ಕಾಸರಗೋಡು ಹಿಂದಿಕ್ಕಿದ ಬೆಳಗಾವಿಗೆ 70 ನೇ ಸಾಹಿತ್ಯಸಮ್ಮೇಳನದ ಕುಂದಾ
ತುಮಕೂರು : 70 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೆಳಗಾವಿಯಲ್ಲಿ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ನಿರ್ಧರಿಸಿದ್ದಾರೆ.
ಡಾ.ಯು.ಆರ್.ಅನಂತಮೂರ್ತಿ ಅವರ ಅಧ್ಯಕ್ಷತೆಯಲ್ಲಿ ತುಮಕೂರಿನಲ್ಲಿ ನಡೆಯುತ್ತಿರುವ 69 ನೇ ಸಾಹಿತ್ಯ ಸಮ್ಮೇಳನದ ಮೂರನೇ ಹಾಗೂ ಅಂತಿಮ ದಿನವಾದ ಭಾನುವಾರ ಬೆಳಗಾವಿಯಲ್ಲಿ ಮುಂದಿನ ಸಮ್ಮೇಳನವನ್ನು ನಡೆಸುವ ತೀರ್ಮಾನವನ್ನು ಕಸಾಪ ಪದಾಧಿಕಾರಿಗಳ ಸಭೆ ಕೈಗೊಂಡಿತು. ಸಭೆಯಲ್ಲಿ ಭಾಗವಹಿಸಿದ್ದ 25 ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಬೆಳಗಾವಿಯಲ್ಲಿ ಸಮ್ಮೇಳನ ನಡೆಸಲು ಬಹುಮತದಿಂದ ನಿರ್ಣಯಿಸಿದರು.
ಈ ಮುನ್ನ ಕಾಸರಗೋಡು ಅಥವಾ ಉಡುಪಿಯಲ್ಲಿ 70 ನೇ ಸಾಹಿತ್ಯ ಸಮ್ಮೇಳನ ನಡೆಯಬಹುದೆಂದು ನಿರೀಕ್ಷಿಸಲಾಗಿತ್ತು . ಕನ್ನಡದ ಕೊಂಡು ಓದುವ ಮೊದಲ ವೆಬ್ ಪಾಕ್ಷಿಕ ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications