ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯನಗರದ ಎಚ್ಚೆನ್‌ ಕಲಾ ಕ್ಷೇತ್ರದಲ್ಲಿ ಪ್ರತಿ ಶನಿವಾರವೂ ನಾಟಕ

By Staff
|
Google Oneindia Kannada News

C.R.Simha in Typical Kailasamಬೆಂಗಳೂರು: ಹವ್ಯಾಸಿ ರಂಗ ತಂಡ ‘ವಾರಾಂತ್ಯದ ನಾಟಕ ಯೋಜನೆ’ಯನ್ನು ಹಮ್ಮಿಕೊಂಡಿದ್ದು , ಪ್ರತಿಶನಿವಾರದಂದು ಜಯನಗರದ ಎಚ್ಚೆನ್‌ ಕಲಾಕ್ಷೇತ್ರದಲ್ಲಿ ಪ್ರಸಿದ್ಧ ನಾಟಕಗಳನ್ನು ಪ್ರದರ್ಶಿಸಲಿದೆ.

ಮಾರ್ಚ್‌ 2ರಂದು ಆರಂಭವಾಗುವ ಈ ವಾರಾಂತ್ಯ ನಾಟಕ ಸರಣಿ ಡಿಸೆಂಬರ್‌ ತಿಂಗಳ ಕೊನೆಯ ವಾರದವರೆಗೆ ನಡೆಯಲಿದೆ. ಈ ಮಾಲಿಕೆಯಲ್ಲಿ ರಂಗಾಸಕ್ತರ ಮನಗೆದ್ದ ಹಳೆಯ ಮತ್ತು ಹೊಸ ನಾಟಕಗಳು ಪ್ರದರ್ಶನ ಕಾಣಲಿವೆ ಎಂದು ಹಿರಿಯ ರಂಗನಟ - ನಿರ್ದೇಶಕ ಸಿ.ಆರ್‌. ಸಿಂಹ ತಿಳಿಸಿದ್ದಾರೆ.

ಆರಂಭದಲ್ಲಿ ಟಿಪಿಕಲ್‌ ಟಿ.ಪಿ. ಕೈಲಾಸಂ, ಕುವೆಂಪು ಬಗೆಗಿನ ನಾಟಕ ‘ರಸಋಷಿ’, ಗಿರೀಶ್‌ ಕಾರ್ನಾಡರ ಅಗ್ನಿ ಮತ್ತು ಮಳೆ, ಹಾಗೂ ಋತ್ವಿಕ್‌ ಸಿಂಹ ಬರೆದ ಹಾವು ಏಣಿ ನಾಟಕಗಳು ಬೆಳಕು ಕಂಡರೆ, ನಂತರದ ದಿನಗಳಲ್ಲಿ ಹೊಸ ನಾಟಕಗಳನ್ನು ಪರಿಚಯಿಸಲಾಗುವುದು. ಒಟ್ಟು ಹತ್ತು ತಿಂಗಳ ಅವಧಿಯಲ್ಲಿ ಎಂಟು ನಾಟಕಗಳ 44 ಪ್ರದರ್ಶನಗಳು ನಡೆಯಲಿವೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X