‘ಪ್ರತ್ಯೇಕತೆ ಕೂಗನ್ನು ಮೊಳಕೆಯಲ್ಲೇ ಚಿವುಟಿ ಹಾಕಿ, ಹೈ.ಕ. ಅಭಿವೃದ್ಧಿಗೆ ಗಮನ ಕೊಡಿ’
ತೀನಂಶ್ರೀ ಮಂಟಪ, ತುಮಕೂರು : 300 ಆಂಗ್ಲ ಮಾಧ್ಯಮ ಶಾಲೆಗಳಿಗೆ ನೀಡಲಾಗಿರುವ ಅನುಮತಿ ವಿಷಯ ತುಮಕೂರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಮಾರ್ದನಿಸಿತು. ಕೂಡಲೇ ಈ ನಿರ್ಧಾರವನ್ನು ಶಾಶ್ವತವಾಗಿ ಕೈಬಿಡುವಂತೆ ಆಗ್ರಹಿಸಲಾಯಿತು.
ಸಮ್ಮೇಳನದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ರಾಜ್ಯ ಸರಕಾರವು 300 ಆಂಗ್ಲ ಮಾಧ್ಯಮ ಶಾಲೆ ತೆರೆಯಲು ನೀಡಿರುವ ಅನುಮತಿಯನ್ನು ಶಾಶ್ವತವಾಗಿ ಕೈಬಿಡುವಂತೆ ಒತ್ತಾಯಿಸಿದರು.
ಸಮಸ್ತ ಕನ್ನಡಿಗರ ಒಕ್ಕೊರಲಿನ ದನಿಗೆ ಓಗೊಟ್ಟು ಈ ವಿವಾದಕ್ಕೆ ಇಂದೇ ಇತಿಶ್ರೀ ಹಾಡಬೇಕೆಂದರು. ಕನ್ನಡ ಮಾಧ್ಯಮವನ್ನು ಪ್ರೋತ್ಸಾಹಿಸುವ ಸಲುವಾಗಿ ಎಂಜನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದಲ್ಲೂ ಕನಿಷ್ಠ 50ರಷ್ಟು ಮೀಸಲು ನೀಡಬೇಕೆಂದು ಆಗ್ರಹಿಸಿದರು.
ಹೈದರಾಬಾದ್ ಕರ್ನಾಟಕ ಪ್ರಾಂತದ ಅಭಿವೃದ್ಧಿಗೆ ರಾಜ್ಯ ಸರಕಾರ ಗಮನ ಹರಿಸುವ ಮೂಲಕ ಅಲ್ಲಿ ಈಹೊತ್ತು ಎದ್ದಿರುವ ಮತ್ತು ಬೃಹದಾಕಾರ ತಾಳುತ್ತಿರುವ ಪ್ರತ್ಯೇಕತೆಯ ಕೂಗನ್ನು ಮೊಳಕೆಯಲ್ಲೇ ಚಿವುಟಿಹಾಕಬೇಕು ಎಂದರು. 80 ವರ್ಷಗಳಷ್ಟು ಹಳೆಯದಾದ ಕೃಷ್ಣರಾಜ ಪರಿಷನ್ಮಂದಿರ ಸಭಾಭವನ ನಿರ್ಮಾಣಕ್ಕೆ ರಾಜ್ಯ ಸರಕಾರ ಗಮನ ಹರಿಸಬೇಕು ಎಂದು ಕೋರಿದರು.
(ಇನ್‌ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications