ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣನ ಹೆಸರಿನಲ್ಲಿ ಕಾರುಬಾರು ನಡೆಸಿದ ಜಯಚಂದ್ರ

By Staff
|
Google Oneindia Kannada News

ಜಯಚಂದ್ರರಿಗೇಕೆ ನನ್ನ ಮೇಲೆ ಸಿಟ್ಟೋ ಅರ್ಥವಾಗುತ್ತಿಲ್ಲ ಅನ್ನುತ್ತಾರೆ ಮರಿದೇವರು . ನಾನು ಎಡವಿದ್ದೆಲ್ಲಿ ಅನ್ನುವುದನ್ನು ಅವರು ನನಗೆ ಹೇಳಬಹುದಿತ್ತು . ಆದರೆ, ಕ್ಷುಲ್ಲಕ ಜಾತಿ ರಾಜಕಾರಣಕ್ಕಾಗಿ ಸಮ್ಮೇಳನವನ್ನು ಬಳಸಿಕೊಂಡರು. ಸಮ್ಮೇಳನವನ್ನು ರದ್ದುಗೊಳಿಸಲು ಮುಖ್ಯಮಂತ್ರಿ ಕೃಷ್ಣ ಅವರ ಹೆಸರನ್ನು ಬಳಸಿಕೊಳ್ಳಲೂ ಜಯಚಂದ್ರ ಹಿಂಜರಿಯಲಿಲ್ಲ ಎನ್ನುವ ಗಂಭೀರ ಆರೋಪವನ್ನು ಮರಿದೇವರು ಹೊರಿಸುತ್ತಾರೆ.

ಆ ಘಟನೆ ಇಷ್ಟು - ಕೆಲವು ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಗುಜರಾತ್‌ ದುರಂತದ ಹಿನ್ನೆಲೆಯಲ್ಲಿ ಸಮ್ಮೇಳನವನ್ನು ರದ್ದು ಪಡಿಸಲು ಮುಖ್ಯಮಂತ್ರಿ ಕೃಷ್ಣ ಸೂಚನೆ ನೀಡಿದ್ದಾರೆ ಎಂದು ಖಾಸಗಿ ವಾಹಿನಿಯಾಂದರ ಪ್ರತಿನಿಧಿಯಾಂದಿಗೆ ಹೇಳಿಕೊಂಡರು. ಆ ಹೇಳಿಕೆ ಪ್ರಸಾರವೂ ಆಯಿತು. ತಮಾಷೆಯೆಂದರೆ ಈ ವಿಚಾರ ಕೃಷ್ಣ ಅವರಿಗೆ ಗೊತ್ತೇ ಇರಲಿಲ್ಲ . ಈ ಹೇಳಿಕೆಯ ಹಿಂದೆ ಇದ್ದುದು ಕೃಷ್ಣ ಅಲ್ಲ ಜಯಚಂದ್ರ.

ಸಮ್ಮೇಳನಕ್ಕೆ ಸಂಪನ್ಮೂಲ ಕೊರತೆ ಇರಲಿಲ್ಲ : ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ನೀಡಲು ಒಪ್ಪಿಕೊಂಡಿದ್ದರು. ಇನ್ನು ಸಹೃದಯ ದಾನಿಗಳಿಗೇನೂ ಜಿಲ್ಲೆಯಲ್ಲಿ ಕೊರತೆಯಿಲ್ಲ . ವಾಸ್ತವ ಹೀಗಿರುವಾಗ ಸಮ್ಮೇಳನದ ರದ್ದತಿಗೆ ಸಂಪನ್ಮೂಲಗಳ ಕೊರತೆ ಅನ್ನುವುದು ಕೇವಲ ವದಂತಿಯಷ್ಟೇ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಮರಿದೇವರು.

ಪರಮೇಶ್ವರ್‌ ಏನೋ ಆಸಕ್ತಿ ತೋರಿಸಿದ್ದರು .. ಆದರೆ ... : ಜಿಲ್ಲೆಯ ಮತ್ತೊಬ್ಬ ಮಂತ್ರಿ, ಸಾಹಿತ್ಯಿಕ ಚಟುವಟಿಕೆಗಳಲ್ಲಿ

ಆಸಕ್ತಿಯಿರುವ ಜಿ. ಪರಮೇಶ್ವರ್‌ ತಮ್ಮ ಕ್ಷೇತ್ರವಾದ ಮಧುಗಿರಿಯಲ್ಲಿ ಸಮ್ಮೇಳನವನ್ನು ನಡೆಸಲು ಉತ್ಸುಕರಾಗಿದ್ದರು . ಈ ಪ್ರಸ್ತಾವನೆಗೆ ಮರಿದೇವರೂ ಒಪ್ಪಿದ್ದರು. ಆದರೆ, ಅದಕ್ಕೂ ಜಯಚಂದ್ರ ಕಲ್ಲು ಹಾಕಿದರು ಅನ್ನುತ್ತಾರೆ ಮರಿದೇವರು. ತಮಗೆ ದಕ್ಕದ ಗೌರವ ಪರಮೇಶ್ವರ್‌ಗೆ ದಕ್ಕುವುದು ಜಯಚಂದ್ರರಿಗೆ ಇಷ್ಟವಿರಲಿಲ್ಲ . ಇಲ್ಲಿ ಜಾತಿಕಾರಣದ್ದೂ ಪಾಲಿದೆ. ಕೃಷ್ಣ ಹಾಗೂ ಜಯಚಂದ್ರ ಒಂದು ಕೋಮಿನವರಾದರೆ, ಪರಮೇಶ್ವರ್‌ ಮತ್ತೊಂದು ಜಾತಿಗೆ ಸೇರಿದವರು.

ಜಯಚಂದ್ರರ ಮುನಿಸಿಗೆ ಇದು ಕಾರಣವಿರಬಹುದೇ ? : ಮರಿದೇವರು ಬಾಗಲಕೋಟೆ ಸಮ್ಮೇಳನಕ್ಕೆ ತೆರಳುವಾಗ ಅವರೊಂದಿಗಿದ್ದದ್ದು ಜಿಲ್ಲೆಗೆ ಸಮ್ಮೇಳನದ ಆತಿಥ್ಯ ವಹಿಸುವಂತೆ ಕೋರಿದ್ದ ಸಚಿವ ಪರಮೇಶ್ವರ್‌ ಅವರ ಶಿಫಾರಸ್ಸು ಪತ್ರ. ಮುಂದೆ ಜಿಲ್ಲೆಗೆ ಸಮ್ಮೇಳನದ ಆತಿಥ್ಯವೂ ಸಿಕ್ಕಿತು. ಆದರೆ, ಶಿಫಾರಸ್ಸು ಪತ್ರ ಪಡೆಯುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ತಮ್ಮನ್ನು ಲಕ್ಷಿಸದೆ ಹೋದ ಕುರಿತು ಜಯಚಂದ್ರರಿಗೆ ಅಸಮಾಧಾನವಿದೆ. ಆ ಕಾರಣದಿಂದಲೇ ಅವರು ಮರಿದೇವರೊಂದಿಗೆ ಸಮ್ಮೇಳನ ಕುರಿತು ಕೈ ಜೋಡಿಸಲು ಸಿದ್ಧರಿರಲಿಲ್ಲ ಎನ್ನುತ್ತಾರೆ ತುಮಕೂರಿನ ಸಾಹಿತ್ಯಿಕ ಹಾಗೂ ರಾಜಕೀಯ ಮೂಲಗಳು.

ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಅನ್ನುವ ಗಾದೆ ತುಮಕೂರಿನ ಮಟ್ಟಿಗೆ ಸತ್ಯವಾಗಿದೆ . ರಾಜಕಾರಣಿಗಳ ಕಚ್ಚಾಟದ ಸುಳಿಯಲ್ಲಿ ಸಮ್ಮೇಳನ ಮುಳುಗಿಹೋಗಿದೆ. ಬಹುಶಃ ಇಂತಹ ಘಟನೆ ಹಿಂದಿನ 68 ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿ ಯಾವತ್ತೂ ನಡೆದಿರಲಾರದು. ಆ ಕಳಂಕ ತುಮಕೂರಿಗೆ ಸಂದಿದೆ. ಮುಂದೆ ತುಮಕೂರಿನಲ್ಲಿ ಸಮ್ಮೇಳನ ನಡೆಸುವ ಬಗ್ಗೆ ಯಾರಾದರೂ ಮಾತಾಡಿದಲ್ಲಿ ಅವರನ್ನು ತಮಾಷೆಯಿಂದ ನೋಡುವಂತಾಗಿದೆ. ಅದೇನೇ ಇರಲಿ.. ಮರಿದೇವರೊಂದಿಗೆ ಜಯಚಂದ್ರ ಹಾಗೂ ಬಸವರಾಜು ಅವರನ್ನು ತುಮಕೂರಿನ ಜನತೆ ಬಹಳಷ್ಟು ಕಾಲ ನೆನಪಿನಲ್ಲಿಟ್ಟಿರುತ್ತಾರೆ.

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X