ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಸಮ್ಮೇಳನದಲ್ಲಿ ಐದು ನಿರ್ಣಯಗಳಿಗೆ ಸರ್ವಾನುಮತದ ಮುದ್ರೆ

By Staff
|
Google Oneindia Kannada News

ತುಮಕೂರು : 300 ಆಂಗ್ಲ ಶಾಲೆಗೆ ನೀಡಿರುವ ಅನುಮತಿ ಹಿಂತೆಗೆದುಕೊಳ್ಳುವ ಅಗ್ರಹ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಐದು ನಿರ್ಣಯಗಳನ್ನು ಅಖಿಲ ಭಾರತ 69ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂತಿಮ ದಿನವಾದ ಭಾನುವಾರ ಸರ್ವಾನುಮತದಿಂದ ಕೈಗೊಳ್ಳಲಾಯಿತು.

ಸಂಜೆ ನಡೆದ ಬಹಿರಂಗ ಅಧಿವೇಶನದಲ್ಲಿ ಕೈಗೊಂಡ ಐದು ನಿರ್ಣಯಗಳಲ್ಲಿ ರೈತರಿಗೆ ಸಂಬಂಧಿಸಿದ ಯಾವುದೇ ಆಗ್ರಹಗಳು ಸೇರಿಲ್ಲ ಎಂಬ ಆಕ್ಷೇಪಣೆಗಳು ಕೇಳಿ ಬಂದರೂ, ಕೈಗೊಂಡಿರುವ ನಿರ್ಣಯಗಳ ವಿರುದ್ಧ ಯಾರೂ ಚಕಾರವೆತ್ತಲಿಲ್ಲ.

ಐದು ನಿರ್ಣಯಗಳು :

  • ಮುನ್ನೂರು ಆಂಗ್ಲ ಶಾಲೆಗಳಿಗೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು.
  • ಕಾಸರಗೋಡು ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಬೇಕು. ಈ ನಿಟ್ಟಿನಲ್ಲಿ ಸರಕಾರ ಅಗತ್ಯ ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಕಾಸರಗೋಡಿನ ಕನ್ನಡಿಗರಿಗೂ ರಾಜ್ಯ ಸರಕಾರ ಶಿಕ್ಷಣ, ಉದ್ಯೋಗ, ಮತ್ತು ಸಾಂಸ್ಕೃತಿ ಸೌಲಭ್ಯಗಳನ್ನು ನೀಡಬೇಕು
  • ಕುದುರೆಮುಖದಲ್ಲಿ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸಿ, ತುಂಗ ಹಾಗೂ ಭದ್ರಾ ಮೂಲವನ್ನು ಸಂರಕ್ಷಿಸಿ ರಾಜ್ಯದ ಪ್ರಾಕೃತಿಕ ಸಂಪತ್ತನ್ನು ರಕ್ಷಿಸಬೇಕು.
  • ಕನ್ನಡಿಗರು ಹೆಚ್ಚಾಗಿರುವ ಇತರ ರಾಜ್ಯಗಳ ಪ್ರದೇಶದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯುವಂತೆ ರಾಜ್ಯವು ಇತರ ರಾಜ್ಯ ಸರಕಾರಗಳ ಮೇಲೆ ಒತ್ತಡ ಹೇರಬೇಕು.
  • ಕೇಂದ್ರ ಸರಕಾರದ ಕಚೇರಿಗಳಲ್ಲಿ ಸಿ ಮತ್ತು ಡಿ ವರ್ಗದ ನೇಮಕಾತಿಯಲ್ಲಿ ಸ್ಥಳೀಯರಿಗೆ ಪ್ರಾಧಾನ್ಯತೆ ಕೊಡಬೇಕು. ಸರೋಜಿನಿ ಮಹಿಷಿ ವರದಿ ಪ್ರಕಾರ ನೇಮಕಾತಿ ಸಮಿತಿಯಲ್ಲಿ ರಾಜ್ಯದ ಪ್ರತಿನಿಧಿಯಾಬ್ಬರು ಇರಲೇಬೇಕು.
(ಇನ್ಫೋ ವಾರ್ತೆ)

ನಿರ್ಣಯಗಳ ಬಗ್ಗೆ ನೀವೇನು ಹೇಳುತ್ತೀರಿ ?

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X