ಕೋಮುವಾದದ ವಿರುದ್ಧ ಹೋರಾಟ : ಕನ್ನಡಿಗರಿಗೆ ಅನಂತಮೂರ್ತಿ ಕರೆ
ತುಮಕೂರು: ಕೋಮುವಾದದ ವಿರುದ್ಧ ಹೋರಾಡಬೇಕೆಂದು 69 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಯು.ಆರ್. ಅನಂತಮೂರ್ತಿ ಕನ್ನಡ ಜನತೆಗೆ ಕರೆ ನೀಡಿದ್ದಾರೆ.
ಶುಕ್ರವಾರ (ಫೆ.15) ತುಮಕೂರಿನಲ್ಲಿ ಪ್ರಾರಂಭವಾದ ಮೂರು ದಿನಗಳ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ , ಸಮ್ಮೇಳನ ಉದ್ಘಾಟನೆಗೊಳ್ಳುವ ಕೆಲವು ನಿಮಿಷಗಳ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಮೂರ್ತಿ ಈ ಕರೆ ನೀಡಿದರು.
ಸಮ್ಮೇಳನಾಧ್ಯಕ್ಷರ ಜಂಬೂ ಸವಾರಿ
ಬೆಳಗ್ಗೆ 9.15 ರ ಸುಮಾರಿಗೆ ಸಮ್ಮೇಳನದ ಸಭಾಂಗಣಕ್ಕೆ ಆಗಮಿಸಿದ ಅನಂತಮೂರ್ತಿ ಅವರನ್ನು ಸಾವಿರಾರು ಸಹೃದಯರು ಸಂಭ್ರಮದಿಂದ ಬರ ಮಾಡಿಕೊಂಡರು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲೂ ಹೆಚ್ಚಿನ ಸಂಖ್ಯೆಯ ಸಾಹಿತ್ಯಾಸಕ್ತರು ಹಾಗೂ ಅನಂತಮೂರ್ತಿ ಅಭಿಮಾನಿಗಳು ಭಾಗವಹಿಸಿದ್ದರು. ಜಾನಪದ ಪರಂಪರೆಯನ್ನು ಬಿಂಬಿಸುವ ಎತ್ತಿನಗಾಡಿಗಳು ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದವು. ತುಮಕೂರು ಜಿಲ್ಲೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications