ಮಲೆನಾಡಿನ ಮದುಮಗ ಪೂರ್ಣಚಂದ್ರ ತೇಜಸ್ವಿಗೆ ಪಂಪಪೀಠ

Posted By:
Subscribe to Oneindia Kannada

ಬೆಂಗಳೂರು : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ರಾಜ್ಯದ ಪರಮೋಚ್ಛ ಸಾಹಿತ್ಯ ಗೌರವ ಪಂಪ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕನ್ನಡಪ್ರಭ ದೈನಿಕ ವರದಿ ಮಾಡಿದೆ.

1 ಲಕ್ಷ ರುಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಪಂಪ ಪ್ರಶಸ್ತಿ ಒಳಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಡಿಸೆಂಬರ್‌ 28 ರಂದು ಜರುಗುವ ಸಮಾರಂಭದಲ್ಲಿ ರಾಜ್ಯಪಾಲೆ ವಿ.ಎಸ್‌. ರಮಾದೇವಿ ಪ್ರಶಸ್ತಿ ಪ್ರದಾನ ಮಾಡುವರು.

ಈ ಬಾರಿಯ ಜ್ಞಾನಪೀಠ ಪ್ರಶಸ್ತಿ ತೇಜಸ್ವಿ ಅವರಿಗೆ ದೊರಕುವ ಸಾಧ್ಯತೆಗಳು ದಟ್ಟವಾಗಿರುವ ಸಂದರ್ಭದಲ್ಲಿ ಪ್ರತಿಷ್ಠಿತ ಪಂಪ ಪ್ರಶಸ್ತಿ ತೇಜಸ್ವಿ ಅವರಿಗೆ ಬಂದಿರುವುದು ಗಮನಾರ್ಹ. ತೇಜಸ್ವಿ ಅವರ ತಂದೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಕುವೆಂಪು ಅವರು ಕೂಡ ಪಂಪ ಪ್ರಶಸ್ತಿ ಪಡೆದಿದ್ದರೆನ್ನುವುದು ಗಮನಾರ್ಹ. ಅಪ್ಪ , ಮಗ- ಇಬ್ಬರೂ ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತರು. ಈ ಹಿನ್ನೆಲೆಯಲ್ಲಿ ತೇಜಸ್ವಿ ಅಪ್ಪನಿಗೆ ತಕ್ಕ ಮಗ!

ಕಿರಗೂರಿನ ಗಯ್ಯಾಳಿಗಳು, ತಬರನ ಕತೆ, ಜುಗಾರಿ ಕ್ರಾಸ್‌, ನಿಗೂಢ ಮನುಷ್ಯರು, ಚಿದಂಬರ ರಹಸ್ಯ, ಕರ್ವಾಲೋ, ಅಣ್ಣನ ನೆನಪುಗಳು ಇತ್ಯಾದಿ ಕೃತಿಗಳಿಂದ ತೇಜಸ್ವಿ ಸಾರಸ್ವತ ಲೋಕದಲ್ಲಿ ಪ್ರಸಿದ್ಧರು. ವಿಜ್ಞಾನ ವಿಸ್ಮಯಗಳನ್ನು ಬಿಚ್ಚಿಡುವ ತೇಜಸ್ವಿಯವರ ಪರಿಸರದ ಕತೆಗಳು ಹಾಗೂ ಮಿಲೆನಿಯಂ ಶ್ರೇಣಿ ಕೃತಿಗಳು ಅಪಾರ ಜನಪ್ರಿಯತೆ ಗಳಿಸಿವೆ.

(ಇನ್ಫೋ ವಾರ್ತೆ)

ತೇಜಸ್ವಿ ದಶಾವತಾರ..

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ