ಕನ್ನಡ ಜಾತ್ರೆಗೆ ಜನ ಸಾಗರ: ಮದುವಣಗಿತ್ತಿಯ ಸಡಗರದಲ್ಲಿ ತುಮಕೂರು
ಇದು ಕನ್ನಡದ ಜಾತ್ರೆ!
ಹಾಗಂತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹರಿಕೃಷ್ಣ ಪುನರೂರು ಘೋಷಿಸಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಾಗ್ತುತಿವೆ ಎನ್ನುವ ಕೂಗಿಗೆ ಪುನರೂರರ ಎಗ್ಗಿಲ್ಲದ ಉತ್ತರವಿದು. ಸಾಹಿತ್ಯ- ಜಾತ್ರೆ ಜಿಜ್ಞಾಸೆ ಅದೇನೇ ಇರಲಿ, ತುಮಕೂರಿನ ಸಮ್ಮೇಳನಕ್ಕಂತೂ ಜನ ಹರಿದು ಬರುತ್ತಿದ್ದಾರೆ. ಕನ್ನಡದ ತೇರು ಮತ್ತಷ್ಟು ರಂಗುಗೊಂಡಿದೆ.
ಹುಬ್ಬಳ್ಳಿ-ಧಾರವಾಡ, ಮಂಗಳೂರು, ಕೋಲಾರ, ಗುಲ್ಬರ್ಗಾ, ಬಿಜಾಪುರ, ಶಿವಮೊಗ್ಗ .. ಊಹ್ಞೂಂ, ಸಾಹಿತ್ಯಾಸಕ್ತರಿಗೆ ದೂರವೆನ್ನುವುದು ಅಡ್ಡಿಯೇ ಅಲ್ಲ . ಈ ಹೊತ್ತಿನ ತುಮಕೂರನ್ನು ನೀವು ನೋಡಬೇಕು: ಸಾಕ್ಷಾತ್ ಹರಿಕೃಷ್ಣ ಪುನರೂರು ನೂರೆಂಟು ಕೆಲಸಗಳ ನಡುವೆಯೂ ಬೀಗಿತ್ತಿಯ ಸಂಭ್ರಮದಲ್ಲಿ ಓಡಾಡುತ್ತಿದ್ದಾರೆ. ತಮ್ಮ ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications