ವಿಜಯಕಾಂತ ಪಾಟೀಲರಿಗೆ ‘ಬೇಂದ್ರೆ-ಅಡಿಗ’ ಕಾವ್ಯ ಪ್ರಶಸ್ತಿ
ಹೊನ್ನಾವರ : ಬೆಂಗಳೂರಿನ ‘ಅಭಿನವ ಬಳಗ’ ಮತ್ತು ಹೊನ್ನಾವರ ಕಾಲೇಜು ಕನ್ನಡ ಸಂಘದ ಆಶ್ರಯದಲ್ಲಿ ಪ್ರತಿಭಾವಂತ ಕವಿ, ಕಥೆಗಾರ ಯನ್ನು ಪ್ರದಾನ ಮಾಡಲಾಯಿತು.
ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ವೈಕುಂಠ ಪ್ರಭು ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಡ ಾ। ರಾಜೇಂದ್ರ ಚೆನ್ನಿ ಯವರ ‘ಕರುಳ ಬಳ್ಳಿಯ ಸೊಲ್ಲು’ (ಬೇಂದ್ರೆ ಕಾವ್ಯ ವಿಮರ್ಶೆ), ಡಾ। ಕೇಶವ ಶರ್ಮಾರ ‘ರಚನೆ-ನಿರಚನೆ’ (ಸಾಹಿತ್ಯ ಸಿದ್ಧಾಂತ ವಿವೇಚನೆ), ಡಾ। ಆನಂದ ಪಾಟೀಲರ ‘ಬೆಳದಿಂಗಳು’ (ಮಕ್ಕಳ ಕಾದಂಬರಿ) ಕೃತಿಗಳನ್ನೂ ಬಿಡುಗಡೆ ಮಾಡಲಾಯಿತು.
ಸಾಹಿತಿ ಡಾ। ಆರ್. ವಿ. ಭಂಡಾರಿ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಿರಾಜ್ ಅಹಮ್ಮದ್ ಕೃತಿಗಳ ಪರಿಚಯ ಮಾಡಿಕೊಟ್ಟರು. ಹೊನ್ನಾವರ ಕಾಲೇಜು ಪ್ರಾಂಶುಪಾಲ ಅನಂತ ಮೇಸ್ತ ಅಧ್ಯಕ್ಷತೆ ವಹಿಸಿದ್ದು ಡಾ। ಕೇಶವ ಶರ್ಮಾ ಕಾರ್ಯಕ್ರಮದ ಅತಿಥಿಯಾಗಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications