ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು, ಮೈಸೂರಿನ ಜನಕ್ಕೆ ಕರ್ನಾಟಕದ ಜ್ಞಾನ ಕಡಿಮೆ- ಪಾಪು

By Staff
|
Google Oneindia Kannada News

ದಾವಣಗೆರೆ: ಅಪ್ರಸಿದ್ಧರ ಹಾಗೂ ಅಯೋಗ್ಯರ ಹೆಸರುಗಳನ್ನು ಬೆಂಗಳೂರಿನಲ್ಲಿ ರಸ್ತೆಗಳಿಗೆ ಇಡಲಾಗಿದೆ. ಬೆಂಗಳೂರು, ಮೈಸೂರಿನ ಜನಕ್ಕೆ ಕರ್ನಾಟಕದ ಬಗೆಗಿನ ಜ್ಞಾನ ಕಡಿಮೆ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ಆರೋಪಿಸಿದ್ದಾರೆ.

ಬೆಂಗಳೂರಿನ ಕೆಲವು ಪ್ರದೇಶದ ಹೆಸರುಗಳನ್ನು ತಮಿಳರು ಕೆಡಿಸಿದ್ದಾರೆ. ಇದರ ಬಗ್ಗೆ ಗಮನ ಹರಿಸದ ಅಲ್ಲಿನ ಕನ್ನಡ ಹೋರಾಟಗಾರರು ವಿರೂಪಗೊಂಡ ಹೆಸರುಗಳನ್ನೇ ತಾವೂ ಬಳಸುತ್ತಿದ್ದಾರೆ ಎಂದು, ಭಾನುವಾರ ಟಿ.ಗಿರಿಜಾ ಅವರ ‘‘ದಾವಣಗೆರೆ : ಇದು ನಮ್ಮ ಜಿಲ್ಲೆ ’’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಪಾಪು ಟೀಕಿಸಿದರು.

ಶಾಸಕರಿಗೆ ಬೆಂಗಳೂರಿನಲ್ಲಿ ನಿವೇಶನ ಅಥವಾ ಮನೆಯನ್ನು ನೀಡುವ ಸರ್ಕಾರದ ಕ್ರಮ ಸರಿಯಲ್ಲ . ಸಂಸದರಿಗೆ ದೆಹಲಿಯಲ್ಲಿ ಮನೆ ಅಥವಾ ನಿವೇಶನ ನೀಡುವ ಕೇಂದ್ರ ಸರ್ಕಾರದ ಕ್ರಮವೂ ಸಮರ್ಥನೀಯವಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ತಮ್ಮ ಸ್ವಕ್ಷೇತ್ರದಲ್ಲಿ ವಾಸವಾಗಿರಬೇಕೇ ಹೊರತು ರಾಜಧಾನಿಯಲ್ಲಲ್ಲ , ದೇಶ ಹಾಗೂ ಜನತೆಯ ಬಗೆಗೆ ಚಿಂತಿಸುವ ರಾಜಕಾರಣಿಗಳು ಕಂಡುಬರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಪಾಪು, ರಾಜಕಾರಣಿಗಳು ಅಧಿಕಾರಕ್ಕೆ ಬಂದ ಕೂಡಲೇ ಮನೆಯ ಶೃಂಗಾರ- ವಾಸ್ತು ಎಂದು ಹಣ ಪೋಲು ಮಾಡುತ್ತಾರೆ ಎಂದರು.

ಜಿಲ್ಲಾಧಿಕಾರಿ ಕೆ. ಶಿವರಾಂ ಪುಸ್ತಕ ಬಿಡುಗಡೆ ಮಾಡಿದರು. ಜನತಾವಾಣಿ ಸಂಪಾದಕ ಎಚ್‌.ಎನ್‌.ಷಡಕ್ಷರಪ್ಪ, ಕಾದಂಬರಿಕಾರ ಬಿ.ಎಲ್‌.ವೇಣು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿವೃತ್ತ ನಿರ್ದೇಶಕ ಕೆ.ವೆಂಕಣ್ಣಾಚಾರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

Post your view on this article

ವಾರ್ತಾ ಸಂಚಯ

ನಾಮಕರಣ ನವೀಕರಣ : ನಮ್ಮೂರ ದಾರಿಗಿಡಿ ದಿಗ್ಗಜರ ಹೆಸರ ರಂಗವಲ್ಲಿ
ಕಾರವಾರದ ಬೀಚ್‌ಗೆ ಟಾಗೋರ್‌ ಹೆಸರೇಕೆ? ಕಾರಂತರ ಹೆಸರಿಟ್ಟರಾಗದೇ?
ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು?

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X