ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುನರೂರು ಅವರೊಂದಿಗೆ ಕನ್ನಡ.ಇಂಡಿಯಾಇನ್ಫೋ.ಕಾಂ ಮಾತುಕತೆ

By Staff
|
Google Oneindia Kannada News

(ಮಂಗಳೂರು ಪ್ರತಿನಿಧಿಯಿಂದ)

ಮಂಗಳೂರು : ರಾಜ್ಯದ ಸಾಂಸ್ಕೃತಿಕ ಮಹತ್ವದ ಉನ್ನತ ಸ್ಥಾನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಗೆ 58 ರ ಹರೆಯದ ಹರಿಕೃಷ್ಣ ಪುನರೂರು ಆಯ್ಕೆಯಾಗಿರುವುದು, ದಕ್ಷಿಣಕನ್ನಡ, ಉಡುಪಿ ಹಾಗೂ ಕಾಸರಗೋಡುಗಳಲ್ಲಿ ಹರ್ಷದ ವಾತಾವರಣ ಮೂಡಿಸಿದೆ.

ಕನ್ನಡ.ಇಂಡಿಯಾಇನ್ಫೋ ಪ್ರತಿನಿಧಿಯಾಂದಿಗೆ ದೂರವಾಣಿ ಮೂಲಕ ತಮ್ಮ ಸಂತೋಷ ಹಂಚಿಕೊಂಡ ಪುನರೂರು, ಸಾಹಿತ್ಯ ಪರಿಷತ್ತನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಕ.ಸಾ.ಪ. ಅಧ್ಯಕ್ಷರಾಗಿ ತಮ್ಮ ಮೊದಲ ಆದ್ಯತೆ ಎಂದರು. ಸರ್ಕಾರ ಪರಿಷತ್ತಿಗೆ ಈಗಾಗಲೇ ಸಾಕಷ್ಟು ಹಣ ಕೊಟ್ಟಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿಯಲು ತಾವು ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು- ಸಾರ್ವಜನಿಕ ವಲಯದಿಂದ ಹಣ ಕ್ರೋಢೀಕರಿಸಲು ಉದ್ದೇಶಿಸಿರುವುದಾಗಿ ಹೇಳಿದರು.

ಪ್ರಾಧಿಕಾರದೊಂದಿಗೆ ಜೊತೆಗೂಡಿ ಕನ್ನಡದ ಕೆಲಸ
ಕನ್ನಡದ ಕೆಲಸವನ್ನು ಹೆಚ್ಚು ಪರಿಣಾಮಕಾರಿಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಜೊತೆಯಾಗಿ ಪರಿಷತ್ತು ಕಾರ್ಯ ನಿರ್ವಹಿಸುವುದಾಗಿ ಹೇಳಿದ ಅವರು, ಗಡಿನಾಡಿನಲ್ಲಿ ಕನ್ನಡ ಚಟುವಟಿಕೆಗಳನ್ನು ಹೆಚ್ಚಿಸಲು ಪ್ರಯತ್ನಿಸುವುದಾಗಿ ಹಾಗೂ ಹಿರಿ ಕಿರಿಯ ಸಾಹಿತಿಗಳ ಸಭೆ ಕರೆದು ಆಗಬೇಕಾಗಿರುವ ಕೆಲಸಗಳ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.

ಭಾಷಾವಾರು ಪ್ರಾಂತ್ಯ ವಿಂಗಡಣೆ ಸಂದರ್ಭದಲ್ಲಿ ರಾಜ್ಯದ ಕೈ ಬಿಟ್ಟಿರುವ ಹಲವಾರು ಪ್ರದೇಶಗಳು ವಾಪಸ್ಸು ರಾಜ್ಯಕ್ಕೆ ಸೇರ್ಪಡೆಯಾಗಬೇಕು ಎನ್ನುವ ಕೂಗಿಗೆ ಬೆಂಬಲ ವ್ಯಕ್ತಪಡಿಸಿದ ಪುನರೂರು, ಕಾಸರಗೋಡನ್ನು ಕರ್ನಾಟಕದೊಂದಿಗೆ ವಿಲೀನಗೊಳಿಸುವ ಹಕ್ಕೊತ್ತಾಯದ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

ಅಭಿನಂದನೆಗಳ ಮಹಾಪೂರ
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಹಿರಿಯ ಸಾಹಿತಿ ಕಯ್ಯಾರ ಕಿಞ್ಞಣ್ಣ ರೈ, ವರ್ಧಮಾನ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಜೋಕಟ್ಟೆ ಕ.ಸಾ.ಪ. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪುನರೂರು ಅವರನ್ನು ಅಭಿನಂದಿಸಿದ್ದಾರೆ.

What do you expect from Punaroor?

ವಾರ್ತಾ ಸಂಚಯ

‘ಸಾಹಿತ್ಯ ಸಾರಥಿ’ಹರಿಕೃಷ್ಣ ಪುನರೂರು
ಸಾಹಿತಿ ಚಂಪಾ ಅವರನ್ನು ಹಿಂದೂಡಿದ ಸಂಘಟಕ ಪುನರೂರು
ಕ.ಸಾ.ಪ. ಜಿಲ್ಲಾಧ್ಯಕ್ಷರು
ಪರಿಷತ್ತಿನಂತಹ ಸಂಘಟನೆಯ ಅಧ್ಯಕ್ಷತೆಗೆ ಸಮರ್ಥ ಸಂಘಟಕರೇ ಸೈ
ಪರಿಚಾರಕರೋ ಸೃಷ್ಟಿಕರ್ತರೋ.. ಪರಿಷತ್ತಿನ ಅಧ್ಯಕ್ಷಗಿರಿಗೆ ಗುದ್ದಾಟ..
ಚಂಪಾ ಹೊಸಗನ್ನಡದ ಪಂಪ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X