White Biryani: ಹೈದರಾಬಾದ್ ಸ್ಟೈಲ್ ವೈಟ್ ಬಿರಿಯಾನಿ ಮಾಡುವುದು ತುಂಬಾ ಸಿಂಪಲ್
ಬಿರಿಯಾನಿ ಎಂದರೆ ನಾನ್‌ವೆಜ್ ಪ್ರಿಯರಿಗೆ ಪಂಚಪ್ರಾಣ. ಮಾರುಕಟ್ಟೆಯಲ್ಲೂ ಹಲವು ಮಾದರಿಯ ಬಿರಿಯಾನಿಗಳು ಬಂದಿವೆ. ಅದರಲ್ಲಿ ಹೈದರಾಬಾದ್‌ನ ವೈಟ್ ಬಿರಿಯಾನಿ ಸಹ ಒಂದು. ಹೈದರಾಬಾದ್‌ನ ಈ ಬಿರಿಯಾನಿ ಮಾಡುವುದಕ್ಕೆ ನಿಮಗೆ ಐದರಿಂದ ಆರು ಐಟಂಗಳು ಇದ್ದರೆ ಸಾಕು.
ತುಂಬಾ ಸಿಂಪಲ್ ಆಗಿ ನೀವು ಮನೆಯಲ್ಲೇ ವೈಟ್ ಬಿರಿಯಾನಿ ಮಾಡಿಕೊಳ್ಳಬಹುದು. ಚಿಕನ್ ಗ್ರೇವಿ ಅಥವಾ ಕರಿಯೊಂದಿಗೆ ಸವಿಯುವುದಕ್ಕೆ ಈ ವೈಟ್‌ಬಿರಿಯಾನಿ ಅದ್ಭುತವಾಗಿರುತ್ತೆ. ಇಲ್ಲವೇ ಮೊಸರು ಬಜ್ಜಿಯೊಂದಿಗೂ ನೀವು ಈ ಬಿರಿಯಾನಿ ತಿನ್ನಬಹುದು.

ವೈಟ್ ಬಿರಿಯಾನಿಗೆ ಬೇಕಾಗುವ ಸಾಮಗ್ರಿಗಳು: ಮೊದಲೇ ಹೇಳಿದಂತೆ ಐದಾರು ಪದಾರ್ಥಗಳಿದ್ದರೆ ಸಾಕು ನೀವು ವೈಟ್ ಬಿರಿಯಾನಿಯನ್ನು ಮಾಡಬಹುದು. ಇದಕ್ಕೆ ಬೇಕಾಗುವ ಸಾಮಗ್ರಿಗಳ ವಿವರ ನೋಡುವುದಾದರೆ. ಅರ್ಧಕೆಜಿ ಚಿಕನ್, ಅಕ್ಕಿ, ಎರಡರಿಂದ ಮೂರು ಈರುಳ್ಳಿ, ಮೆಣಸಿನಕಾಯಿ, ಸೊಂಪು, ಕಾಳು ಮೆಣಸು, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಬಿರಿಯಾನಿ ಎಲೆ, ಏಲಕ್ಕಿ, ಚಕ್ಕೆ- ಲವಂಗ, ಕಸ್ತೂರಿ ಮೇಥಿ, ನಿಂಬೆ ಹಣ್ಣು,ಕೊತ್ತಂಬರಿ ಸೊಪ್ಪು, ಮೊಸರು ಹಾಗೂ ರುಚಿಕೆ ತಕ್ಕಷ್ಟು ಉಪ್ಪು.
ವೈಟ್ ಬಿರಿಯಾನಿ ಮಾಡುವ ವಿಧಾನ: ಈರುಳ್ಳಿ, ಮೆಣಸಿನಕಾಯಿ, ಚಕ್ಕೆ- ಲವಂಗ, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಕಾಳು ಮೆಣಸು, ಏಲಕ್ಕಿಯನ್ನು ಮಿಕ್ರಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ತೊಳೆದ ಚಿಕನ್‌ಗೆ ಸ್ವಲ್ಪ ಮೊಸರು, ಉಪ್ಪು ಹಾಗೂ ಈಗಾಗಲೇ ಮಿಕ್ರಿಯಲ್ಲಿ ಹಾಕಿ ಮಿಕ್ಸ್ ಮಾಡಿಕೊಂಡಿರುವ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 10ರಿಂದ 15 ನಿಮಿಷ ಬಿಡಿ.
ಆ ಮೇಲೆ ಕುಕ್ಕರ್‌ನಲ್ಲಿ ತುಪ್ಪ ಹಾಕಿ ಈರುಳ್ಳಿಯನ್ನು ಚೆನ್ನಾಗಿ ಕೆಂಪು ಬಣ್ಣ ಬರುವವೆರೆ ಉರಿದುಕೊಳ್ಳಿ, ಆ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು, ಕಸ್ತೂರಿ ಮೇಥಿ, ಚಕ್ಕೆ -ಲವಂಗ ಹಾಕಿಕೊಳ್ಳಿ. ಇದಕ್ಕೆ ಈಗಾಗಲೇ ಮಿಶ್ರಣ ಮಾಡಿ ಇಟ್ಟುಕೊಂಡಿರುವ ಚಿಕನ್ ಹಾಗೂ ಮಸಾಲೆಯನ್ನು ಸೇರಿಸಿ. ಇದೆಲ್ಲ ಒಂದು ಹಂತಕ್ಕೆ ನೀರು ಬಿಟ್ಟ ಮೇಲೆ ತೊಳೆದಿರುವ ಅಕ್ಕಿ, ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನಿಂಬೆ ಹಣ್ಣಿನ ರಸ ಹಾಕಿ ಎರಡರಿಂದ ಮೂರು ವಿಶಲ್ ಬಿಡಿ ಬಿಸಿ ಬಿಸಿ ವೈಟ್ ಬಿರಿಯಾನಿ ಸವಿಯಲು ಸಿದ್ಧವಾಗುತ್ತೆ.
ಮಸಾಲೆ ಇಲ್ಲದ ಲೈಟ್ ಬಿರಿಯಾನಿ
ವೈಟ್ ಬಿರಿಯಾನಿ ಎನ್ನುವುದು ಹೆಚ್ಚು ಮಸಾಲೆ ಇಲ್ಲದೆ ಮಾಡುವ ಬಿರಿಯಾನಿ ಆಗಿದೆ. ಹೀಗಾಗಿ, ಇದು ತುಂಬಾ ಲೈಟ್ ಆಗಿರುತ್ತೆ ಮಕ್ಕಳಿಗೂ ಈ ಬಿರಿಯಾನಿ ಇಷ್ಟವಾಗುತ್ತೆ. ರಾತ್ರಿ ಸಮಯದಲ್ಲಿ ಬಿರಿಯಾನಿ ಸವಿಯಬೇಕು ಆದರೆ, ಹೆಚ್ಚು ಮಸಾಲೆ ಹಾಕುವುದು ಬೇಡ ಎಂದರೆ ನೀವು ಈ ಬಿರಿಯಾನಿಯನ್ನು ಮಾಡಬಹುದು.
ಇದರೊಂದಿಗೆ ರುಚಿಯಾದ ಗ್ರೇವಿ ಬೇಕಾದರೆ ಅದನ್ನು ಖಾರವಾಗಿ ಮಾಡಿಕೊಳ್ಳಬಹುದು. ಬಿರಿಯಾನಿಯಲ್ಲಿ ಮಸಾಲೆ ಕಡಿಮೆ ಇರುವುದರಿಂದ ಹೆವಿ ಫುಡ್ ಅನಿಸಲ್ಲ. ಚಿಕನ್ ಗ್ರೇವಿ ಇಲ್ಲದಿದ್ದರೆ ಮೊಸರು ಬಜ್ಜಿ ಇಲ್ಲವೇ ಈರುಳ್ಳಿಯೊಂದಿಗೂ ವೈಟ್ ಬಿರಿಯಾನಿ ಹೆಚ್ಚು ಟೇಸ್ಟಿ ಆಗಿರುತ್ತೆ.












Click it and Unblock the Notifications