ಮರಣ ಫಲಕವನ್ನು ಪ್ರಶಸ್ತಿ ಒಳಗೊಂಡಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications