Vastu Tips for Peacock Feather: ಮನೆಯ ಈ ದಿಕ್ಕಿಗೆ ನವಿಲು ಗರಿ ಇಟ್ಟರೆ ಅದೃಷ್ಟ!
ನಾವೆಲ್ಲರೂ ನಮ್ಮ ಮನೆಗಳನ್ನು ಸುಂದರವಾದ ವಸ್ತುಗಳಿಂದ ಅಲಂಕರಿಸುವುದನ್ನು ಆನಂದಿಸುತ್ತೇವೆ. ಮನೆಯಲ್ಲಿ ಹೂವಿನ ಕುಂಡ ಇಡುವುದು, ನಾನಾ ಬಗೆಯ ಪೇಂಟಿಂಗ್ ಮಾಡಿಸುವುದು, ಇನ್ನಿತರ ಅಲಂಕಾರಿಕ ವಸ್ತುಗಳನ್ನು ಮನೆಯಲ್ಲಿ ಇಡುವುದು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಹೀಗೆ ಮನೆಯಲ್ಲಿಡುವ ಅನೇಕ ಅಲಂಕಾರಿಕ ವಸ್ತುಗಳಲ್ಲಿ ನವಿಲು ಗರಿ ಕೂಡ ಒಂದಾಗಿದೆ. ಅನೇಕ ಜನರು ನವಿಲು ಗರಿಗಳನ್ನು ಮನೆಯ ಸೌಂದರ್ಯವನ್ನು ಹೆಚ್ಚಿಸಲು ಬಳಸುತ್ತಾರೆ. ಯಾಕೆಂದರೆ ನವಿಲು ಗರಿಯಷ್ಟು ಸುಂದರವಾದ ಗರಿ ಮತ್ತೊಂದಿಲ್ಲ.

ಈ ನವಿಲು ಗರಿಗಳು ಒಮ್ಮೆಗೆ ಸಾವಿರ ಬಣ್ಣಗಳನ್ನು ಪ್ರದರ್ಶಿಸುತ್ತವೆ. ಈ ನವಿಲು ಗರಿಯನ್ನು ಕೃಷ್ಣ ದೇವನೂ ತಲೆಯ ಮೇಲೆ ಇಟ್ಟುಕೊಂಡಿದ್ದಾನೆ. ಅಲ್ಲದೆ ಮನೆಯಲ್ಲಿ ನವಿಲು ಗರಿಗಳಿದ್ದರೆ ಹಲವಾರು ಲಾಭಗಳಿವೆ ಎನ್ನುತ್ತಾರೆ ವಾಸ್ತು ತಜ್ಞರು.
ಮನೆಯಲ್ಲಿ ನವಿಲು ಗರಿಯನ್ನು ಇಟ್ಟುಕೊಳ್ಳುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ವಾಸ್ತು ಪ್ರಕಾರ, ನವಿಲನ್ನು ಮನೆಯ ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದರಿಂದ ಅನೇಕ ಅದ್ಭುತವಾದ ಪ್ರಯೋಜನಗಳನ್ನು ಪಡೆಯಬಹುದು. ಈಗ ವಾಸ್ತು ಪ್ರಕಾರ ನವಿಲುಗರಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಇಡಬೇಕು? ಹಾಗೆ ನವಿಲು ಗರಿ ಇಟ್ಟುಕೊಂಡು ದೋಷ ನಿವಾರಣೆ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ಸಂಪತ್ತು ಹೆಚ್ಚಳ
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕಿನ ಅಧಿಪತಿಗಳೆಂದರೆ ಸೂರ್ಯ ಮತ್ತು ಇಂದ್ರ. ಹೀಗಾಗಿ ಮನೆಯ ಪೂರ್ವ ದಿಕ್ಕಿನಲ್ಲಿ ನವಿಲು ಗರಿಯನ್ನು ಇಡುವುದು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಅದನ್ನು ವಾಯುವ್ಯ ದಿಕ್ಕಿನಲ್ಲೂ ಇರಿಸಬಹುದು. ಈ ದಿಕ್ಕಿನಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಹೆಚ್ಚಿನ ಸಂಪತ್ತು ಪಡೆಯಬಹುದು. ಇದರಿಂದ ಯಾವುದೇ ಹಣಕಾಸಿನ ಸಮಸ್ಯೆಗಳು ಇರುವುದಿಲ್ಲ.

ಮನೆಗಳಲ್ಲಿ ಸಮೃದ್ಧಿ
ವಾಯುವ್ಯ ದಿಕ್ಕಿನಲ್ಲಿ ನವಿಲು ಗರಿಗಳನ್ನು ಇಡುವುದು ಮಂಗಳಕರವೆಂದು ಪರಿಗಣಿಸದಿದ್ದರೂ, ಜಾತಕದಲ್ಲಿ ರಾಹು ಇದ್ದರೆ, ಈ ದಿಕ್ಕನ್ನು ಅವರಿಗೆ ಅನುಕೂಲಕರವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ವಾಸ್ತು ಶಾಸ್ತ್ರದ ಪ್ರಕಾರ ರಾಹುವಿನ ದೋಷ ನಿವಾರಣೆಯಾಗುತ್ತದೆ.
ವಾಸ್ತು ದೋಷ ನಿವಾರಣೆ
ಮನೆಯಲ್ಲಿ ನವಿಲು ಗರಿಯನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ 8 ನವಿಲು ಗರಿಗಳನ್ನು ನೇತು ಹಾಕಿದರೆ ಅದಕ್ಕೆ ಸೂಕ್ತವಾದ ಸ್ಥಳ ಈಶಾನ್ಯ ಗೋಡೆ. ಹೀಗೆ ಮಾಡುವುದರಿಂದ ಇದು ವಾಸ್ತು ದೋಷವನ್ನು ದೂರ ಮಾಡುತ್ತದೆ. ಆದರೆ ಗರಿಗಳನ್ನು ಎಲ್ಲರಿಗೂ ಕಾಣುವಂತೆ ಇಡಬೇಕು. ಇದು ಮನೆಗೆ ಧನಾತ್ಮಕತೆಯನ್ನು ಸಹ ಹೆಚ್ಚಿಸುತ್ತದೆ.
ನಿಮ್ಮ ಅಧ್ಯಯನದ ಮೇಜಿನ ಮೇಲೆ ನವಿಲು ಗರಿ
ವಾಸ್ತು ಶಾಸ್ತ್ರದ ಪ್ರಕಾರ, ನವಿಲು ಗರಿಗಳು ಅಧ್ಯಯನದಲ್ಲಿ ಉತ್ತುಂಗಕ್ಕೇರಲು ಸಹಾಯ ಮಾಡುತ್ತವೆ. ಇದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಪುಸ್ತಕಗಳಲ್ಲಿ ಅಥವಾ ಸ್ಟಡಿ ಟೇಬಲ್‌ನಲ್ಲಿ ನವಿಲು ಗರಿಯನ್ನು ಇಟ್ಟುಕೊಳ್ಳಬೇಕು. ಇದರಿಂದ ಮನಸ್ಸು ಅಧ್ಯಯನದಲ್ಲಿ ಹೆಚ್ಚು ತೊಡಗಿಕೊಳ್ಳುತ್ತದೆ. ಬೇರೆ ಗಮನ ಹರಿಯುವುದಿಲ್ಲ ಎಂದು ನಂಬಲಾಗುತ್ತದೆ.

ಮನೆಯ ಸಮಸ್ಯೆಗಳಿಗೆ ಪರಿಹಾರ
ಮನೆಯಲ್ಲಿರುವ ಜನರು ಹೆಚ್ಚಾಗಿ ಅಲಂಕಾರಕ್ಕಾಗಿ ನವಿಲು ಗರಿಗಳನ್ನು ಬಳಸುತ್ತಾರೆ. ಈ ನವಿಲು ಗರಿಗಳು ಮನೆಯಲ್ಲಿ ಕೆಟ್ಟ ಶಕುನಗಳನ್ನು ದೂರವಿಡುತ್ತವೆ. ಅಲ್ಲದೆ ಮನೆಯಲ್ಲಿ ಒತ್ತಡವನ್ನು ನಿವಾರಿಸುತ್ತದೆ. ಬದಲಾವಣೆಯನ್ನು ವೀಕ್ಷಿಸಲು ನಿಮ್ಮ ಮಲಗುವ ಕೋಣೆಯ ಪೂರ್ವ ಗೋಡೆಯ ಮೇಲೆ ನವಿಲು ಗರಿಯನ್ನು ನೇತುಹಾಕಿ. ಇದರಿಂದ ಮನೆಯ ಸಮಸ್ಯೆಗಳು ದೂರವಾಗುತ್ತವೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications