Cheating: ವಿವಾಹಿತ ವ್ಯಕ್ತಿ ತನ್ನ ಹೆಂಡತಿಗೆ ಏಕೆ ಮೋಸ ಮಾಡುತ್ತಾನೆ...? ಪ್ರಮುಖ ಕಾರಣಗಳು ಇಲ್ಲಿವೆ
ಮೋಸ ಮಾಡುವುದು, ಮೋಸ ಹೋಗುವುದು ಇತ್ತೀಚೆಗೆ ತೀರಾ ಸಾಮಾನ್ಯ ಎನ್ನುವಂತಾಗಿದೆ. ಇಬ್ಬರು ಆಳವಾದ ಪ್ರೀತಿಯಲ್ಲಿ ಬೆರೆತು ಬದುಕನ್ನು ಒಟ್ಟಿಗೆ ಕಳೆಯುವ ಭರವಸೆ ಮೇಲೆ ಒಂದಾಗಿರುತ್ತಾರೆ. ಆದರೆ, ಕೆಲವೇ ವರ್ಷಗಳಲ್ಲಿ ಅಥವಾ ತಿಂಗಳುಗಳಲ್ಲಿ ಆ ಸಂಬಂಧದ ಜೊತೆಯಲ್ಲಿಯೇ ಬೇರೆ ಸಂಬಂಧಗಳ ಕಡೆ ಮುಖ ಮಾಡಿರುತ್ತಾರೆ.
ಕೈ ಹಿಡಿದು ಬಂದ ಮಡದಿಯನ್ನು ಬಿಟ್ಟು ಅನೇಕ ಗಂಡಸರು ಬೇರೊಬ್ಬರ ಕಡೆ ಆಕರ್ಷಿತರಾಗುತ್ತಾರೆ. ಬೇರೆಡೆಗಿನ ಬಂಧ ಕೇವಲ ದೈಹಿಕವಾಗಿರಬೇಕು ಎಂದೇನಿಲ್ಲ. ಕೆಲವೊಮ್ಮೆ ಭಾವನಾತ್ಮಕವಾಗಿಯೂ ಇರಬಹುದು. ಇದನ್ನು ಕೂಡ ಮೋಸ ಎಂದೇ ತಿಳಿಯಬಹುದು. ಲೈಂಗಿಕ ಬಯಕೆ, ಅನ್ಯೋನ್ಯತೆಯ ಸಮಸ್ಯೆಗಳು ಮತ್ತು ಮೆಚ್ಚುಗೆಯ ಕೊರತೆ ಸೇರಿದಂತೆ ಅನೇಕ ಕಾರಣಗಳಿವೆ. ಏಕೆ ವಿವಾಹಿತ ಪುರುಷರು ಮೋಸ ಮಾಡುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಯುವ ಪ್ರಯತ್ನ ಮಾಡಲಾಗಿದೆ.

ವಿವಾಹಿತ ಪುರುಷರು ಮೋಸ ಮಾಡಲು ಕಾರಣಗಳು
1. ಮಾಜಿ ಪ್ರೇಯಸಿಯೊಂದಿಗೆ ಸಂಬಂಧ
ಕೆಲವೊಮ್ಮೆ ದಾಂಪತ್ಯದಲ್ಲಿ ಸಣ್ಣ ಸಣ್ಣ ಬಿರುಕುಗಳು ಬಮದಾಗ ಗಮಡಸರು ತಮ್ಮ ಮಾಜಿ ಪ್ರೇಯಸಿಯ ನೆನಪಿನಲ್ಲಿ ಇದ್ದು ಬಿಡುತ್ತಾರೆ. ಮತ್ತೆ ಅವರ ಜೊತೆಗೆ ಸಂಬಂಧ ಮುಮದುವರೆಸುವ ಬಗ್ಗೆ ಯೋಚಿಸುತ್ತಾರೆ. ಲೈಂಗಿಕ ಬಯಕೆ ಅಥವಾ ಭಾವನಾತ್ಮಕ ಸಂಪರ್ಕಕ್ಕಾಗಿ ಪುರುಷರು ಈ ವಿವಾಹೇತರ ಸಂಬಂಧವನ್ನು ಮುಂದುವರಿಸಬಹುದು.
2. ಭಾವನಾತ್ಮಕ ಸಂಪರ್ಕ ಕಡಿತ
ಮಹಿಳೆಯರಂತೆ, ಪುರುಷರಿಗೂ ಕೂಡ ತಮ್ಮ ಹೆಂಡತಿಯೊಂದಿಗೆ ಗಟ್ಟಿಯಾದ ಭಾವನಾತ್ಮಕ ಸಂಪರ್ಕದ ಅಗತ್ಯವಿರುತ್ತದೆ. ಆದರೆ, ಅದು ಜೀವನದ ದೈನಂದಿನ ಒತ್ತಡದ ಸಮಯದಲ್ಲಿ ಎಲ್ಲೋ ಕಳೆದುಹೋಗಬಹುದು. ಕೆಲವೊಮ್ಮೆ, ಎದುರು ಬದುರು ಕುಳಿತು ಮಾತನಾಡುವುದು ಇಲ್ಲ. ಇಬ್ಬರು ತಮ್ಮ ತಮ್ಮ ಪರ್ಸನಲ್ ಲೈಫ್ ಜೊತೆಗೆ ಬ್ಯಸಿಯಾಗಿರುತ್ತಾರೆ. ಈ ವೇಳೆ ಪುರುಷರು ಇಂತಹ ಒಂದು ಭಾವನಾತ್ಮಕ ಸಂಬಂಧಕ್ಕಾಗಿ ಹಾತೊರೆಯುತ್ತಾರೆ.
3. ಎಲ್ಲದರಲ್ಲೂ ಪರಿಪೂರ್ಣತೆ ಬಯಸುವುದು
ಸಾಮಾನ್ಯವಾಗಿ ಗಂಡಸರು ಮಾಡುವ ತಪ್ಪು ಎಂದರೆ ತನ್ನ ಹೆಂಡತಿ ಎಲ್ಲಾ ವಿಷಯಗಳಲ್ಲಿಯೂ ಪರಿಪಕ್ವತೆ ಹೊಂದಿರಬೇಕು ಇಲ್ಲ ಪರಿಪೂರ್ಣವಾಗಿರಬೇಕು ಎಂಬುದು. ಯಾವುದೇ ದೌರ್ಬಲ್ಯ ಆಕೆಯಲ್ಲಿರಬಾರದು ಎಂದೇ ಬಯಸುತ್ತಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಫಿಟ್ ಆಗಿ ಇರಬೇಕು ಎಂದುಕೊಳ್ಳುತ್ತಾರೆ. ಆದರೆ, ಅವರಿಗಿರುವ ಒತ್ತಡದ ಬಗ್ಗೆ ಚಿಂತೆ ಮಾಡುವುದೇ ಇಲ್ಲ. ಇಂತಹ ಪರಿಪೂರ್ಣತೆ ಹೆಂಡತಿಯಲ್ಲಿ ಸಿಗದೆ ಹೋದರೆ ಬೇರೆ ಕಡೆ ಹುಡುಕಲು ಆರಂಭಿಸುತ್ತಾರೆ.
4. ಸೇಡು ತೀರಿಸಿಕೊಳ್ಳಲು ಮೋಸ!
ಒಬ್ಬ ಸಂಗಾತಿಯು ಇನ್ನೊಬ್ಬರನ್ನು ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ನೋಯಿಸಿದರೆ ಮದುವೆಯ ಬುವನ್ನೇ ಅಲ್ಲಾಡಿಸಿದಂತೆ. ಪತಿ ದೈಹಿಕ ಹಿಂಸೆಗೆ ಬಲಿಯಾಗಬಹುದು ಅಥವಾ ಹೆಂಡತಿಯ ಮಾತಿನಿಂದ ಭಾವನಾತ್ಮಕವಾಗಿ ಹಿಂಸೆ ಅನುಭವಿಸಬಹುದು. ಈ ಎರಡೂ ಸಂದರ್ಭಗಳಲ್ಲಿ, ಪುರುಷರು ತಮ್ಮ ಹೆಂಡತಿ ಮೇಲೆ ಸೇಡು ತೀರಿಸಿಕೊಳ್ಳಲು ಸೂಕ್ತವಾದ ಮಾರ್ಗವೆಂದರೆ ಮತ್ತೊಬ್ಬರ ಕಡೆ ಓಡುವುದು ಎಂದುಕೊಂಡು ಮೋಸ ಮಾಡಲು ಬಯಸುತ್ತಾರೆ.
5. ಪೂರ್ಣಗೊಳ್ಳದ ಅಗತ್ಯತೆಗಳು
ಕೆಲವು ಪುರುಷರು ತಮ್ಮ ವೈವಾಹಿಕ ಸಂಬಂಧದಲ್ಲಿ ಭಾವೋದ್ರೇಕದ ಕೊರತೆ ಅಥವಾ ಬಹುಶಃ ಸಂಪರ್ಕದ ಕೊರತೆಯನ್ನು ಅನುಭವಿಸಬಹುದು. ಅನೇಕ ಕಾರಣಗಳಿಂದ ಅದನ್ನು ಬಹಿರಂಗವಾಗಿ ಮಾತನಾಡಲು ಹೆದರುತ್ತಾರೆ. ಆದರೆ, ತಮ್ಮ ಅಗತ್ಯತೆಗಳು ತೀರದೆ ಹೋದ ಸಂದರ್ಭದಲ್ಲಿ ದಾಂಪತ್ಯ ದ್ರೋಹಕ್ಕೆ ತಿರುಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
6. ದೂರವಾಗಲು ಸುಲಭ ಮಾರ್ಗ!
ಪುರುಷರು ಸ್ವಇಚ್ಛೆಯಿಂದ ಮದುವೆಯನ್ನು ಕೊನೆಗೊಳಿಸಲು ಬಯಸಿದಾಗ, ಅವರು ಮೋಸ ಮಾಡುವುದನ್ನು ಹೆಚ್ಚು ಮಾಡುತ್ತಾರೆ. ವಿವಾಹಿತ ಪುರುಷರು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ತಮ್ಮ ಹೆಂಡತಿಯಿಂದ ದೂರವಾಗಲು ಆರಂಭಿಸುತ್ತಾನೆ. ಇದಕ್ಕೆ ಆತ ತಮ್ಮ ದಾಂಪತ್ಯದಲ್ಲಿ ಬೇಸರಗೊಂಡಿರಬಹುದು ಅಥವಾ ಇನ್ನು ಮುಂದೆ ಅವರೊಂದಿಗೆ ಇರಬಾರದು ಎಂಬ ಬಯಕೆ ಕೂಡ ಕಾರಣವಾಗಿರಬಹುದು.

7. ಸಂಬಂಧದ ಅಭದ್ರತೆಗಳು
ಮದುವೆಯು ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳ ಜೀವನವನ್ನು ಒಂದು ಮಾಡುತ್ತದೆ. ಆದರೆ ಇದರಲ್ಲಿ ಗಂಡ ಹೆಚ್ಚು ಸುಂದರವಾಗಿದ್ದು ಅಥವಾ ಹೆಂಡತಿ ಸುಂದರವಾಗಿರುವುದು, ಇಬ್ಬರಲ್ಲಿ ಒಬ್ಬರು ಹಣವಂತರಾಗಿರುವುದು ಸೇರಿದಂತೆ ಹಲವು ಭೌತಿಕ ವಿಷಯಗಳು ಇಬ್ಬರ ನಡುವೆ ಅಭದ್ರತೆ ತಂದೊಡ್ಡುತ್ತವೆ. ಆಗ ಪುರುಷರು ತಮ್ಮ ಅಭದ್ರತೆಯನ್ನು ತೊಡೆದುಹಾಕಲು ಬೇರೆ ಸಂಬಂಧಕ್ಕೆ ಮೊರೆ ಹೋಗುತ್ತಾರೆ.
8. ಅತಿಯಾದ ಲೈಂಗಿಕತೆ (Hypersexuality)
ಹೈಪರ್ಸೆಕ್ಸುವಾಲಿಟಿ ಅಥವಾ ಲೈಂಗಿಕ ವ್ಯಸನವು ಹಲವಾರು ಪುರುಷರು ತಮ್ಮ ಹೆಂಡತಿಗೆ ಮೋಸ ಮಾಡಲು ಸಾಮಾನ್ಯ ಕಾರಣವಾಗಿದೆ. ಅಂತಹ ಪುರುಷರು ಲೈಂಗಿಕತೆಯ ಬಗ್ಗೆ ಅತೃಪ್ತರಾಗುತ್ತಾರೆ. ಮದುವೆಯ ಹೊರಗೆ ಅನೇಕ ಲೈಂಗಿಕ ಪಾಲುದಾರರನ್ನು ಹೊಂದುವಂತೆ ಮಾಡುತ್ತದೆ. ಅವರ ಲೈಂಗಿಕ ತೃಪ್ತಿಯನ್ನು ಪೂರೈಸುವ ಅವರ ಬಯಕೆಯು ತಾರ್ಕಿಕ ಚಿಂತನೆಯನ್ನು ಮೀರಿಸುತ್ತದೆ. ಡ್ರಗ್ಸ್ ಮತ್ತು ಆಲ್ಕೋಹಾಲ್ ನಂತಹ ಇತರ ವ್ಯಸನಗಳು ಈ ಚಟವನ್ನು ಮತ್ತಷ್ಟು ಪ್ರಚೋದಿಸುತ್ತವೆ.
9. ಗರ್ಭಧಾರಣೆ ಅಥವಾ ನವಜಾತ ಶಿಶುಗಳು
ಗರ್ಭಾವಸ್ಥೆ ಮತ್ತು ಹೆರಿಗೆ ಸಮಯದಲ್ಲಿ ಹೆಂಡತಿಗೆ ಅತಿ ಹೆಚ್ಚು ಗಂಡಂದಿರು ಮೋಸ ಮಾಡುತ್ತಾರೆ. ಮಹಿಳೆಗೆ ತನ್ನ ಸಂಗಾತಿಯ ಅಗತ್ಯವಿರುವ ಈ ಅವಧಿಯಲ್ಲಿ ಮಹಿಳೆಯರು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ದುರ್ಬಲರಾಗಿರುತ್ತಾರೆ. ಆದರೆ ಪುರುಷರಿಗೆ ಮಾತ್ರ ಮಹಿಳೆ ತನ್ನ ಅಗತ್ಯತೆಗಳನ್ನು ಪೂರೈಸುತ್ತಿಲ್ಲ ಎಂಬ ಕೋಪದಲ್ಲಿರುತ್ತಾರೆ. ಹೀಗಾಗಿ ತಮ್ಮ ಹೆಂಡತಿಯಿಂದ ದೂರ ಸರಿಯುತ್ತಾರೆ.
10. ಪ್ರಬುದ್ಧತೆಯ ಕೊರತೆ
ಸಮಸಾರ ಎಂದ ಮೇಲೆ ಜಗಳಗಳು ಸಾಮಾನ್ಯ. ಒಂದು ಸಮಯದಲ್ಲಿ ಈ ಜಗಳಗಳು ಯಾವುದೇ ಉಪಯೋಗವಿಲ್ಲ,ಮನಸ್ಸು ಹಾಳು ಮಾಡಿಕೊಂಡರೆ ಸಂಬಂಧ ಹಾಳಾಗುತ್ತದೆ ಎಂಬ ಪ್ರಬುದ್ಧತೆ ಕಳೆದುಕೊಂಡಾಗಲು ಮೋಸ ಮಾಡಲು ಮನಸ್ಸು ದಾರಿ ತೋರುತ್ತದೆ. ಮನಸ್ಸಿನ ಪ್ರಬುದ್ಧತೆಯ ಕೊರತೆಯಿರುವ ವಿವಾಹಿತ ಪುರುಷರು ತಮ್ಮ ಪತ್ನಿ ಜೊತೆ ಕುಳಿತು ಸಮಸ್ಯೆಗಳನ್ನು ಪರಿಹರಿಸುವುದಕ್ಕಿಂತ ಹೆಚ್ಚಾಗಿ ಮೋಸಕ್ಕೆ ಕೈ ಚಾಚುತ್ತಾರೆ.
ತಮ್ಮ ಪತ್ನಿಗೆ ಮೋಸ ಮಾಡುವ ಮುನ್ನ ವಿವಾಹಿತ ವ್ಯಕ್ತಿಯಾಗಿದ್ದರೆ, ಪರಿಣಾಮಗಳ ಬಗ್ಗೆ ಎಚ್ಚರಿಕೆಯಿಂದ ಯೋಚಿಸಬೇಕು. ಮೋಸವು ನಿಮ್ಮ ಮದುವೆ, ನಿಮ್ಮ ಮಕ್ಕಳು ಮತ್ತು ನಿಮ್ಮ ಗೌರವದ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ. ಇದು ಸಂಬಂಧಗಳು ಹಾಳಾಗಲು ಕಾರಣವಾಗಿ, ನಿಮ್ಮ ಹೆಂಡತಿ ಮತ್ತು ಮಕ್ಕಳು ನಿಮ್ಮ ಮೇಲೆ ಇಟ್ಟ ನಂಬಿಕೆಯನ್ನು ಮುರಿಯಬಹುದು. ನಿಮ್ಮ ಆರೋಗ್ಯಕರ ಸಂಬಂಧವನ್ನು ಹಾಳುಮಾಡಬಹುದು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications