ಹಿರಿಯ ಸಾಹಿತಿ ಎಸ್.ಕೆ. ರಾಮಚಂದ್ರರಾವ್‌ಗೆ ಅ.ನ.ಕೃ ಪ್ರಶಸ್ತಿ
ಬೆಂಗಳೂರು : ಹಿರಿಯ ಸಾಹಿತಿ ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರಿಗೆ 2000 ಸಾಲಿನ ಅ.ನ. ಕೃ ಪ್ರಶಸ್ತಿ ದೊರೆತಿದೆ. ಮೇ ತಿಂಗಳ ಕೊನೆಯ ವಾರದಲ್ಲಿ , ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು.
ಪ್ರಶಂಸನಾ ಪತ್ರ, ಪ್ರಶಸ್ತಿ ಫಲಕ ಹಾಗೂ 20,001 ರುಪಾಯಿ ನಗದನ್ನು ಪ್ರಶಸ್ತಿ ಒಳಗೊಂಡಿದೆ. ಕನ್ನಡ ಚಳವಳಿಯಲ್ಲಿ ಮುಂದಾಳಾಗಿದ್ದ ಹಾಗೂ ಕನ್ನಡ ಕಾದಂಬರಿ ಸಾರ್ವಭೌಮ ಎಂದು ಹೆಸರಾಗಿರುವ ದಿವಂಗತ ಅ.ನ. ಕೃಷ್ಣರಾಯರ ಸ್ಮರಣಾರ್ಥ ಯಾವುದೇ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವ್ಯಕ್ತಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಗದ್ಯ ಸಾಹಿತ್ಯದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ರಾಮಚಂದ್ರರಾವ್ ಅವರು ಮೂಲತಃ ಮನೋ ವಿಜ್ಞಾನಿ. ಎಚ್.ಎಸ್. ವೆಂಕಟೇಶ ಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯಂ ಹಾಗೂ ಜಿ.ಎನ್. ರಂಗನಾಥ್‌ರಾವ್ ಅವರಿದ್ದ ಆಯ್ಕೆ ಸಮಿತಿ ರಾಮಚಂದ್ರರಾವ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications