ಸಾಹಿತ್ಯಸಮ್ಮೇಳನ: ಸಂಘಟಕರ ವಿರುದ್ಧ ಊಟ-ವಸತಿ ವಂಚಿತರ ಬಂಡು

ತುಮಕೂರು : 69 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಪ್ರತಿನಿಧಿಗಳು ಊಟ ವಸತಿ ವ್ಯವಸೆ ್ಥ ಸರಿಯಾಗಿಲ್ಲದಿರುವುದರ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದು, ಸಮ್ಮೇಳನದ ಸಂಘಟಕರು ತೀವ್ರ ಮುಜುಗರಕ್ಕೀಡಾಗಿದ್ದಾರೆ.

ಶುಕ್ರವಾರ ಬೆಳಗ್ಗೆ ಸಡಗರದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ, ಊಟ ವಸತಿಗಳ ತೊಂದರೆ ಎದುರಿಸಿದ ಪ್ರತಿನಿಧಿಗಳು ಸಭಾಂಗಣದ ಮುಂದೆ ಧರಣಿ ಕುಳಿತು ಸಂಘಟಕರು ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧ ಘೋಷಣೆಗಳನ್ನು ಕೂಗಿದರು. ದಿನಗಟ್ಟಲೆ ಪ್ರಯಾಣ ಮಾಡಿ ತುಮಕೂರು ಸೇರಿರುವ ಸುಮಾರು 10 ಸಾವಿರ ಮಂದಿ ಪ್ರತಿನಿಧಿಗಳು ಊಟೋಪಚಾರ, ವಸತಿಯ ವ್ಯವಸ್ಥೆ ಇಲ್ಲದೆ ಸಿಡಿದೆದ್ದಿದ್ದಾರೆ.

ಬೆಳಗ್ಗೆಯೇ ಸಮ್ಮೇಳನ ಸಭಾಂಗಣದ ಮುಂದೆ ಧರಣಿ ಕುಳಿತ ಪ್ರತಿನಿಧಿಗಳು, ಸಮ್ಮೇಳನಕ್ಕೆ ಆಗಮಿಸಿದ ಹಿರಿಯ ಹಾಗೂ ಗಣ್ಯ ಸಾಹಿತಿಗಳು ಸಭಾಂಗಣ ಪ್ರವೇಶಿಸಲು ಅಡ್ಡಿ ಮಾಡಿದರು. ಸಭಾಂಗಣದೊಳಕ್ಕೆ ಆದರದ ಸ್ವಾಗತದೊಂದಿಗೆ ಪ್ರವೇಶಿಸಬೇಕಿದ್ದ ಸಾಹಿತಿಗಳು ಈ ಧರಣಿಯಿಂದ ಇರುಸುಮುರುಸಿಗೆ ಒಳಗಾಗಬೇಕಾಯ್ತು.

ಧರಣಿಯಿಂದಾಗಿ ಉಂಟಾದ ಗಲಾಟೆಯನ್ನು ನಿಯಂತ್ರಿಸಲು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಆದಾಗ್ಯೂ ಊಟ ವಸತಿಯ ವ್ಯವಸ್ಥೆಗಳು ಸರಿಯಾಗುವ ಮುನ್ನ ಧರಣಿಯನ್ನು ಕೈಬಿಡುವುದಿಲ್ಲ ಎಂದು ಸಾಹಿತಿಗಳು ಪಟ್ಟು ಹಿಡಿದು ಕುಳಿತಿದ್ದಾರೆ. ಸಂಘಟಕರು ಮುಜುಗರಕ್ಕೀಡಾಗಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+