ತುಮಕೂರು ಸಾಹಿತ್ಯ ಜಾತ್ರೆಗೆ ಹೋಗುವಿರಾ? ಹೆಸರು ನೋಂದಾಯಿಸಿ..
ತುಮಕೂರು : ಫೆಬ್ರವರಿ 1 ರಿಂದ ಮೂರು ದಿನಗಳ ಕಾಲ ತುಮಕೂರಿನಲ್ಲಿ ನಡೆಯಲಿರುವ ಅಖಿಲ ಭಾರತ 69 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಈಗ, ಸಮ್ಮೇಳನದಲ್ಲಿ ಭಾಗವಹಿಸಲು ಬಯಸುವವರು ಹೆಸರು ನೋಂದಾಯಿಸಿಕೊಳ್ಳುವ ಕಾಲ.
ಸಮ್ಮೇಳನದಲ್ಲಿ ಭಾಗವಹಿಸಲು ಇಷ್ಟವಿರುವವರು 100 ರುಪಾಯಿ ಶುಲ್ಕ ಪಾವತಿಸಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಮೂರು ದಿನಗಳ ಕಾಲ ನಿಮ್ಮ ಊಟ, ವಸತಿ ವ್ಯವಸ್ಥೆಯನ್ನು ಸಮ್ಮೇಳನದ ಸ್ವಾಗತ ಸಮಿತಿ ವಹಿಸಿಕೊಳ್ಳುತ್ತದೆ.
ಹೆಸರು ನೋಂದಾಯಿಸಿಕೊಳ್ಳುವ ವಿಳಾಸ : ಕನ್ನಡ ಸಾಹಿತ್ಯ ಪರಿಷತ್ತು , ಪಂಪ ಮಹಾಕವಿ ರಸ್ತೆ , ಚಾಮರಾಜಪೇಟೆ, ಬೆಂಗಳೂರು- 560018. ಅಥವಾ, ಸ್ವಾಗತ ಸಮಿತಿ ಕಚೇರಿ, ಡಾ। ಗುಬ್ಬಿವೀರಣ್ಣ ಕಲಾಕ್ಷೇತ್ರ, ಬಾಳನಕಟ್ಟೆ ರಸ್ತೆ , ತುಮಕೂರು ವಿಳಾಸದಲ್ಲೂ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.
(ಇನ್ಫೋ ವಾರ್ತೆ) ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications