For Daily Alerts
ತುಮಕೂರು ಸಾಹಿತ್ಯ ಸಮ್ಮೇಳನಕ್ಕಾಗಿ ವಿಶೇಷ ವೆಬ್‌ಸೈಟ್
ತುಮಕೂರು : ಫೆಬ್ರವರಿ 1ರಿಂದ ಇಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳ ವಿವರಗಳನ್ನು ಹಾಗೂ ಸಾರವನ್ನು ಬೆರಳ ತುದಿಗೆ ತರುವ ಯತ್ನ ನಡೆದಿದೆ.
ಜಿಲ್ಲಾ ವಾರ್ತಾ ಅಧಿಕಾರಿ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ಎಂ.ಶಿವಪ್ರಕಾಶ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಸಮ್ಮೇಳನದ ಸಿದ್ಧತೆ ಕುರಿತು ಶನಿವಾರ ನಡೆದ ಸಭೆಯಲ್ಲಿ ಇದಕ್ಕೆಂದೇ ವಿಶೇಷ ವೆಬ್‌ಸೈಟ್ ಉದ್ಘಾಟಿಸುವ ಇಂಗಿತ ಹೊರಬಿತ್ತು. ಜೊತೆಗೆ ತುಕಾಲಿ ಎಂಬ ಸ್ಥಳೀಯ ಕೇಬಲ್ ಜಾಲ ಮೂರೂ ದಿನಗಳ ಸಮ್ಮೇಳನವನ್ನು ನೇರ ಪ್ರಸಾರ ಮಾಡಲಿದೆ ಎಂದು ಶಿವಪ್ರಕಾಶ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು