"ಚುಂಬನ"ದಿಂದ ಸಿಗುವ ಲಾಭಗಳೇನು?-ವೈದ್ಯರ ಸಲಹೆಗಳು ಹೀಗಿವೆ
ಸಾಮಾನ್ಯವಾಗಿ ಕಾಲ ಬದಲಾದಂತೆಲ್ಲ ಜನರು ಕೂಡ ಆ ಬದಲಾವಣಿಗೆ ತಕ್ಕಂತೆ ತಮ್ಮನ್ನು ತಾವು ತೊಡಗಿಸುಕೊಳ್ಳುತ್ತಾರೆ. ಇನ್ನು ಜೀವನದಲ್ಲಿ ಪ್ರಿತಿ ತುಂಬಾ ಮುಖ್ಯವಾಗಿದೆ. ಇದನ್ನು ವ್ಯಕ್ತಪಡಿಸಲು ಸುಮಾರು ದಾರಿಗಳಿವೆ. ಅದರಲ್ಲೂ ಚುಂಬನವು ಅತ್ಯಂತ ಪ್ರಮುಖವಾದದ್ದಾಗಿದ್ದು, ಇದು ಪರಿಣಿತ ವೈದ್ಯರ ಪ್ರಕಾರ, ದಂತಪತಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವಾಗಿದೆ. ಹಾಗಾದರೆ ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚುಂಬನ ಅಂದರೆ ಸಾಕು ಬಹುತೇಕ ಮಂದಿ ತಪ್ಪಾಗಿ ಪರಿಗಣಿಸುತ್ತಾರೆ. ಹಾಗೂ ಬೇರೆ ಬೇರೆ ಕೆಟ್ಟ ಅರ್ಥಗಳನ್ನು ಕೊಡುವವರೂ ಇದ್ದಾರೆ. ಆದರೆ ಇದರಿಂದ ಏನೆಲ್ಲಾ ಪ್ರಯೋಜನೆಗಳಿವೆ ಎಂದು ನೀವು ತಿಳಿಯಲೇಬೇಕಾದ ಪ್ರಮುಖ ಅಂಶಗಳು ಇಲ್ಲಿವೆ ನೋಡಿ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ: ಮನಸ್ಸು ಒತ್ತಡದಲ್ಲಿರುವಂತಹ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ (ಪ್ರಿಯಕರ, ಪ್ರೇಯಸ್ಸಿ, ದಂಪತಿ) ಚುಂಬನ ಮಾಡುವುದು ಉತ್ತಮವಾಗಿದೆ. ಚುಂಬಿಸುವುದರಿಂದ ನಿಮ್ಮ ಹೃದಯ ಬಡಿತವನ್ನು ಆರೋಗ್ಯಕರ ರೀತಿಯಲ್ಲಿ ಪುನರುಜ್ಜೀವನಗೊಳಿಸುತ್ತದೆ. ಅದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಡೆಮಿರ್ಜಿಯನ್ ಹೇಳಿದ್ದಾರೆ ಅಂತಾ ಸಿಎನ್‌ಎನ್‌ನಲ್ಲಿ ವರದಿಯಾಗಿದೆ. ಅಲ್ಲದೆ ಇದು ನಿಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತದೆ. ಆಗ ರಕ್ತವು ನಿಮ್ಮ ಎಲ್ಲಾ ಪ್ರಮುಖ ಅಂಗಗಳಿಗೆ ತಲುಪುತ್ತದೆ ಎಂದಿದ್ದಾರೆ.
ತಲೆನೋವು ನಿವಾರಣೆ: ನಿಮಗೆ ತಲೆನೋವು ಅಥವಾ ಮುಟ್ಟಿನ ಸೆಳೆತ ಇದ್ದರೆ ಚುಂಬನವು ಅದ್ಭುತವಾದ ಮಾರ್ಗವಾಗಿದೆ ಎಂದು ಡೆಮಿರ್ಜಿಯನ್ ಹೇಳುತ್ತಾರೆ. ಇದರಿಂದ ಉಂಟಾಗುವ ರಕ್ತನಾಳದ ವಿಸ್ತರಣೆಯು ನಿಜವಾಗಿಯೂ ನಿಮ್ಮ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಹೆಚ್ಚು ಲಾಲಾರಸ ಉತ್ಪತ್ತಿಗೆ ಸಹಕಾರಿ: ಸಾಮಾನ್ಯವಾಗಿ ಚುಂಬನದ ಸಂದರ್ಭದಲ್ಲಿ ನಿಮ್ಮ ಬಾಯಿಯಲ್ಲಿ ಹೆಚ್ಚು ಲಾಲಾರಸ ಉದ್ಪತ್ತಿಯಾಗುತ್ತದೆ. ಅಲ್ಲದೇ ಇದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಲಿದೆ ಎಂದು ಡೆಮಿರ್ಜಿಯನ್ ಹೇಳುತ್ತಾರೆ. ಇದು ನಿಮ್ಮ ಹಲ್ಲುಗಳ ಮೇಲಿನ ಇರು ಆಹಾರ ಪದಾರ್ಥಗಳ ಅಂಶಗಳು ತೊಲಗಲು ಸಹಾಯ ಮಾಡುತ್ತದೆ. ಇದರಿಂದ ನೀವು ಬಾಯಲ್ಲಿ ನೀರು ಹಾಕಿ ಗ್ಲಾಂರ್ಗಿಂಗ್ ಮಾಡುವುದು ಕೂಡ ತಪ್ಪಿದಂತಾಗುತ್ತದೆ, ಲಾಲಾರಸವು ಉಳಿದಂತಾಗುತ್ತದೆ.
ಒತ್ತಡವನ್ನು ತಪ್ಪಿಸುತ್ತದೆ: ಒಂದು ವೇಳೆ ನೀವು ಕಚೇರಿ ಕೆಲಸ ಅಥವಾ ಇನ್ನಿತರೆ ಒತ್ತಡಕ್ಕೊಳಗಾಗುತ್ತಿದ್ದರೆ , ನಿಮಗೆ ಸ್ವಲ್ಪ ಸಮಯಗಳ ಕಾಲ ನಿಮ್ಮ ಪ್ರೀತಿ ಪಾತ್ರರೊಂದಿಗೆ ಅಂದರೆ (ಪ್ರೇಯಸಿ, ಪ್ರಿಯಕರ, ದಂಪತಿ) ಜೊತೆಗೆ ಚುಂಬಿಸುವುದು ಅಗತ್ಯವಾಗಿದೆ ಎಂದು ಡೆಮಿರ್ಜಿಯನ್ ಹೇಳುತ್ತಾರೆ. ಬಳಿಕ ನಿಮ್ಮನ್ನು ಶಾಂತತೆಯತ್ತ ಕೊಂಡೊಯ್ಯುತ್ತದೆ. ಅಲ್ಲದೆ ಮಿದುಳಿನ ಮೇಲೆ ಬೀರುವ ಒತ್ತಡ ಪ್ರಭಾವವನ್ನು ತಪ್ಪಿಸುತ್ತದೆ.
ಸ್ವಾಭಿಮಾನವನ್ನು ಹೆಚ್ಚಿಸುತ್ತದೆ: ಕೆಲಸಕ್ಕೆ ಹೊರಡುವ ಮೊದಲು ತಮ್ಮ ಹೆಂಡತಿಯರಿಂದ ಒಂದು ಮುತ್ತು ಪಡೆದ ಪುರುಷರು ಹೆಚ್ಚು ಹಣವನ್ನು ಗಳಿಸುತ್ತಾರೆ ಎಂದು ಜರ್ಮನ್ ಅಧ್ಯಯನವೊಂದು ಹೇಳುತ್ತಿದೆ. ಗಂಡನು ತನ್ನ ಮನೆಯನ್ನು ಸಂತೋಷದಿಂದ ತೊರೆದರೆ, ಕೆಲಸದಲ್ಲಿ ಹೆಚ್ಚು ಉತ್ಸುಕನಾಗಿರುತ್ತಾನೆ ಎಂದು ಈ ಅಧ್ಯಯನ ಹೇಳುತ್ತದೆ.
ಏಕೆಂದರೆ ಅವನು ಭಾವನಾತ್ಮಕವಾಗಿ ತೊಂದರೆ ಅನುಭವಿಸುವುದಿಲ್ಲ. ಆದ್ದರಿಂದ ಅವನು ಹೆಚ್ಚು ಹಣವನ್ನು ಗಳಿಸುತ್ತಾನೆ ಎಂದು ಡೆಮಿರ್ಜಿಯನ್ ಹೇಳಿದ್ದಾರೆ. ಈ ಮೂಲಕ ಚುಂಬನವು ನಿಮ್ಮ ಸ್ವಾಭಿಮಾನ, ಪ್ರೀತಿ ಮತ್ತು ಸಂಪರ್ಕದ ಭಾವನೆಯೊಂದಿಗೆ ಬೆಸೆದಿರುತ್ತದೆ.
ಸೌಂದರ್ಯ ಕಾಪಾಡಲು ಸಹಕಾರಿ: ಡೆಮಿರ್ಜಿಯನ್ ಪ್ರಕಾರ, ಆಳವಾದ ಚುಂಬನವು ಕುತ್ತಿಗೆ ಮತ್ತು ದವಡೆಯ ಭಾಗವನ್ನು ಸೌಂದರ್ಯಭರಿತವಾಗಿ ಇರಿಸಲು ಸಹಾಯ ಮಾಡುತ್ತದೆ. ಇದು ವಯಸ್ಸಾದವರಂತೆ ಕಾಣುವವರಿಗೆ ಉತ್ತಮ ಮಾರ್ಗವಾಗಿದೆ. ಅಲ್ಲದೆ ನಿಮ್ಮ ಬಾಯಿಯು ಹಲವಾರು ಮುಖದ ಸ್ನಾಯುಗಳನ್ನು ಹೊಂದಿದೆ. ಚುಂಬನದಲ್ಲಿ ತೊಡಗಿಸಿಕೊಂಡಾಗ, ನೀವು ಅವುಗಳನ್ನು ಬಿಗಿಗೊಳಿಸಬಹುದು ಎಂದು ತಿಳಿಸಿದ್ದಾರೆ.
ಉತ್ತಮ ಹೊಂದಾಣಿಕೆಗೆ ಮಾರ್ಗ: ಬೆತ್ತಲೆ ಮತ್ತು ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವ ಮೊದಲು ಲೈಂಗಿಕ ಹೊಂದಾಣಿಕೆಗಾಗಿ ಸಂಭಾವ್ಯ ಲೈಫ್ ಪಾರ್ಟ್ನರ್ ಆಗುವವರನ್ನು ಪರೀಕ್ಷಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ ಎಂದು ಡೆಮಿರ್ಜಿಯನ್ ಹೇಳುತ್ತಾರೆ. ಆದರೆ ನಿಮ್ಮ ಮೊದಲ ಬಾರಿ ಲಿಪ್‌ಲಾಕ್ ಉತ್ತಮ ಎನಿಸಿದರೆ ಮಾತ್ರ ನಿಮ್ಮ ನಡುವಿನ ಬಾಂದವ್ಯ ಉತ್ತಮವಾಗಿದೆ ಹಾಗೂ ಇವರೇ ಸರಿಯಾದ ಜೋಡಿ ಎನ್ನುವ ಸಂಕೇತವನ್ನು ಸೂಚಿಸುತ್ತದೆ ಅಂತಲೂ ತಿಳಿಸಿದ್ದಾರೆ. ಇನ್ನು ಕೆಲವೊಮ್ಮೆ ಮೊದಲ ಚುಂಬನದ ಸಮಯದಲ್ಲಿ ಮುಜುಗರಕ್ಕೊಳಗಾಗುತ್ತಾರೆ ಎಂದು ಅವರು ಹೇಳುತ್ತಾರೆ.












Click it and Unblock the Notifications