ಯಶಸ್ವಿ ಸ್ತನ್ಯಪಾನಕ್ಕೆ ಚರ್ಮದಿಂದ ಚರ್ಮದ ಸಂಪರ್ಕ ಸಹಕಾರ!

ಮಗುವಿನ ಉತ್ತಮ ಆರೋಗ್ಯಕ್ಕೆ ಹಾಗೂ ಬೆಳವಣಿಗೆಗೆ ತಾಯಿಯ ಎದೆ ಹಾಲು ತುಂಬಾ ಮುಖ್ಯ. ಆದರೆ ಕೆಲವೊಮ್ಮೆ ಯಶಸ್ವಿಯಾಗಿ ಎದೆಹಾಲುಣಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ನಾನಾ ಕಾರಣಗಳಿದ್ದರೂ ವೈದ್ಯರು ಸುಲಭ ಹಾಗೂ ಸರಳ ಸ್ತನ್ಯಪಾನಕ್ಕಾಗಿ ಕೆಲ ಸಲಹೆಗಳನ್ನು ನೀಡುತ್ತಾರೆ. ಅದರಲ್ಲಿ ಚರ್ಮದಿಂದ ಚರ್ಮದ ಸಂಪರ್ಕ ಪ್ರಮುಖವಾಗಿದೆ. ಅಂದರೆ ತಾಯಿ ಮತ್ತು ಮಗು ಇಬ್ಬರ ಸಂಪರ್ಕ ಯಶಸ್ವಿ ಸ್ತನ್ಯಪಾನಕ್ಕೆ ಅತ್ಯಾವಶ್ಯಕವಾಗಿದೆ.

ಮಗುವಿಗೆ ನೀಡುವ ಆರೈಕೆಯನ್ನು ಕಾಂಗರೂ ಆರೈಕೆ ಎಂದು ಕರೆಯಲಾಗುತ್ತದೆ. ಇದು ಚರ್ಮದಿಂದ ಚರ್ಮದ ಸಂಪರ್ಕದ ಬಂಧವನ್ನು ಬೆಳೆಸುತ್ತದೆ ಮತ್ತು ತಾಯಿ ಹಾಗೂ ಮಗುವಿಗೆ ಹೆಚ್ಚು ವೈದ್ಯಕೀಯ ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ, ಕಡಿಮೆ ತೂಕದೊಂದಿಗೆ ಅಥವಾ ಅವಧಿಗಿಂತ ಮುನ್ನವೇ ಜನಿಸುವ ಶಿಶುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

essential-for-successful-breastfeeding

ಈ ಅಭ್ಯಾಸವು ನಿಮ್ಮ ಮಗುವನ್ನು ನಿಮ್ಮ ಬರಿದಾದ ಎದೆಗೆ ಒತ್ತಿ ಹಿಡಿದಿಟ್ಟುಕೊಳ್ಳುವುದಾಗಿದೆ ಮತ್ತು ಎನ್ಐಸಿಯು ಸೇರಿದಂತೆ ಆಸ್ಪತ್ರೆಗಳಲ್ಲಿ ಹಾಗೂ ಮನೆಗಳಲ್ಲಿ ಈ ಅಭ್ಯಾಸವನ್ನು ಮಾಡಬಹುದು. ನಿಮ್ಮ ಮತ್ತು ನಿಮ್ಮ ಮಗುವಿನ ಅಗತ್ಯತೆಗಳ ಆಧಾರದಲ್ಲಿ ಹೀಗೆ ಹಿಡಿದಿಟ್ಟುಕೊಳ್ಳುವ ಅವಧಿಯು ಬದಲಾಗುತ್ತದೆ.

ಆರೈಕೆ ತಂಡ ನೀಡುವ ಶಿಫಾರಸುಗಳು ಅಥವಾ ಸಲಹೆಯುಕ್ತ ಮಾರ್ಗದರ್ಶನದಂತೆ ಮಾಡಬೇಕಾಗುತ್ತದೆ. ಆರಂಭಿಕ ಹಂತದಲ್ಲಿ ತಾಯಂದಿರು ಅಥವಾ ಜನ್ಮ ನೀಡುವ ಪೋಷಕರು, ತಂದೆ, ಕುಟುಂಬ ಸದಸ್ಯರು ಅಥವಾ ತರಬೇತಿ ಪಡೆದ ಸ್ವಯಂಸೇವಕರು ಈ ಕಾಂಗರೂ ಆರೈಕೆಯನ್ನು ಮಗುವಿಗೆ ಒದಗಿಸಬಹುದಾಗಿದೆ. ಸುರಕ್ಷತೆ ಮತ್ತು ಕಾರ್ಯಸಾಧ್ಯತೆಗಳನ್ನು ಪರಿಗಣಿಸಿ, ಮಗುವಿನ ವೈದ್ಯಕೀಯ ಸ್ಥಿತಿಗತಿಗಳನ್ನು ಪರಿಗಣಿಸಿ ಈ ಅಭ್ಯಾಸದ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ಅಗತ್ಯವಿದ್ದಾಗ ಆರೈಕೆ ತಂಡವು ಈ ಮಾರ್ಗದರ್ಶನ ನೀಡುತ್ತದೆ.

essential-for-successful-breastfeeding

ಎದೆಹಾಲುಣಿಸಲು ಚರ್ಮದಿಂದ ಚರ್ಮಕ್ಕೆ ಸಂಪರ್ಕ ಕಲ್ಪಿಸುವುದರಿಂದ ಆಗುವ ಕೆಲವು ಪ್ರಯೋಜನಗಳಿವು:-

1.ಬಾಂಧವ್ಯ ಮತ್ತು ಆರಾಮದಾಯಕತೆ: ಚರ್ಮದಿಂದ ಚರ್ಮದ ನಡುವಿನ ಸಂಪರ್ಕವು ತಾಯಿ ಮತ್ತು ಮಗುವಿನ ನಡುವಿನ ಸುರಕ್ಷತೆ ಮತ್ತು ಆರಾಮದಾಯಕತೆ ಸ್ಥಾಪಿಸುತ್ತದೆ. ಇದು ಯಶಸ್ವಿ ಹಾಲುಣಿಸುವಿಕೆಗೆ ಅತ್ಯಂತ ಅಗತ್ಯವಾದ ಅಂಶವಾಗಿದೆ.

2.ಸ್ತನ್ಯಪಾನದ ಪ್ರತಿವರ್ತನೆಗಳನ್ನು ಹೆಚ್ಚಳ ಮಾಡುತ್ತದೆ: ನಿಮ್ಮ ಪಕ್ಕದಲ್ಲಿ ಮಗುವನ್ನು ಮಲಗಿಸಿಕೊಳ್ಳುವುದರಿಂದ ಅಥವಾ ಇಟ್ಟುಕೊಳ್ಳುವುದರಿಂದ ಸಹಜವಾಗಿ ಶುಶ್ರೂಷೆ ಅಗತ್ಯಗಳನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ನೇರವಾಗಿ ಮಗುವಿಗೆ ಸ್ತನ ಲಭ್ಯವಾಗುವಂತೆ ಮಾಡುತ್ತದೆ. ಇದರಿಂದ ಸುಗಮವಾಗಿ ಮಗುವಿಗೆ ಹಾಲು ಸಿಗಲು ಸಾಧ್ಯವಾಗುತ್ತದೆ.

3.ದೇಹದ ತಾಪಮಾನವನ್ನು ನಿಯಂತ್ರಿಸುತ್ತದೆ: ತಾಯಿ ಮಗುವನ್ನು ಸ್ಪರ್ಶ ಮಾಡುವುದರಿಂದ ಮಗುವಿನ ದೇಹದ ತಾಪಮಾನವನ್ನು ನಿಯಂತ್ರಣ ಮಾಡಲು ನೆರವಾಗುತ್ತದೆ. ಇದರ ಜೊತೆಗೆ ಮಗುವನ್ನು ಬೆಚ್ಚಗಿರುವಂತೆ ಮಾಡುತ್ತದೆ ಮತ್ತು ಆಹಾರ ಸೇವನೆಯ ಅಭ್ಯಾಸ ಮಟ್ಟವನ್ನು ಹೆಚ್ಚಳ ಮಾಡುತ್ತದೆ.

4.ಹೃದಯ ಬಡಿತ ಪ್ರಮಾಣ ಮತ್ತು ಉಸಿರಾಟವನ್ನು ಸ್ಥಿರವಾಗಿಡುತ್ತದೆ: ಆರೈಕೆ ಅಥವಾ ಸ್ತನ್ಯಪಾನ ಮಾಡುವಾಗ ಏರ್ಪಡುವ ಚರ್ಮದಿಂದ ಚರ್ಮದ ನಡುವಿನ ಸಂಪರ್ಕವು ಮಗುವಿನ ಹೃದಯ ಬಡಿತ ಪ್ರಮಾಣ ಮತ್ತು ಉಸಿರಾಟದ ಮಾದರಿಗಳನ್ನು ಸ್ಥಿರವಾಗಿಡಲು ನೆರವಾಗುತ್ತದೆ.

5.ಹಾಲು ಉತ್ಪಾದನೆಯನ್ನು ಉತ್ತೇಜಿಸುತ್ತದೆ: ಆರಂಭಿಕ ಸ್ತನ್ಯಪಾನ ಮತ್ತು ಸಂಪರ್ಕವು ಆಕ್ಸಿಟಾಸಿನ್ ಅನ್ನು ಬಿಡುಗಡೆ ಮಾಡಲು ಸಹಕಾರಿಯಾಗುತ್ತದೆ. ಇದು ಸರಾಗವಾಗಿ ಹಾಲು ಹೊರಬರಲು ಮತ್ತು ಉತ್ಪಾದನೆಯನ್ನು ಹೆಚ್ಚಿಸುತ್ತದೆ.

6.ಆರಂಭಿಕ ಸ್ತನ್ಯಪಾನಕ್ಕೆ ಬೆಂಬಲ ನೀಡುತ್ತದೆ: ನೇರವಾಗಿ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಏರ್ಪಡುವುದರಿಂದ ಹಾಲುಣಿಸಲು ಉತ್ತೇಜಿಸುವುದರೊಂದಿಗೆ ಸ್ತನ್ಯಪಾನ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತದೆ.

essential-for-successful-breastfeeding

ಸ್ತನ್ಯಪಾನಕ್ಕಾಗಿ ಚರ್ಮದಿಂದ ಚರ್ಮದ ಸಂಪರ್ಕದ ಫಲಿತಾಂಶಗಳು:-

1.ಪ್ರವೃತ್ತಿಯ ಉತ್ತೇಜನ: ಜನಿಸಿದ ತಕ್ಷಣ ಮಗುವನ್ನು ತಾಯಿಯ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಕಲ್ಪಿಸುವುದರಿಂದ ಮಗುವಿನ ಪ್ರವೃತ್ತಿ ಪ್ರಮಾಣವನ್ನು ಉತ್ತೇಜಿಸುತ್ತದೆ. ಇದು ಒಂದು ರೀತಿಯಲ್ಲಿ ಗೋಲ್ಡನ್ ಅವರ್'' ಇದ್ದಂತೆ. ಹುಟ್ಟಿದ ತಕ್ಷಣದ ಅವಧಿಯಲ್ಲೇ ಮಗುವಿಗೆ ಸ್ತನ್ಯಪಾನ ಆರಂಭಿಸಲು ಸಹಾಯ ಮಾಡುತ್ತದೆ ಮತ್ತು ದೀರ್ಘಾವಧಿಯ ಸ್ತನ್ಯಪಾನದ ಯಶಸ್ಸನ್ನು ಹೆಚ್ಚಿಸುತ್ತದೆ.

2.ಹಾಲು ಹೀರಿಕೊಳ್ಳುವುದು ಮತ್ತು ಚೀಪುವುದನ್ನು ಹೆಚ್ಚಿಸುತ್ತದೆ: ಚರ್ಮದಿಂದ ಚರ್ಮಕ್ಕೆ ಸಂಪರ್ಕ ಏರ್ಪಡುವುದರಿಂದ ಸಹಜವಾದ ಆಹಾರ ನಡವಳಿಕೆಗಳನ್ನು ಪ್ರೇರೇಪಿಸುತ್ತದೆ, ತಾಯಿಯ ಉಷ್ಣತೆ ಮತ್ತು ವಾಸನೆ ಪರಿಣಾಮದಿಂದಾಗಿ ಉತ್ತಮವಾದ ರೀತಿಯಲ್ಲಿ ಮಗುವಿನ ಬಾಯಿಗೆ ಮೊಲೆ ಹಾಗೂ ಹಾಲು ಸರಾಗವಾಗಿ ಲಭ್ಯವಾಗುವುದನ್ನು ಸುಗಮಗೊಳಿಸುತ್ತದೆ.

3.ಹಾಲು ಉತ್ಪಾದನೆಯನ್ನು ಹೆಚ್ಚಿಸುತ್ತದೆ: ನಿಯಮಿತವಾಗಿ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಮಾಡಿ ಸ್ತನ್ಯಪಾನ ಮಾಡುವುದರಿಂದ ಹಾರ್ಮೋನ್ ಗಳು ಬಿಡುಗಡೆಯಾಗುತ್ತವೆ. ವಿಶೇಷವಾಗಿ ಹಾಲು ಉತ್ಪಾದನೆ ಮತ್ತು ಸರಾಗವಾಗಿ ಸ್ತನ್ಯಪಾನ ಮಾಡುವಾಗ ಮಗುವಿಗೆ ಹಾಲು ಸರಾಗವಾಗಿ ಲಭ್ಯವಾಗಲು ಅಗತ್ಯವಿರುವ ಪ್ರೋಲ್ಯಾಕ್ಟಿನ್ ಮತ್ತು ಆಕ್ಸಿಟಾಸಿನ್ ಗಳನ್ನು ಬಿಡುಗಡೆ ಮಾಡಲು ಸಹಕಾರಿಯಾಗುತ್ತದೆ.

4.ಬಾಂಧವ್ಯ ಮತ್ತು ಆತ್ಮವಿಶ್ವಾಸ ವೃದ್ಧಿ: ಚರ್ಮದಿಂದ ಚರ್ಮದ ಸಂಪರ್ಕವು ತಾಯಿ ಮತ್ತು ಮಗುವಿನ ನಡುವೆ ಭಾವನಾತ್ಮಕವಾದ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಸುರಕ್ಷಿತವಾದ ಆಹಾರ ಮತ್ತು ಆರಾಮದಾಯಕವಾದ ವಾತಾವರಣವನ್ನು ಪೋಷಣೆ ಮಾಡುತ್ತದೆ ಮತ್ತು ಸ್ತನ್ಯಪಾನದ ಸವಾಲುಗಳನ್ನು ನಿಭಾಯಿಸುವಲ್ಲಿ ತಾಯಿಯಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ.

5.ರೋಗನಿರೋಧಕ ಪ್ರತಿಕ್ರಿಯೆಯನ್ನು ಸುಧಾರಣೆ ಮಾಡುತ್ತದೆ: ಕಾಂಗರೂ ಆರೈಕೆಯು ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಮರ್ಥವಾಗಿ ಹೆಚ್ಚಿಸುತ್ತದೆ, ಉತ್ತಮ ಆರೋಗ್ಯವನ್ನು ಕಾಪಾಡಲು ಮತ್ತು ಸೋಂಕಿನ ದುರ್ಬಲತೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅಲ್ಲದೇ, ಯಶಸ್ವಿ ಸ್ತನ್ಯಪಾನಕ್ಕೆ ಬೆಂಬಲ ನೀಡುತ್ತದೆ.

essential-for-successful-breastfeeding

ಸ್ತನ್ಯಪಾನ ಪ್ರಕ್ರಿಯೆಯುದ್ದಕ್ಕೂ ನೆನಪಿಟ್ಟುಕೊಳ್ಳಬೇಕಾದ ಪ್ರಮುಖ ಅಂಶಗಳು:-

•ಸ್ಥಾನೀಕರಣ: ಮಗುವಿನ ಉಸಿರಾಟಕ್ಕೆ ಅನುಕೂಲವಾಗುವಂತೆ ಮಗುವಿನ ತಲೆಯನ್ನು ಬದಿಯಲ್ಲಿಟ್ಟುಕೊಳ್ಳಿ ಮತ್ತು ಮುಖವನ್ನು ಕಾಣಿಸುವಂತೆ ಇಟ್ಟುಕೊಳ್ಳಿ.

•ಆರಾಮದಾಯಕ ಪರಿಸರ: ವಿಶ್ರಾಂತಿಗಾಗಿ ಶಾಂತವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.

•ಆರಾಮದಾಯಕ ಆಸನ: ಹಾಲುಣಿಸುವ ವೇಳೆ ಆರಾಮದಾಯಕ ಆಸನ ಅಥವಾ ಹಾಸಿಗೆಯನ್ನು ಬಳಸಿ.

•ಉಡುಗೆ: ಮಗುವಿಗೆ ಕೇವಲ ಡೈಪರ್ ಹಾಕುವುದು ಸೂಕ್ತ; ತಾಯಿ ಸಡಿಲವಾದ ಉಡುಗೆಯನ್ನು ಧರಿಸಿರಬೇಕು.

•ಉಷ್ಣತೆಯನ್ನು ಕಾಪಾಡಿ: ಮಗು ಮತ್ತು ತಾಯಿಯ ಉಷ್ಣತೆಯನ್ನು ಕಾಪಾಡಿಕೊಳ್ಳು ಬ್ಲಾಂಕೆಟ್ ಅನ್ನು ಬಳಸಿ. ಆದರೆ, ಮಗುವಿನ ತಲೆ ತುಂಬ ಬ್ಲಾಂಕೆಟ್ ಹಾಕಬಾರದು. ಅದಕ್ಕೆ ಸರಾಗವಾಗಿ ಉಸಿರಾಡಲು ತಲೆಯ ಭಾಗದಿಂದ ಕೆಳಗೆ ಬ್ಲಾಂಕೆಟ್ ಹೊದಿಸುವುದು ಉತ್ತಮ.

•ಎಚ್ಚರಿಕೆಯಿಂದ ನಿರ್ವಹಣೆ ಮಾಡಿ: ಸ್ತನ್ಯಪಾನ ಮಾಡುವ ಸಂದರ್ಭದಲ್ಲಿ ಮಗುವಿನ ಸ್ಥಾನೀಕರಣ ಮತ್ತು ಉಸಿರಾಟದ ಕ್ರಮದ ಬಗ್ಗೆ ನಿಗಾ ವಹಿಸಿ.

•ನೈರ್ಮಲ್ಯ: ತಾಯಿಯ ಎದೆಯನ್ನು ಸ್ವಚ್ಛವಾಗಿಡಿ ಮತ್ತು ಸುವಾಸನೆ ಮುಕ್ತವಾಗಿರಿಸಿ ಹಾಗೂ ಮಗುವನ್ನು ಮುಟ್ಟುವ ಮುನ್ನ ಕೈಗಳನ್ನು ತೊಳೆಯಿರಿ.

•ಬೆಂಬಲ ಪಡೆದುಕೊಳ್ಳಿ: ಅಗತ್ಯವಿದ್ದರೆ ಇತರರ ನೆರವು ಪಡೆದುಕೊಳ್ಳಿ.

•ಕ್ರಮೇಣ ಹೆಚ್ಚಳ: ಅಲ್ಪ ಕಾಲದ ಸ್ತನ್ಯಪಾನದಿಂದ ಆರಂಭಿಸಿ ಕ್ರಮೇಣ ಆ ಅವಧಿಯನ್ನು ಹೆಚ್ಚಿಸಿಕೊಳ್ಳಿ.

•ವೈದ್ಯಕೀಯ ಸಲಹೆ ಪಡೆಯಿರಿ: ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಶಿಶುಗಳಿಗೆ ವೈದ್ಯಕೀಯ ಪರಿಸ್ಥಿತಿಗಳು ಅಥವಾ ಉಪಕರಣಗಳನ್ನು ಪಡೆದುಕೊಳ್ಳುವ ಬಗ್ಗೆ ವೈದ್ಯರಿಂದ ಸಲಹೆ ಪಡೆದುಕೊಳ್ಳಿ.

ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯದ ಮೂಲಾಧಾರವಾದ ಚರ್ಮದಿಂದ ಚರ್ಮಕ್ಕೆ ಸಂಪರ್ಕವು ಸ್ತನ್ಯಪಾನದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುತ್ತದೆ. ಈ ನಿಕಟ ಅಭ್ಯಾಸವು ಆರಂಭಿಕ ಸ್ತನ್ಯಪಾನದ ಆರಂಭವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಹಾರದ ಫಲಿತಾಂಶಗಳನ್ನು ಗಣನೀಯವಾಗಿ ಸುಧಾರಣೆ ಮಾಡುತ್ತದೆ. ಚೀಪುವುದು ಮತ್ತು ಹಾಲುಣಿಸುವಿಕೆಯನ್ನು ಹೆಚ್ಚಿಸುತ್ತದೆ, ಹಾಲು ಉತ್ಪಾದನೆ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ, ಆಹಾರದ ಮಾದರಿಗಳನ್ನು ನಿಯಂತ್ರಿಸುತ್ತದೆ. ಅಲ್ಲದೇ, ತಾಯಿ ಮತ್ತು ಮಗುವಿನ ನಡುವಿನ ಭಾವನಾತ್ಮಕ ಬಂಧವನ್ನು ಬಲಪಡಿಸುತ್ತದೆ ಮತ್ತು ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಸಮರ್ಥವಾಗಿ ಹೆಚ್ಚಿಸುತ್ತದೆ. ಇಂತಹ ಪೋಷಣೆಯ ನಿಕಟತೆಯು ಯಶಸ್ವಿಯಾಗಿ ಸ್ತನ್ಯಪಾನಕ್ಕೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ತಾಯಿ ಮತ್ತು ಮಗುವಿಗೆ ಧನಾತ್ಮಕವಾದ ಮತ್ತು ಹಾಲನ್ನು ಪೂರೈಸುವುದು ಸೇರಿದಂತೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ.

ಡಾ. ಪ್ರತಾಪ್ ಚಂದ್ರ, ಕನ್ಸಲ್ಟೆಂಟ್- ಪೀಡಿಯಾಟ್ರಿಶಿಯನ್ ಅಂಡ್ ನಿಯೋನ್ಯಾಟೋಲಾಜಿಸ್ಟ್, ಮದರ್ ಹುಡ್ ಹಾಸ್ಪಿಟಲ್ಸ್, ಬೆಂಗಳೂರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+